More

    ಕೋಟಿಗಟ್ಟಲೆ ಆಸ್ತಿಯಿರುವ ಬಗ್ಗೆ 20 ವರ್ಷಗಳ ಕಾಲ ಮಗನಿಂದ ಮುಚ್ಚಿಟ್ಟ ತಂದೆ…ಸಿನಿಮಾ ಕಥೆಯನ್ನೇ ಮೀರಿಸುವಂತಹ ಕಹಾನಿ!

    ಚೀನಾ: ಚೀನಾದಿಂದ ಕುತೂಹಲಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ಚೀನಾದ ದೊಡ್ಡ ಬ್ರಾಂಡ್ ಮತ್ತು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯ ಮಾಲೀಕರೊಬ್ಬರು 20 ವರ್ಷಗಳ ಕಾಲ ತನ್ನ ಮಗನ ಬಳಿ ತಾವು ಶ್ರೀಮಂತರು ಎಂಬ ಅಂಶವನ್ನು ಮರೆಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ವಿಪರ್ಯಾಸವೆಂದರೆ ಪದವಿ ವ್ಯಾಸಂಗ ಮುಗಿಸಿದ ನಂತರವೇ ಮಗನಿಗೆ ಈ ವಿಷಯ ತಿಳಿದುಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. 

    ಪ್ರಸಿದ್ಧ ತಿಂಡಿ ಬ್ರಾಂಡ್ ನ ಮಾಲೀಕರ ಮಗನಾದ ಜಾಂಗ್ ಝಿಲಾಂಗ್ (24) ಈ ಕುರಿತು ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. “ತನ್ನ ತಂದೆ ದೊಡ್ಡ ಉದ್ಯಮಿ ಎಂದು ಪದವಿಗೆ ಮುಂಚೆ ತಿಳಿದಿರಲಿಲ್ಲ. ಅವರು 20 ವರ್ಷಗಳ ಕಾಲ ಈ ಸಂಗತಿಯನ್ನು ನನ್ನಿಂದ ಮುಚ್ಚಿಟ್ಟರು” ಎಂದು ಹೇಳಿದರು. ಇದಕ್ಕೆ ಕಾರಣವೇನು ಎಂದು ಜಾಂಗ್ ಝಿಲಾಂಗ್​​​​ಗೆ ಕೇಳಿದಾಗ “ನಾನು ಕಷ್ಟಪಟ್ಟು ಕೆಲಸ ಮಾಡಿ ಯಶಸ್ಸು ಗಳಿಸಬೇಕು ಎಂಬುದು ತಂದೆಯ ಆಶಯವಾಗಿತ್ತು” ಎಂದು ಹೇಳಿದರು.

    ಕೋಟಿಗಟ್ಟಲೆ ಆಸ್ತಿಯಿರುವ ಬಗ್ಗೆ 20 ವರ್ಷಗಳ ಕಾಲ ಮಗನಿಂದ ಮುಚ್ಚಿಟ್ಟ ತಂದೆ…ಸಿನಿಮಾ ಕಥೆಯನ್ನೇ ಮೀರಿಸುವಂತಹ ಕಹಾನಿ!

    ಸತ್ಯ ತಿಳಿದ ನಂತರ ಮಗನ ಪ್ರತಿಕ್ರಿಯೆ ಹೀಗಿತ್ತು…
    ತಂದೆ ಸತ್ಯ ಹೇಳಿದ ನಂತರ ಮಗನಿಗೆ ಮೊದಮೊದಲು ನಂಬಲು ಸಾಧ್ಯವಾಗಲಿಲ್ಲ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, 51 ವರ್ಷದ ಜಾಂಗ್ ಸೀನಿಯರ್ ಅವರು ಹುನಾನ್ ಮಸಾಲೆಯುಕ್ತ ಗ್ಲುಟನ್ ಲ್ಯಾಟಿಯೋ ಬ್ರಾಂಡ್ ಮಾಲಾ ಪ್ರಿನ್ಸ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದಾರೆ. ಈ ಬ್ರಾಂಡ್ ಪ್ರತಿ ವರ್ಷ 600 ಮಿಲಿಯನ್ ಯುವಾನ್ ಅಂದರೆ 83 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ಸರಕುಗಳನ್ನು ತಯಾರಿಸುತ್ತದೆ. ಪ್ರಸ್ತುತ ಮಗ ಈಗ ವೃತ್ತಿ ಆರಂಭಿಸಿದ್ದಾನೆ.

    ಬ್ರಾಂಡ್ ಅನ್ನು ಪ್ರಾರಂಭಿಸುವ ಸಮಯದಲ್ಲಿ ಜಾಂಗ್ ಝಿಲಾಂಗ್ ಜನಿಸಿದರು ಎಂದು ಹೇಳಲಾಗುತ್ತಿದೆ. ಜಾಂಗ್ ಝಿಲಾಂಗ್ ಅವರು ಪಿಂಗ್ಜಿಯಾಂಗ್ ಕೌಂಟಿಯಲ್ಲಿ (ಈ ಸ್ಥಳವು ಮಧ್ಯ ಚೀನಾದ ಹುನಾನ್ ಪ್ರಾಂತ್ಯದಲ್ಲಿದೆ) ಅತ್ಯಂತ ಸರಳವಾದ ಫ್ಲಾಟ್‌ನಲ್ಲಿ ಬೆಳೆದೆ ಎಂದು ಹೇಳಿಕೊಂಡಿದ್ದಾರೆ. ಕಂಪನಿ ನಡೆಸಲು ಸಾಲ ಕೂಡ ಮಾಡಲಾಗಿತ್ತು. ಆದರೆ ಈಗ ತನ್ನ ಮಗನಿಗೆ ಸತ್ಯವನ್ನು ಹೇಳಿದ ನಂತರ, ಜಾಂಗ್ ಸೀನಿಯರ್ ಹೊಸ ಮನೆಗೆ ಶಿಫ್ಟ್ ಆಗುತ್ತಿದ್ದಾರೆ. ಅದರ ಬೆಲೆ $ 1.4 ಮಿಲಿಯನ್ ಎಂದು ಹೇಳಲಾಗುತ್ತದೆ. 

    ಕರ್ನಾಟಕದಲ್ಲಿ ತಾಪಮಾನ ತೀವ್ರ ಏರಿಕೆ; 2-3 ಡಿ.ಸೆ. ಹೆಚ್ಚಳ ಸಾಧ್ಯತೆ, ಹವಾಮಾನ ಇಲಾಖೆ ಮುನ್ನೆಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts