More

    ಅದಾಲತ್‌ನಲ್ಲಿ 989 ಪ್ರಕರಣಗಳ ವಿಲೇವಾರಿ

    ಹೊಳೆನರಸೀಪುರ: ಅಪಘಾತ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬಕ್ಕೆ ವಿಮಾ ಕಂಪನಿಯು 1.10 ಕೋಟಿ ರೂ.ಪರಿಹಾರ ಪಾವತಿಸಿದ್ದು ಇಂತಹ ಪ್ರಕರಣಗಳು ಹೆಚ್ಚು ಇತ್ಯರ್ಥವಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಎಲ್.ಅಮರ್ ಅಭಿಪ್ರಾಯಪಟ್ಟರು.

    ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಲೋಕ ಅದಾಲತ್ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿ ವಕೀಲರ ಪಾತ್ರ ದೊಡ್ಡದಿದೆ. ಅದಾಲತ್‌ನಲ್ಲಿ 1,249 ಪ್ರಕರಣಗಳ ಪೈಕಿ 989 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. 28,58,945 ರೂ.ಪರಿಹಾರ ಪಾವತಿಯಾಗಿದೆ. ಕ್ರಿಮಿನಲ್ ಸಂಯುಕ್ತ ಅಪರಾಧಗಳಲ್ಲಿ 15 ರಲ್ಲಿ 6, ಮೋಟಾರು ಅಪಘಾತಗಳ ಹಕ್ಕುಗಳ ನ್ಯಾಯ ಮಂಡಳಿ ವಿಭಾಗದಲ್ಲಿ 23 ರಲ್ಲಿ 8, ಇತರ ಸಿವಿಲ್ ದಾವೆಗಳ ವಿಭಾಗದಲ್ಲಿ 35 ರಲ್ಲಿ 4 , ಹೆಂಡತಿ, ಮಕ್ಕಳು ಮತ್ತು ಪಾಲಕರ ನಿರ್ವಹಣೆಗಾಗಿ ಪ್ರಕರಣ 10 ರಲ್ಲಿ 1 ಪ್ರಕರಣ ಇತ್ಯರ್ಥಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಸರ್ಕಾರಿ ಅಭಿಯೋಜಕ ಸುನೀಲ್ ರಾಜ್, ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್, ವಕೀಲರಾದ ರವೀಶ್, ಪುರುಷೋತ್ತಮ್, ರಾಮಪ್ರಸನ್ನ, ಉದಯರಂಜನ್, ಅರುಣ್ ಕುಮಾರ್, ಶಿವಮೂರ್ತಿ, ಸವಿತಾ, ಸತೀಶ್, ಜಯಪ್ರಕಾಶ್, ಕೆ.ಆರ್.ಸುನೀಲ್ ಕುಮಾರ್, ಶಶಿಕುಮಾರ್, ಸುನೀಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts