More

    ಯುವಕನಾದ ನನ್ನನ್ನು ಬಲಿಪಶು ಮಾಡಿದರು ಅದೇ ಪರಿಸ್ಥಿತಿ ವೈದ್ಯರಿಗೆ ಆಗಬಾರದು: ನಿಖಿಲ್​ ಕುಮಾರಸ್ವಾಮಿ

    ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಳೆದ ಇಪ್ಪತ್ತು ದಿನಗಳಿಂದ ಕುಕ್ಕರ್ ಸೇರಿದಂತೆ ವಿವಿಧ ಗಿಫ್ಟ್ ಹಂಚಿಕೆ ನಡೆಯುತ್ತಿದೆ. ಆದರೆ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಕಳಂಕ. ಈ ಬಗ್ಗೆ ನಾವು ಆಯೋಗಕ್ಕೆ ದೂರು ಸಲ್ಲಿಸುತ್ತೇವೆ ಎಂದು ಜೆಡಿಎಸ್​ ಯುವ ಘಟಕದ ರಾಜ್ಯಾಧ್ಯಕ ನಿಖಿಲ್​ ಹೇಳಿದರು.

    ರಾಮನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಖಿಲ್​, ರಾಜ್ಯದಲ್ಲಿ ಪಾರದರ್ಶಕವಾಗಿ ಚುನಾವಣೆ ನಡೆಯುತ್ತಿಲ್ಲ. ಅದರಲ್ಲೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಧ್ವಾನ ಆಗಿದೆ. ಗೋದಾಮಿನಲ್ಲಿ ಸೀರೆ ಮತ್ತು ಡ್ರೆಸ್ ಪೀಸ್ ಜಪ್ತಿಯಾಗಿವೆ‌. ಕಳೆದ ಇಪ್ಪತ್ತು ದಿನಗಳಿಂದ ಕುಕ್ಕರ್ ಸೇರಿದಂತೆ ವಿವಿಧ ಗಿಫ್ಟ್ ಹಂಚಿಕೆ ನಡೆಯುತ್ತಿದೆ. ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಜಾಪ್ರಭುತ್ವಕ್ಕೆ ಇದು ಕಳಂಕ. ಚುನಾವಣಾ ಆಯೋಗಕ್ಕೆ ಘಟನೆ ಕುರಿತು ಪ್ರಶ್ನೆ ಮಾಡಬೇಕಿದೆ‌. ಈ ಬಗ್ಗೆ ನಾವು ಆಯೋಗಕ್ಕೆ ದೂರು ಸಲ್ಲಿಸುತ್ತೇವೆ ಎಂದರು.

    ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರನ್ನು ಖರೀದಿ ಮಾಡಲಾಗುತ್ತಿದೆ. ರಾತ್ರಿ ಕಾರ್ಯಕರ್ತರ ಮನೆಗೆ ಹೋಗಿ ಹಣದ ಆಮೀಷ ತೋರಿಸಿ ಕಾಂಗ್ರೆಸ್ ಶಾಲು ಹಾಕುತ್ತಿದ್ದಾರೆ. ಇನ್ನೂ ಎಷ್ಟು ದಿನ ಹಣ ಹಂಚಿ ಚುನಾವಣೆ ಮಾಡುತ್ತಾರೆ. ಕಾರ್ಯಕರ್ತರು ದಿನವಿಡೀ ಎಚ್ಚರಿಕೆಯಿಂದ ಇದ್ದು ಕಾಯುತ್ತಿದ್ದಾರೆ ಎಂದು ಹೇಳಿದರು.

    ಅಭ್ಯರ್ಥಿ ಡಾ. ಮಂಜುನಾಥ್ ಅವರ ಬಗ್ಗೆ ಕಾಂಗ್ರೆಸ್ ಶಾಸಕರು ಲಘುವಾಗಿ ಮಾತನಾಡುತ್ತಾರೆ. ಮಾಗಡಿ ಶಾಸಕ ತೆವಲು ಎನ್ನುತ್ತಾರೆ. ರಾಮನಗರ ಶಾಸಕ, ರಾಜಕೀಯಕ್ಕೆ ಏಕೆ ಬರಬೇಕು ಎನ್ನುತ್ತಾರೆ. ಅವರ ರಾಜಕೀಯ ಯಾವ ರೀತಿ ಇದೆ? ಎಲ್ಲಿ ಹಣವಿಟ್ಟು ರಾಜಕೀಯ ಮಾಡುತಿದ್ದಾರೆ ಎಂಬುದು ನಮಗೆ ಗೊತ್ತಿದೆ. ಇಂತಹ ಮಾತುಗಳಿಂದ ಮಾನಸಿಕವಾಗಿ ಕುಗ್ಗಿಸಲು ಯತ್ನಿಸುತ್ತಿದ್ದಾರೆ. ಆದರೆ,‌ ಇದು ಹೆಚ್ಚು ದಿನ ನಡೆಯದು ಎಂದರು.

    ವಿಧಾನಸಭಾ ಚುನಾವಣೆಯಲ್ಲಿ ನಾನು ಸೋಲಲು ಕ್ಷೇತ್ರದಲ್ಲಿ ರಾತ್ರಿ ವೇಳೆ ಹಂಚಿದ ಗಿಫ್ಟ್ ಕಾರ್ಡ್ ಕಾರಣ. ಮುಗ್ಧ ಜನರಿಗೆ ದಾರಿ ತಪ್ಪಿಸಿ ಮತ ಪಡೆದರು. ಯುವಕನಾದ ನನ್ನನ್ನು ಬಲಿಪಶು ಮಾಡಿದರು. ವೈದ್ಯರಿಗೂ ಇದೇ ಆಗಬಾರದು ಎಂದು ನಾನು ಸುದ್ದಿಗೋಷ್ಠಿ ಮಾಡುತ್ತಿದ್ದೇನೆ. ಸಂಕ್ರಾಂತಿ ಹಬ್ಬದ ಗಿಫ್ಟ್ ಅನ್ನು ಈಗ ಹಂಚಿಕೆ ಮಾಡುತ್ತಿದ್ದಾರೆ. ರಾಜ್ಯ ಆಯೋಗ, ಜಿಲ್ಲಾ ಚುನವಾಣಾಧಿಕಾರಿ ಯಾರ ಒತ್ತಡಕ್ಕೂ ಮಣಿಯದೆ ಕೆಲಸ ಮಾಡಬೇಕು. ಪಾರದರ್ಶಕವಾಗಿ ಕೆಲಸ ಮಾಡಬೇಕು ಎಂದು ನಿಖಿಲ್​ ಒತ್ತಾಯಿಸಿದರು.

    ರಾಮನಗರದಲ್ಲಿ ಅಧಿಕಾರ ದುರುಪಯೋಗ ಆಗುತ್ತಿದೆ. ಕುಮಾರಸ್ವಾಮಿ ಅವರು ನಾಲ್ಕು ಸಲ ಕ್ಷೇತ್ರ ಪ್ರತಿನಿಧಿಸಿದರೂ ಎಂದು ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ. ಕಳೆದ ಸಲ ನಾನು ಬಲಿಯಾದಂತೆ ವೈದ್ಯರು ಆಗಬಾರದು. ನಾವು ಹಣ, ಗಿಫ್ಟ್ ಆಮಿಷ ಒಡ್ಡಲಾರೆ. ದೇವೇಗೌಡರ ಕುಡಿಯಾದ ನನಗೆ ಯಾರೂ ಇದನ್ನು ಹೇಳಿಕೊಟ್ಟಿಲ್ಲ. ನಿನ್ನೆ ಘಟನೆ ಬಗ್ಗೆ ಕೂಲಂಕಷವಾಗಿ ತನಿಖೆ ಆಗಬೇಕು. ಅರೆಸೇನಾಪಡೆ ನಿಯೋಜನೆ ಆಗಬೇಕು ಎಂದು ಆಗ್ರಹಿಸಿದರು.

    ಸೀಟು ಹಂಚಿಕೆ ವಿಳಂಬದಿಂದ ಕಾರ್ಯಕರ್ತರು ಭ್ರಮನಿರಸನಗೊಂಡಿಲ್ಲ. ಇಂದು ಸಂಜೆ ಅದು ಗೊತ್ತಾಗಲಿದೆ. ಮಂಡ್ಯ ಸೇರಿ ಉಳಿದ ಕ್ಷೇತ್ರಗಳ ಬಗ್ಗೆಯೂ ಗೊತ್ತಾಗುತ್ತದೆ. ನಾನು ಅಲ್ಲಿ ನಿಲ್ಲುವ ಪ್ರಶ್ನೆ ಇಲ್ಲ. ನಾನು ಕಾರ್ಯಕರ್ತನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವೆ. ನಾನು ನಿಂತರೆ ಕೇವಲ ಮಂಡ್ಯಕ್ಕೆ ಮಾತ್ರ ಸೀಮಿತವಾಗುವೆ. ಸುಮಲತಾ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ ಎಂದರು.

    3700 ಮೆಟೀರಿಯಲ್ ಜಪ್ತಿಯಾಗಿದೆ. ಇದರ ಮೌಲ್ಯ 14 ಲಕ್ಷ ರೂಪಾಯಿ. ಸೂರತ್ ನಿಂದ ಖರೀದಿ ಮಾಡಲಾಗಿದೆ. ಎನ್.ಎಂ. ಗ್ರಾನೈಟ್ಸ್ ಕಂಪನಿ ಯಾರದ್ದೆಂದು ಎಲ್ಲರಿಗೂ ಗೊತ್ತಿದೆ. ರಾಮನಗರ ಶಾಸಕರು ಕಂಪನಿ ಮೂಲಕ ಖರೀದಿ ಮಾಡಿದ್ದಾರೆ. ಕಾರ್ಯಕರ್ತರು ಗೋದಾಮಿಗೆ ಹೋದಾಗ ಗೋದಾಮು ವ್ಯವಸ್ಥಾಪಕ ಬಿಲ್ ತೋರಿಸಿದ್ದಾರೆ ಎಂದು ನಿಖಿಲ್​ ಹೇಳಿದರು.

    ದಯವಿಟ್ಟು ನನ್ನನ್ನು ಆ ರೀತಿ ಕರೆಯಬೇಡಿ… ಅಭಿಮಾನಿಗಳ ಬಳಿ ವಿರಾಟ್​ ಕೊಹ್ಲಿ ಮನವಿ

    ಸೈನಿಕರನ್ನು ಹುರಿದುಂಬಿಸಲು ನೀಲಿ ತಾರೆ ಮೊರೆ ಹೋದ ಯೂಕ್ರೇನ್​! ಯೋಧರ ಜತೆ ಜೋಸೆಫೀನ್ ಜಾಕ್ಸನ್ ಪೋಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts