More

    ಕೇಂದ್ರದ ಅದ್ಭುತ ಯೋಜನೆ.. ರೈತರು ಪ್ರತಿ ತಿಂಗಳು 3 ಸಾವಿರ ರೂ. ಪಡೆಯಬಹುದು!

    ನವದೆಹಲಿ: ಕೇಂದ್ರ ಸರ್ಕಾರ ಎಲ್ಲ ವರ್ಗದ ಜನರಿಗೆ ಕಲ್ಯಾಣ ಯೋಜನೆಗಳನ್ನು ನೀಡುತ್ತಿದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಯೋಜನೆ ಆರಂಭಿಸಿದೆ. ಅದೇ ರೀತಿ ದೇಶದ ಬೆನ್ನೆಲುಬಾಗಿರುವ ರೈತರಿಗಾಗಿ ಹಲವು ಯೋಜನೆಗಳನ್ನು ತಂದಿದೆ. ಆದರೆ ಅನೇಕರಿಗೆ ಈ ಯೋಜನೆಗಳಿವೆ ಎಂಬುದು ತಿಳಿದಿಲ್ಲ. ರೈತರು ವೃದ್ಧಾಪ್ಯದಲ್ಲಿ ತೊಂದರೆ ಅನುಭವಿಸಬಾರದೆಂದು ಪ್ರಧಾನ ಮಂತ್ರಿ ಕಿಶನ್ ಮನ್ ಧನ್ ಎಂಬ ಹೊಸ ಯೋಜನೆಯನ್ನು ರಚಿಸಿದೆ. ಈ ಯೋಜನೆಯಿಂದ ಆರ್ಥಿಕ ಭದ್ರತೆ ದೊರೆಯಲಿದೆ ಎನ್ನಲಾಗಿದೆ. ಈ ಯೋಜನೆಯಡಿ ತಿಂಗಳಿಗೆ 55 ರೂ. ಪಾವತಿಸಬೇಕು. 60 ವರ್ಷ ಹೂಡಿಕೆಯ ನಂತರ ಪ್ರತಿ ತಿಂಗಳು 3 ಸಾವಿರ ರೂ.ಸಿಗಲಿದೆ.

    ಇದನ್ನೂ ಓದಿ: ಅರುಣಾಚಲದ ಮೇಲೆ ಚೀನಾ ಹಕ್ಕು ಸ್ಥಾಪನೆ ‘ಹಾಸ್ಯಾಸ್ಪದ’: ಸಿಂಗಾಪುರದಲ್ಲಿ ಜೈಶಂಕರ್ ಅಸಮಾಧಾನ

    ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆಯನ್ನು ಸರ್ಕಾರವು ಸಂಪೂರ್ಣವಾಗಿ ಬಡ ರೈತರಿಗಾಗಿ ಪ್ರಾರಂಭಿಸಿದೆ. 18 ರಿಂದ 40 ವರ್ಷದೊಳಗಿನ ರೈತರು ಈ ಯೋಜನೆಗೆ ಸೇರಲು ಅರ್ಹರು. ಈ ಯೋಜನೆಯಡಿ ರೈತರು ಮಾತ್ರ ಅರ್ಜಿ ಸಲ್ಲಿಸಬಹುದು. ಈ ಯೋಜನೆ ತಕ್ಷಣಕ್ಕೆ ಲಾಭ ನೀಡದಿದ್ದರೂ ರೈತರು ವೃದ್ಧಾಪ್ಯದಲ್ಲಿ ನೆಮ್ಮದಿಯಿಂದ ಇರಲು ಸಹಕಾರಿಯಾಗುತ್ತದೆ.

    ಈ ಪಿಎಂ ಕಿಸಾನ್ ಮನ್ ಧನ್ ಯೋಜನೆಯು ವೃದ್ಧಾಪ್ಯದಲ್ಲಿ ಪಿಂಚಣಿ ರೂಪದಲ್ಲಿ ರೈತರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಕಷ್ಟಪಟ್ಟು ಮಕ್ಕಳನ್ನು ಬೆಳೆಸಿದರೆ, ಅವರು ವೃದ್ಧಾಪ್ಯದಲ್ಲಿ ತಮ್ಮ ಹೆತ್ತವರನ್ನು ನೋಡಿಕೊಳ್ಳುವುದಿಲ್ಲ. ಇದರಿಂದ ಅನೇಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಅದಕ್ಕಾಗಿಯೇ ಈಗ ಅಂತಹ ಪೋಷಕರಿಗಾಗಿ ಈ ಯೋಜನೆಯನ್ನು ತರಲಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ರೂಪದಲ್ಲಿ ಹಣ ಹಾಕಿದರೆ ವೃದ್ಧಾಪ್ಯದಲ್ಲಿ ಪಿಂಚಣಿ ರೂಪದಲ್ಲಿ ಪಡೆಯಬಹುದು.

    ಇನ್ನು ವಯಸ್ಸಿಗೆ ಅನುಗುಣವಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕು. ರೈತರ ಮಕ್ಕಳು 18 ನೇ ವಯಸ್ಸಿನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ಅದು ತಿಂಗಳಿಗೆ 55 ರೂ. ಆಗಿರುತ್ತದೆ. ಅದೇ 30 ವರ್ಷದ ನಂತರ ಅವರು 110 ರೂ. ಪಾವತಿಸಬೇಕಾಗುತ್ತದೆ. ಅದೇ ರೀತಿ 40 ವರ್ಷದಿಂದ ಆರಂಭಿಸಿದರೆ 220 ರೂ. ತುಂಬಬೇಕಾಗುತ್ತದೆ. ಈ ಅವಧಿಯಲ್ಲಿ 60 ವರ್ಷಕ್ಕೆ ತಲುಪಿದಾಗ ತಿಂಗಳಿಗೆ 3 ಸಾವಿರ ರೂ. ಫಲಾನುಭವಿಗಳು ಜೀವಂತವಾಗಿರುವವರೆಗೆ ಇದು ಸಿಗುತ್ತದೆ.

    ಹೀಗೆ ಪ್ರತಿ ತಿಂಗಳು 3 ಸಾವಿರ ರೂ. ಅಂದರೆ.. ಅರ್ಹರೊಬ್ಬರ ಖಾತೆಗೆ ಒಂದು ವರ್ಷದಲ್ಲಿ 36 ಸಾವಿರ ರೂ. ಬರುತ್ತದೆ. ಅರ್ಹ ರೈತರು ಕೂಡಲೇ ಅರ್ಜಿ ಸಲ್ಲಿಸಿ ಈ ಯೋಜನೆಯನ್ನು ಪಡೆದುಕೊಳ್ಳಬಹುದು. ಸಂಪೂರ್ಣ ವಿವರಗಳಿಗಾಗಿ ಆಯಾ ವೆಬ್‌ಸೈಟ್‌ನಲ್ಲಿ ನೋಡಬಹುದು.

    ಕೆರಿಯರ್​ ಬಗ್ಗೆ ಸಮಂತಾ ಬಿಚ್ಚಿಟ್ಟ ಸತ್ಯ ಏನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts