More

  ಅವಕಾಶ ಕೊಡಿ ಅಂದ್ರೆ ಬಟ್ಟೆ ಬಿಚ್ಚು, ಮಚ್ಚೆ ಇದ್ಯಾ… ಚಿತ್ರರಂಗದ ಕರಾಳ ಸತ್ಯ ಬಿಚ್ಚಿಟ್ಟ ನಟಿ ಆಮನಿ!

  ಆಂಧ್ರಪ್ರದೇಶ: ಒಂದು ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ಹೆಚ್ಚು ಚಾಲ್ತಿಯಲ್ಲಿದ್ದ ನಟಿಮಣಿಯರ ಪೈಕಿ ನಟಿ ಆಮನಿ ಕೂಡ ಒಬ್ಬರು. ಹಲವಾರು ಸಿನಿಮಾಗಳಲ್ಲಿ ನಟಿಸಿದ ಇವರು, ಮದುವೆಯ ನಂತರ ಚಿತ್ರರಂಗದಿಂದ ದೂರ ಉಳಿದರು. ಅದಾದ ಕೆಲವು ವರ್ಷಗಳ ಬಳಿಕ ಟಾಲಿವುಡ್‌ಗೆ ಮರಳಿದ್ದು, ಒಂದಷ್ಟು ಧಾರವಾಹಿಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿದರು. ಒಂದು ಕಾಲಘಟ್ಟದಲ್ಲಿ ಅವಕಾಶ ಅರಸಿ ಬಂದಾಗ ತಾನು ಎದುರಿಸಿದ ಕಾಸ್ಟಿಂಗ್​ ಕೌಚ್​ ಅನುಭವವನ್ನು ನಟಿ ಬಟಾಬಯಲು ಮಾಡಿದ್ದಾರೆ.

  ಇದನ್ನೂ ಓದಿ: ಯಶಸ್ವಿ ಯುವ ಉದ್ಯಮಿ ಸಿ.ಎಸ್​. ವೇಣುಗೋಪಾಲ್​​; ಕಟ್ಟಡ ವಿನ್ಯಾದಲ್ಲಿ ನೈಪುಣ್ಯ​

  ಚಿತ್ರರಂಗದಲ್ಲಿ ನಟಿಮಣಿಯರಿಗೆ ಕಾಸ್ಟಿಂಗ್ ಕೌಚ್​ ಅನುಭವವೇನು ಹೊಸದಲ್ಲ. ಈ ಹಿಂದಿನಿಂದಲೂ ಇದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಕೆಲವರು ಇಂತಹ ಕಹಿ ಅನುಭವವಗಳನ್ನು ಹೇಳಿಕೊಳ್ಳದೆ, ತಮ್ಮಲ್ಲೇ ಮುಚ್ಚಿಟ್ಟುಕೊಂಡು ಬದುಕು ಸಾಗಿಸುತ್ತಾರೆ. ಆದರೆ, ಕೆಲವೇ ಕೆಲವು ನಟಿಯರು ಮಾತ್ರ ಇದನ್ನು ಬಹಿರಂಗವಾಗಿ ಹಂಚಿಕೊಳ್ಳುವ ಮೂಲಕ ಹೆಸರಾಂತ ನಿರ್ದೇಶಕ ಮತ್ತು ನಿರ್ಮಾಪಕರ ಅಸಲಿ ಮುಖವನ್ನು ಕಳಚಿಡುತ್ತಾರೆ.

  ಇದೇ ರೀತಿ ಸಿನಿಮಾಗಳಲ್ಲಿ ನಟಿಸುವ ಹಂಬಲದಿಂದ ತೆಲುಗು ಚಿತ್ರರಂಗಕ್ಕೆ ಬಂದ ಹಿರಿಯ ನಟಿ ಆಮನಿ, ಅವಕಾಶ ಕೊಡಿ ಎಂದು ಕೇಳಲು ಹೋದಾಗ ಕಾಸ್ಟಿಂಗ್ ಕೌಚ್ ಎಂಬ ಕೆಟ್ಟ ಜಗತ್ತಿನ ಅನುಭವ ಪಡೆದರು. ಇದನ್ನು ಸಾರ್ವಜನಿಕವಾಗಿಯೂ ನಟಿ ಬಹಿರಂಗಪಡಿಸಿದ್ದು, ಕಾಸ್ಟಿಂಗ್ ಕೌಚ್ ನಿನ್ನೆ, ಮೊನ್ನೆಯದಲ್ಲ ಈ ಹಿಂದೆಯಿಂದಲೂ ಇದೆ ಎಂದು ಹೇಳಿದ್ದಾರೆ.

  ಇದನ್ನೂ ಓದಿ: ಶ್ರೀಲೀಲಾ ಜತೆ ನಟಿಸಲು ಸ್ಟಾರ್​ ನಟರಿಗೆ ಚಿಂತೆ! ಇದು ಮುಂದುವರಿದ್ರೆ ‘ಕಿಸ್’​ ಬೆಡಗಿಗೆ ಸಂಕಷ್ಟ

  ಬಹುಭಾಷಾ ತಾರೆ ನಟಿ ಆಮನಿ, ದಕ್ಷಿಣ ಭಾರತದ ಹಲವಾರು ಸಿನಿಮಾಗಳಲ್ಲಿ ನಟಿಸಿ ಮಿಂಚಿದ್ದಾರೆ. “ಇಂಡಸ್ಟ್ರಿಗೆ ಬಂದ ಆರಂಭಿಕ ದಿನಗಳಲ್ಲಿ ಸಿನಿಮಾಗಾಗಿ ನನ್ನ ಶತಾಯಗತಾಯ ಪ್ರಯತ್ನಗಳು ನಡೆಯುತ್ತಿದ್ದವು. ಹೊಸ ಪ್ರೊಡಕ್ಷನ್ ಹೌಸ್‌ಗಳಿಂದ ನನಗೆ ಕರೆಗಳು ಬರುತ್ತಿದ್ದವು, ಮಾತನಾಡಿದರೆ ತಮ್ಮ ಗೆಸ್ಟ್​ ಹೌಸ್​ಗಳಿಗೆ ಒಬ್ಬಂಟಿಯಾಗಿ ಬರಬೇಕು ಎನ್ನುತ್ತಿದ್ದರು. ಮೊದ ಮೊದಲು ಹೀಗೆಲ್ಲಾ ಯಾಕೆ ಹೇಳ್ತಿದ್ದಾರೆ ಎಂಬುದು ತಿಳಿಯುತ್ತಿರಲಿಲ್ಲ” ಎಂದಿದ್ದಾರೆ.

  “ಆಡಿಷನ್ ಕೊಟ್ಟು ಬಂದರೆ, ಕೆಲವು ದಿನಗಳ ಬಳಿಕ ಕರೆಯುತ್ತೇವೆ ಎಂದು ಹೇಳುತ್ತಿದ್ದರು. ಅಸಲಿಗೆ ಅವರ ಉದ್ದೇಶಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇ ಆಗಿತ್ತು. ಪ್ರೊಡಕ್ಷನ್​ ಹೌಸ್​ನಿಂದ ಕರೆ ಮಾಡಿ, ನಿರ್ದೇಶಕರು ನಿಮ್ಮನ್ನು ನೋಡಬೇಕಂತೆ ಬನ್ನಿ ಎಂದು ಹೇಳುವರು. ನನ್ನ ಜತೆಗೆ ತಾಯಿಯನ್ನು ಕೂಡ ಕರೆದುಕೊಂಡು ಬರುತ್ತೇನೆ ಎಂದಾಗ ಬೇಡ, ನೀವೊಬ್ಬರೇ ಬರಬೇಕು” ಎನ್ನುತ್ತಿದ್ದರು.

  ಇದನ್ನೂ ಓದಿ: ದೆಹಲಿಗೆ ತೆರಳುವ ಮುನ್ನ ಬಿಎಸ್ ವೈ‌ ನಿವಾಸದಲ್ಲಿ ಮಹತ್ವದ ಸಭೆ

  “ಅವಕಾಶ ಕೊಡಿ ಅಂದ್ರೆ ಬಟ್ಟೆ ಬಿಚ್ಚು, ಮಚ್ಚೆ ಇದ್ಯಾ ತೋರಿಸು ಎಂದೆಲ್ಲಾ ಹೇಳುತ್ತಿದ್ದರು. ಇದ್ಯಾವುದಕ್ಕೂ ನಾನು ಒಪ್ಪದಿದ್ದಾಗ ನನಗೆ ಅವಕಾಶಗಳು ಸಿಗಲಿಲ್ಲ. ಆ ಸಿನಿಮಾದಲ್ಲಿ ನಟಿಸುವ ಅವಕಾಶ ಕಳ್ಕೊಂಡೆ. ಹೊಸ ಸಂಸ್ಥೆಗಳಿಂದ ಮಾತ್ರ ನನಗೆ ಈ ರೀತಿಯ ಕರೆಗಳು ಬಂದಿವೆ” ಎಂದು ನಟಿ ಬಹಿರಂಗಪಡಿಸಿದ್ದು, ಪ್ರತಿಷ್ಠಿತ ಮತ್ತು ಅನುಭವಿ ನಿರ್ದೇಶಕರು ಮತ್ತು ನಿರ್ಮಾಣ ಸಂಸ್ಥೆಗಳು ಅಂತಹ ಚಟುವಟಿಕೆಗಳಲ್ಲಿ ಎಂದಿಗೂ ತೊಡಗಿಸಿಕೊಂಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.


  ನಟ ಬಾಲಕೃಷ್ಣ, ನಾಗಾರ್ಜುನ, ವಿಜಯಕಾಂತ್ ಮತ್ತು ಮಮ್ಮುಟ್ಟಿ ಅವರಂತಹ ಹಲವು ಸ್ಟಾರ್​ ನಟರ ಜೊತೆ ಆಮನಿ ಕೆಲಸ ಮಾಡಿದ್ದಾರೆ. ತೆಲುಗು ಇಂಡಸ್ಟ್ರಿಯಲ್ಲಿ ತನಗಾದ ಕಾಸ್ಟಿಂಗ್ ಕೌಚ್ ಬಗ್ಗೆ​ ನಟಿ ಗಂಭೀರ ಆರೋಪ ಮಾಡಿದ ಬಳಿಕ ಕೆಲವು ನಟಿಮಣಿಯರು ತಮಗೂ ಇಂತಹದ್ದೇ ಅನುಭವವಾಗಿದೆ ಎಂಬುದನ್ನು ಮುಕ್ತವಾಗಿ ಮಾತನಾಡಲು ಮುಂದಾಗಿದ್ದಾರೆ,(ಏಜೆನ್ಸೀಸ್).

  ಶ್ರೀಲೀಲಾ ಜತೆ ನಟಿಸಲು ಸ್ಟಾರ್​ ನಟರಿಗೆ ಚಿಂತೆ! ಇದು ಮುಂದುವರಿದ್ರೆ ‘ಕಿಸ್’​ ಬೆಡಗಿಗೆ ಸಂಕಷ್ಟ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts