ಸಿಲ್ಕ್ ಸ್ಮಿತಾ ಅಂತಿಮ ದರ್ಶನ ಪಡೆದ ಏಕೈಕ ನಟ ಅರ್ಜುನ್​ ಸರ್ಜಾ!

silk smita
Published on

ಮುಂಬೈ: ದುರಂತಗಳ ಸರಮಾಲೆಯಲ್ಲೇ ಮಿಂದೆದ್ದ ಸೆಕ್ಸ್​ ಬಾಂಬ್​ ಎಂದೇ ಖ್ಯಾತಿ ಪಡೆದಿರುವ ನಟಿ ಸಿಲ್ಕ್​ ಸ್ಮಿತಾ. ಪಡ್ಡೆಹುಡುಗರ ನಿದ್ದೆ ಕೆಡಿಸಿದ್ದ ಈ ನಟಿ ಜೀವನ ಮಾತ್ರ ಕೊನೆಗೆ ಅಂತ್ಯವಾಗಿದ್ದು ದುರಂತವಾಗಿದೆ. ಈಕೆ ಸಾವು ಇಂದಿಗೂ ನಿಗೂಢವಾಗಿದೆ. ಎಲ್ಲರಿಂದ ದೂರವಾದ ಈ ನಟಿ ಅಂತ್ಯಕ್ರೀಯೆಗೆ ಬಂದಿದ್ದು ಸ್ಯಾಂಡಲ್​​ವುಡ್​ನ ಸ್ಟಾರ್​ ನಟರೊಬ್ಬರೆ ಎನ್ನಲಾಗಿದೆ. ಈ ನಟ ಮಾತ್ರ ಯಾಕೆ ಹೋಗಿದ್ದರು ಎನ್ನುವ ಪ್ರಶ್ನಗೆ ಉತ್ತರ ಇಲ್ಲಿದೆ.

ಸಿಲ್ಕ್ ಸ್ಮಿತಾ ಜೀವನದಲ್ಲಿ ಸಿನಿಮಾವನ್ನು ಮೀರಿಸುವ ಕಥೆಯಾಗಿದೆ. ಬಡ ಕುಟುಂಬದಲ್ಲಿ ಜನಿಸಿದ ಈಕೆ ಕುಟುಂಸ್ಥರೆಲ್ಲರನ್ನು ಬಿಟ್ಟು ಕನಿಷ್ಠ ಶಿಕ್ಷಣವೂ ಇಲ್ಲದ ಸಿಲ್ಕ್ ಸ್ಮಿತಾ ಮದ್ರಾಸಿನಲ್ಲಿ ಬದುಕಿನ ಹೋರಾಟ ಆರಂಭಿಸಿದಳು. ಮೇಕಪ್ ಕಲಾವಿದರ ಸಹಾಯಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದಳು. ನಂತರ ಹೀಗೆ ಚಿತ್ರರಂಗದಲ್ಲಿಯೂ ಗುರುತಿಸಿಕೊಂಡು ಬಹುಬೇಡಿಕೆಯ ನಟಿಯಾದರು.

ಅತ್ಯಂತ ಬೇಡಿಕೆಯ ನಟಿಯಾಗಿ ಬೆಳೆದರು. ಸಿಲ್ಕ್ ಸ್ಮಿತಾ ತನ್ನ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಆತ್ಮಹತ್ಯೆ ಮಾಡಿಕೊಂಡಳು. 1996ರಲ್ಲಿ ಸಿಲ್ಕ್ ಸ್ಮಿತಾ ಚೆನ್ನೈನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಕೆ ಸಾವು ಚಿತ್ರರಂಗದಲ್ಲಿ ಒಂದು ದೊಡ್ಡ ಆಘಾತವನ್ನುಂಟು ಮಾಡಿತ್ತು. ಆಕೆಯ ಸಾವು ಇಂದಿಗೂ ನಿಗೂಢವಾಗಿಯೆ ಇದೆ....

ಸಿಲ್ಕ್ ಸ್ಮಿತಾ ಅವರ ಅಂತಿಮ ಸಂಸ್ಕಾರ ಅನಾಥವಾಗಿ ನಡೆದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಆಸ್ಪತ್ರೆಯ ಸಿಬ್ಬಂದಿಯೂ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ. ಸಿಲ್ಕ್ ಸ್ಮಿತಾ ಅವರ ಅಂತ್ಯಕ್ರಿಯೆಯಲ್ಲಿ ಅರ್ಜುನ್ ಸರ್ಜಾ ಮಾತ್ರ ಭಾಗವಹಿಸಿದ್ದರು ಎನ್ನಲಾಗಿತ್ತು.

ಚಲನಚಿತ್ರ ಪತ್ರಕರ್ತ ತೋಟದ ಭಾವನಾರಾಯಣ ಅವರು ಸಂದಶರ್ನವೊಂದರಲ್ಲಿ ಮಾತನಾಡುವಾಗ, ಸಿಲ್ಕ್ ಸ್ಮಿತಾ ಅವರ ಪಾರ್ಥಿವ ಶರೀರವನ್ನು ನೋಡಲು ಮತ್ತು ಅಂತಿಮ ನಮನ ಸಲ್ಲಿಸಲು ಬಂದದ್ದು ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮಾತ್ರ. ಸಿಲ್ಕ್ ಸ್ಮಿತಾ ಅವರು ತಾನು ಸತ್ತರೆ ಬಂದು ನೋಡುತ್ತೀರಾ ಎಂದು ಅರ್ಜುನ್‌ಗೆ ಕೇಳಿದ್ದರು  ಹೀಗಾಗಿ ಅವರು ಬಂದಿದ್ದರು ಎಂದು ಹೇಳಿದ್ದಾರೆ.

ಸುದ್ದಿ ವಾಹಿನಿಯೊಂದರ ವರದಿ ಪ್ರಕಾರ, ಸಿಲ್ಕ್ ಸ್ಮಿತಾ ಆತ್ಮಹತ್ಯೆ ಮಾಡಿಕೊಂಡಾಗ ಅರ್ಜುನ್ ತುಂಬಾ ಭಾವುಕರಾದರು.ಹಾಗೆ ಸಿಲ್ಕ್ ಸ್ಮಿತಾ ಪಾರ್ಥಿವ ಶರೀರಕ್ಕೆ ಅಂತೀಮ ನಮನವನ್ನು ಸಲ್ಲಿಸಿದ್ದರು. ಆದರೆ   ಸಿಲ್ಕ್ ಸ್ಮಿತಾ ಅವರು ತಾನು ಸತ್ತರೆ ಬಂದು ನೋಡುತ್ತೀರಾ ಎಂದು ಕೇಳಿದ್ದರು ಎನ್ನುವ ಹೇಳಿಕೆಯನ್ನು  ಅರ್ಜುನ್ ಸರ್ಜಾ ತಳ್ಳಿಹಾಕಿದರು ಎನ್ನಲಾಗಿದೆ.

ಅದೇನೆ ಇರಲಿ ಖ್ಯಾತ ನಟಿಯಾಗಿ ಮಿಂಚಿದ್ದ ಸಿಲ್ಕ್ ಸ್ಮಿತಾ ರಜನಿಕಾಂತ್, ಚಿರಂಜೀವಿ, ಶಿವಾಜಿ ಗಣೇಶನ್ ಮತ್ತು ಕಮಲ್ ಹಾಸನ್ ಅವರಂತಹ ಅನೇಕ ಸೌತ್ ಸೂಪರ್‌ಸ್ಟಾರ್‌ಗಳು ಯಾವಾಗಲೂ ತಮ್ಮ ಚಲನಚಿತ್ರಗಳಲ್ಲಿ ಕನಿಷ್ಠ ಒಂದು ಹಾಡನ್ನಾದರೂ ಪ್ರದರ್ಶಿಸಲು ಸ್ಮಿತಾ ಅವರನ್ನು ಒತ್ತಾಯಿಸುತ್ತಿದ್ದರು. ಇಂಥಹ ನಟಿಯ ಅಂತ್ಯ ಇಷ್ಟೋಂದು ಕಣ್ಣೀರಿನಿಂದ ಕೂಡಿದ್ದು ಅತ್ಯಂತ ದುಖಃದ ಸಂಗತಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net