More

    ಪ್ರಲ್ಹಾದ ಜೋಶಿ ಕಾರ್ಯಕ್ಷಮತೆಗೆ ಮೋದಿ ಮೆಚ್ಚುಗೆ

    ಹುಬ್ಬಳ್ಳಿ : ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಧಾರವಾಡ ಲೋಕಸಬಾ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಜೋಶಿ ಬಗ್ಗೆ ಕೇತ್ರದ ಜನರು ವ್ಯಕ್ತಪಡಿಸುವ ಅಭಿಪ್ರಾಯಗಳು, ಕಾರ್ಯಕ್ಷಮತೆಯನ್ನು ಮೆಚ್ಚಿ ಪ್ರಧಾನಿ ನರೇಂದ್ರ ಮೋದಿ ಅವರು ಜೋಶೀ ಅವರಿಗೆ ಪತ್ರ ಬರೆದಿದ್ದಾರೆ.

    ಪ್ರತಿ ಮನೆಯ ಜನರ ಪ್ರೀತಿಗೆ ಪಾತ್ರರಾಗಿದ್ದೀರಿ. ಕ್ಷೇತ್ರದಲ್ಲಿ ನಿಮ್ಮ ಪರಿಶ್ರಮದಿಂದ ಹೊಸ ದಾಖಲೆಗಳು ಸೃಷ್ಟಿಯಾಗುತ್ತದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಕೇತ್ರದ ಜನ ನಿಮ್ಮಲ್ಲಿ ನನ್ನನ್ನು ಕಾಣುತ್ತಿದ್ದಾರೆ. ಮತದಾರರ ದೃಷ್ಟಿಯಲ್ಲಿ ನೀವೂ ಕೂಡ ಒಬ್ಬ ಮೋದಿ ಎಂದು ಪ್ರಲ್ಹಾದ ಜೋಶಿ ಅವರನ್ನು ಉದ್ದೇಶಿಸಿ ಪತ್ರದಲ್ಲಿ ಹೇಳಿದ್ದಾರೆ.

    ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 10 ವರ್ಷಗಳ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ಅವರಿಗೆ ಶ್ರೀರಕ್ಷೆಯಾಗಿದೆ. ಪ್ರಲ್ಹಾದ ಜೋಶಿ ಅಪ್ಪಟ್ಟ ಜನನಾಯಕರಾಗಿದ್ದಾರೆ. ಅವರ ಕಾರ್ಯಕ್ಷಮತೆ ಮಾದರಿಯಾದುದು. ಅವರ ಅಭಿವೃದ್ಧಿಯ ಕಾರ್ಯವನ್ನು ನಾನು ದೆಹಲಿಯಲ್ಲಿದ್ದುಕೊಂಡೇ ನೋಡಿದ್ದೇನೆ. ರಾಷ್ಟ್ರೀಯ ಹೆದ್ದಾರಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಖೇಲೋ ಇಂಡಿಯಾ ಕಾಂಪ್ಲೆಕ್ಸ್, ರೈಲ್ವೆ ಅಭಿವೃದ್ಧಿ, ವಿಮಾನ ನಿಲ್ದಾಣ ಮೇಲ್ದರ್ಜೆ, ಫ್ಲೈ ಓವರ್, ಕಾಂಕ್ರಿಟ್ ರಸ್ತೆಗಳು, ಸ್ಮಾರ್ಟ್ ಸಿಟಿ ಯೋಜನೆ, ಶಾಲೆಗಳಿಗೆ ಬಣ್ಣ, ಜಲಜೀವನ್ ಯೋಜನೆ, ಪೈಪ್ಡ್ ಗ್ಯಾಸ್, ಐಐಟಿ, ಐಐಐಟಿ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಕಾರ್ಯ ಮಾಡಿದ್ದಾರೆ ಎಂದು ಬಣ್ಣಿಸಿರುವ ಮೋದಿ, ಈ ಎಲ್ಲ ಅಭಿವೃದ್ಧಿ ಕಾರ್ಯಗಳೇ ನಿಮಗೆ ವಿಜಯಶಾಲಿಯಾಗುವಂತೆ ಮಾಡುತ್ತವೆ ಎಂದು ಹೇಳಿದ್ದಾರೆ.

    ಮೋದಿಯವರ ಪತ್ರದ ಸಂಪೂರ್ಣ ವಿವರ :

    ಭಾರತ ಸರ್ಕಾರದಲ್ಲಿ ನನ್ನ ಸಹೋದ್ಯೋಗಿಯಾಗಿ ತಾವು ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿದ್ದೀರಿ. ಖನಿಜ ಸಂಪನ್ಮೂಲಗಳನ್ನು ಅತ್ಯಂತ ಪಾರದರ್ಶಕವಾಗಿ ನಿರ್ವಹಿಸುವ ಮೂಲಕ ಅವುಗಳ ಉಪಲಬ್ಧತೆಯಲ್ಲಿ ನ್ಯಾಯ ಹಾಗೂ ಸಮತೋಲನತೆ ಸಾಧಿಸಲು ಸಮರ್ಥ ಕ್ರಮ ಕೈಗೊಂಡು, ಅತ್ಯಂತ ಪ್ರಮುಖ ಪಾತ್ರವಹಿಸಿದ್ದೀರಿ. 17ನೇ ಲೋಕಸಭಾ ಅವಧಿಯಲ್ಲಿ ಸಂಸದೀಯ ವಿಷಯಗಳ ಸಚಿವರಾಗಿ ಸುರಳಿತ ಅಧಿವೇಶನ ನಿರ್ವಹಣೆಯಲ್ಲಿ ತನ್ಮೂಲಕ ದೇಶದ ಕಲ್ಯಾಣ ಅಭಿವೃದ್ಧಿ ಹಾಗೂ ದಕ್ಷ ಆಡಳಿತಕ್ಕೆ ನಿರ್ಣಾಯಕ ಹಾಗೂ ಅವಶ್ಯಕತೆ ವಾದ ಕಾನೂನುಗಳ ಮಸೂದೆಗಳನ್ನು ಅನುಮೋದನೆಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದೀರಿ ಎಂದು ಮೋದಿ ಪತ್ರದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಡವರಿಗಾಗಿ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಹಲವಾರು ಉಚಿತ ವೈದ್ಯಕೀಯ ಶಿಬಿರಗಳನ್ನು, ನೇತ್ರ ತಪಾಸಣಾ ಶಿಬಿರಗಳನ್ನು ಏರ್ಪಡಿಸುವ ಮೂಲಕ ಕ್ಷೇತ್ರದ ಜನತೆಯ ಕಲ್ಯಾಣ ಹಾಗೂ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದೀರಿ. ಪ್ರಾಥಮಿಕ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟ ನೀಡುವ ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಕ್ಕಳಿಗೆ ಯಥೇಚ್ಛ ಆಹಾರ ದೊರಕಿಸಿ, ಧಾರವಾಡ ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಿದ್ದೀರಿ ಎಂದು ತಿಳಿಸಿದ್ದಾರೆ.

    ನಿಮ್ಮ ಈ ನಿಸ್ವಾರ್ಥ ಸೇವೆ, ಸಮರ್ಪಣಾ ಮನೋಭಾವ, ಜನರ ಬಗ್ಗೆ ಇರುವ ಕಳಕಳಿ ಹಾಗೂ ಕ್ಷೇತ್ರದ ಜನತೆಗೆ ತಮ್ಮ ಸರಳ ಲಭ್ಯತೆ ಮತ್ತಿತರ ಕಾರ್ಯಗಳು ತಮಗೆ ಜನರ ವಿಶೇಷ ವಿಶ್ವಾಸ ತಂದುಕೊಟ್ಟಿವೆ ಎಂದು ಪ್ರಶಂಸಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರಿಗೆ ಬರೆದಿರುವ ಪತ್ರದಲ್ಲಿ ಕೊಂಡಾಡಿದ್ದಾರೆ.

    ಜನರ ವಿಶೇಷ ಆಶೀರ್ವಾದದಿಂದ ತಾವು ಮತ್ತೆ ಸಂಸತ್ತನ್ನು ಪ್ರವೇಶಿಸುತ್ತೀರೆಂದು ವಿಶ್ವಾಸ ನನಗಿದೆ. ನಮ್ಮ ತಂಡದ ಒಬ್ಬ ಸದಸ್ಯರಾದ ತಾವು ನನಗೆ ಗಟ್ಟಿಯಾದ ಸಂಪನ್ಮೂಲ ವ್ಯಕ್ತಿಯಾಗಿದ್ದೀರಿ. ಒಂದು ತಂಡವಾಗಿ ನಾವು ಧಾರವಾಡ ಕ್ಷೇತ್ರದ ಹಾಗೂ ದೇಶದ ಶ್ರೇಯೋಭಿವೃದ್ಧಿಗಾಗಿ ಸರ್ವ ಪ್ರಯತ್ನ ಮಾಡೋಣ ಎಂದು ಪ್ರಧಾನಿ ಮೋದಿ ಅವರು ಪ್ರಲ್ಹಾದ ಜೋಶಿ ಅವರಿಗೆ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts