ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಮಾಜಿ ದಂಪತಿ; ಮತ್ತೆ ಒಂದಾಗ್ತಾರ ಈ ಸ್ಟಾರ್​ ಕಪಲ್​

Samantha Chaithanya
Published on

ಮುಂಬೈ: ದಕ್ಷಿಣ ಸಿನಿಮಾ ಇಂಡಸ್ಟ್ರಿಯ ದ ಮೋಸ್ಟ್​ ಕ್ಯೂಟೆಸ್ಟ್​ ಕಪಲ್ಸ್​ ಎಂದೇ ಖ್ಯಾತಿ ಪಡೆದಿದ್ದ ಸಮಂತಾ ಹಾಗೂ ನಾಗಚೈತನ್ಯ ದಂಪತಿ ವಿಚ್ಛೇದನ ಪಡೆದು ಎರಡೂವರೆ ವರ್ಷಗಳಾಗುತ್ತ ಬಂದರೂ ಈಗಲೂ ಇವರಿಬ್ಬರು ದೂರಾಗಿರುವ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದು, ಇಬ್ಬರೂ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯೂಸಿಯಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಟಿ ಸಮಂತಾ ನಟನೆಯಿಂದ ಗ್ಯಾಪ್​ ತೆಗೆದುಕೊಂಡಿದ್ದು, ಬಹಳ ದಿನಗಳಿಂದ ಅವರ ನಟನೆಯ ಚಿತ್ರ, ವೆಬ್​ ಸೀರೀಸ್​ ಯಾವುದು ತೆರೆಕಂಡಿಲ್ಲ. ಸಿನಿಮಾಗಳ ಹೊರತಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ಒಂದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಸಮಂತಾ ಹಾಗೂ ನಾಗಚೈತನ್ಯ ಅಮೆಜಾನ್​ ಪ್ರೈಮ್​ನಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ಧ ವೆಬ್​ಸೀರೀಸ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಗ ಚೈತನ್ಯ ನಟಿಸಿದ ‘ಧೂತ’ ವೆಬ್​ ಸಿರೀಸ್​ ಅಮೇಜಾನ್​ ಪ್ರೈಂ ವಿಡಿಯೋದಲ್ಲಿ ಬಿಡುಗಡೆಯಾಗಿ ಸೂಪರ್​ ಹಿಟ್​ ಆಗಿದೆ. ಹಾಗೆಯೇ ಸಮಂತಾ ನಟನೆಯ ‘ದಿ ಫ್ಯಾಮಿಲಿ ಮ್ಯಾನ್​ 2’ ಕೂಡ ಇದೇ ಒಟಿಟಿಯಲ್ಲಿ ಯಶಸ್ವಿ ಶೋ ಎನಿಸಿಕೊಂಡಿದೆ.

ಈಗ ಸಮಂತಾ ನಟಿಸಿರುವ ಸಿಟಾಡೆಲ್​ ಹನಿ ಬನಿ ಕೂಡ ಅಮೇಜಾನ್​ ಪ್ರೈಂ ವಿಡಿಯೋ ಮೂಲಕವೇ ಪ್ರಸಾರಕ್ಕೆ ಸಜ್ಜಾಗುತ್ತಿದೆ. ಇದೀಗ ಅಮೆಜಾನ್​ ಪ್ರೈಂ ಮಾರ್ಚ್​ 19ರಂದು ಮುಂಬೈನಲ್ಲಿ ಸುದ್ದಿಗೋಷ್ಠಿ ಆಯೋಜಿಸಿತ್ತ. ಸಮಂತಾ, ನಾಗ ಚೈತನ್ಯ, ವರುಣ್​ ಧವನ್​ ಮುಂತಾದ ಕಲಾವಿದರು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.

ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಮಂತಾ ಹಾಗೂ ನಾಗಚೈತನ್ಯ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಈ ಇಬ್ಬರು ಒಟ್ಟಾಗಿ ಕಾಣಿಸಿಕೊಂಡಿಲ್ಲ ಎಂದು ತಿಳಿದು ಬಂದಿದೆ. ಇಬ್ಬರ ಫೋಟೋಗಳನ್ನು ಅಕ್ಕ-ಪಕ್ಕ ಇಟ್ಟು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಮಾಡಲಾಗಿದೆ. ಇದನ್ನು ನೋಡಿದ ಅಭಿಮಾನಿಗಳಿಗೆ ಸಂತಸ ವ್ಯಕ್ತಪಡಿಸಿದ್ದು, ಇದೇ ರೀತಿ ಅವರಿಬ್ಬರು ಮತ್ತೊಮ್ಮೆ ಒಂದಾಗಲಿ ಎಂದು ಅಭಿಮಾನಿಗಳು​ ಅಪೇಕ್ಷಿಸುತ್ತಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net