More

    ಮೋದಿ ಆಡಳಿತದ 10 ವರ್ಷಗಳಲ್ಲಿ ಸೂಚ್ಯಂಕ 3 ಪಟ್ಟು ಹೆಚ್ಚಳ: ಹೂಡಿಕೆದಾರರ ಸಂಪತ್ತು 5 ಪಟ್ಟು ವೃದ್ಧಿ

    ಮುಂಬೈ: ಲೋಕಸಭೆಗೆ ಚುನಾವಣೆಗೆ ಮತದಾನ ಪ್ರಾರಂಭವಾಗುವ ಕೆಲವು ದಿನಗಳ ಮೊದಲು 2024 ರ ಏಪ್ರಿಲ್ 09 ರಂದು ಇಂಟ್ರಾ ಡೇ ವಹಿವಾಟಿನಲ್ಲಿ ಬಿಎಸ್​ಇ ಸೂಚ್ಯಂಕ 75,000 ಮೈಲಿಗಲ್ಲನ್ನು ದಾಟಿತು, ಅಲ್ಲದೆ, ಬುಧವಾರದ ಮುಕ್ತಾಯದಂದು 75,000 ಗಡಿಯನ್ನು ದಾಟಿ 75,038.15ಕ್ಕೆ ತಲುಪುವ ಮೂಲಕ ದಾಖಲೆ ಬರೆಯಿತು. 2014ರ ಲೋಕಸಭೆ ಚುನಾವಣೆಯ ಫಲಿತಾಂಶಗಳು ಪ್ರಕಟವಾದ ದಿನವಾದ ಮೇ 16, 2014 ರಂದು ಅಂದಾಜು 10 ವರ್ಷಗಳ ಹಿಂದೆ ಈ ಸೂಚ್ಯಂಕವು 25,000 ಮೈಲಿಗಲ್ಲನ್ನು ದಾಟಿತ್ತು ಎಂಬುದು ಗಮನಾರ್ಹವಾಗಿದೆ.

    ಭಾರತೀಯ ಷೇರು ಮಾರುಕಟ್ಟೆಯ ಬೆಂಚ್‌ಮಾರ್ಕ್ ಸೂಚ್ಯಂಕವಾದ ಬಿಎಸ್‌ಇ ಸೆನ್ಸೆಕ್ಸ್ ಮಂಗಳವಾರ ಇಂಟ್ರಾ ಡೇ ವಹಿವಾಟಿನಲ್ಲಿ ಮೊದಲ ಬಾರಿಗೆ 75,000 ಅಂಕಗಳನ್ನು ದಾಟಿತು. ನಂತರ ದಿನದ ವಹಿವಾಟನ್ನು 74,683.70 ಕ್ಕೆ ಕೊನೆಗೊಳಿಸಿತು, ಆದರೆ, ಬುಧವಾರದ ಅಂತ್ಯಕ್ಕೆ 75,038.15ಕ್ಕೆ ಅಂಕಗಳನ್ನು ತಲುಪಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದ ದಾಖಲೆ ಬರೆಯಿತು.

    ಇದರೊಂದಿಗೆ ಬಿಎಸ್‌ಇ ಮಾರುಕಟ್ಟೆ ಮೌಲ್ಯವೂ 400 ಲಕ್ಷ ಕೋಟಿ ರೂಪಾಯಿ ಮುಟ್ಟಿತು. ಕಳೆದ 10 ವರ್ಷಗಳಲ್ಲಿ, ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಬಿಎಸ್‌ಇಯ ಮಾರುಕಟ್ಟೆ ಬಂಡವಾಳದಿಂದ ಅಳತೆ ಮಾಡುವುದಾದರೆ, ಹೂಡಿಕೆದಾರರ ಸಂಪತ್ತು ಐದು ಪಟ್ಟು ಹೆಚ್ಚಾಗಿದೆ.

    ಕುತೂಹಲಕಾರಿಯಾಗಿ ಸಂಗತಿ ಎಂದರೆ, ಕಳೆದ ಒಂದು ವರ್ಷದಲ್ಲಿ ಸೂಚ್ಯಂಕ ಅಂದಾಜು 25 ಪ್ರತಿಶತದಷ್ಟು ಏರಿಕೆಯಾಗಿದೆ. ಏಪ್ರಿಲ್ 21, 2023 ರಂದು ಇದು ತಲುಪಿದ 52 ವಾರಗಳ ಕನಿಷ್ಠ ಅಂಕಗಳ 59,412.81 ಮಟ್ಟದಿಂದ 26 ರಷ್ಟು ಹೆಚ್ಚಾಗಿದೆ.

     

    ತಿಂಗಳಾಂತ್ಯದಲ್ಲಿ ಪ್ರಧಾನಿ ಮೋದಿ ಜತೆ ಎಲಾನ್ ಮಸ್ಕ್ ಚರ್ಚೆ: ಟೆಸ್ಲಾ ಮುಖ್ಯಸ್ಥ ಭಾರತಕ್ಕೆ ಭೇಟಿ ನೀಡುತ್ತಿರುವುದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts