More

  ಸಾವು-ಬದುಕಿನ ಮಧ್ಯೆ ನಟಿ ಹೋರಾಟ; ಚಿಕಿತ್ಸೆಗೆ ಹಣ ಸಹಾಯ ಮಾಡಿ ಎಂದು ಮನವಿ ಮಾಡಿದ ಗೆಳತಿ

  ಕೇರಳ: ಮಲಯಾಳಂ ಮತ್ತು ತಮಿಳು ಚಿತ್ರರಂಗದ ಜನಪ್ರಿಯ ನಟಿ ಅರುಂಧತಿ ನಾಯರ್ ರಸ್ತೆ ಅಪಘಾತಕ್ಕೀಡಾಗಿದ್ದಾರೆ. ಈ ಘಟನೆಯಲ್ಲಿ ನಟಿ ಅರುಂಧತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೇರಳದ ತಿರುವನಂತಪುರಂನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ ಎನ್ನಲಾಗಿದೆ.

  ಅರುಂಧತಿ ಮತ್ತು ಅವರ ಸಹೋದರ ಸ್ಕೂಟಿಯಲ್ಲಿ ಮನೆಗೆ ಹೋಗುತ್ತಿದ್ದಾಗ ಕೋವಲಂ ಬಳಿ ವೇಗವಾಗಿ ಬಂದ ಕಾರು ಅವರ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಅರುಂಧತಿ ಅವರು ಪ್ರಸ್ತುತ ತಿರುವನಂತಪುರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಧಾರಾವಾಹಿ ನಟಿ ಗೋಪಿಕಾ ಅನಿಲ್ ಅವರು ವೈದ್ಯಕೀಯ ಚಿಕಿತ್ಸೆ ನೀಡಲು ಆರ್ಥಿಕ ನೆರವು ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡುತ್ತಿದ್ದಾರೆ.

  ‘ನನ್ನ ಸ್ನೇಹಿತೆ ಅರುಂಧತಿ ನಿನ್ನೆ ಅಪಘಾತಕ್ಕೀಡಾದಳು. ಆಕೆಯ ಸ್ಥಿತಿ ಗಂಭೀರವಾಗಿದೆ. ಸದ್ಯ ಆಕೆ ವೆಂಟಿಲೇಟರ್‌ನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಆಕೆಯ ಕುಟುಂಬಕ್ಕೆ ದಿನನಿತ್ಯದ ಆಸ್ಪತ್ರೆ ವೆಚ್ಚ ಭರಿಸಲು ಸಾಧ್ಯವಾಗುತ್ತಿರಲಿಲ್ಲ. ನಾವು ನಮ್ಮ ಕೈಲಾದಷ್ಟು ಮಾಡುತ್ತಿದ್ದೇವೆ. ಆದರೆ ಇದೀಗ ಆಕೆಯ ಚಿಕಿತ್ಸೆಗೆ ಇದು ಸಾಕಾಗುವುದಿಲ್ಲ. ನೀವು ಸಹಾಯ ಮಾಡಿದರೆ ಆಕೆಗೆ ಉತ್ತಮ ಚಿಕಿತ್ಸೆ ನೀಡಲು ಸಹಾಯವಾಗುತ್ತದೆ’ ಎಂದು ಇನ್​ಸ್ಟಾ ಪೋಸ್ಟ್‌ನಲ್ಲಿ ಬ್ಯಾಂಕ್ ಮತ್ತು ಫೋನ್ ಸಂಖ್ಯೆ ವಿವರಗಳನ್ನು ಸೇರಿಸಲಾಗಿದೆ.

  ನಟಿ ಅರುಂಧತಿ ನಾಯರ್ ತಮಿಳು ಚಲನಚಿತ್ರ ‘ಪೊಂಗಿ ಏಲು ಮನೋಹರ (2014)’ ಮೂಲಕ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. 2018 ರಲ್ಲಿ ಮಲಯಾಳಂನಲ್ಲಿ ಬಿಡುಗಡೆಯಾದ ‘ಒಟ್ಟಕೋರು ಕಾಮುಕನ್’ ಮೂಲಕ ಮಲಯಾಳಂನಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಆದರೆ ವಿಜಯ್ ಆಂಟೋನಿ ಜೊತೆ ಸೈತಾನ್ ಚಿತ್ರದ ಮೂಲಕ ಉತ್ತಮ ಜನಪ್ರಿಯತೆಯನ್ನು ಗಳಿಸಿದರು. ಕಳೆದ ವರ್ಷ ಬಿಡುಗಡೆಯಾದ ಐರಾಮ್ ಪೊರ್ಕಾಸುಕಲ್ ಎಂಬ ಚಿತ್ರದಲ್ಲಿ ಕೊನೆಯದಾಗಿ ನಟಿಸಿದ್ದರು.

  ಗಾಯಕಿ ಮಂಗ್ಲಿ ಕಾರಿಗೆ ಭೀಕರ ಅಪಘಾತ; ಮೂವರು ಆಸ್ಪತ್ರೆಗೆ ಶಿಫ್ಟ್​​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts