More

    ಬೇಸಿಗೆಯಲ್ಲಿ ಪ್ರತಿನಿತ್ಯ ರಾಗಿ ಅಂಬಲಿ ಸೇವನೆ ಮಾಡುತ್ತೀರಾ? ಹಾಗಿದ್ರೆ ಈ ಮಾಹಿತಿ ನಿಮಗೆ ತಿಳಿದಿರಲೇ ಬೇಕು..

    ಬೆಂಗಳೂರು: ಬೇಸಿಗೆಯಲ್ಲಿ ಆಲಸ್ಯ ಮತ್ತು ದಣಿವು ಉಂಟಾಗುವ ಸಾಧ್ಯತೆಗಳಿವೆ. ಬೇಸಿಗೆಯಲ್ಲಿ ಖಂಡಿತವಾಗಿಯೂ ನಿಮ್ಮ ಆಹಾರದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳನ್ನು ಸೇವಿಸಿ. ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳಲ್ಲಿ ರಾಗಿ ಅಂಬಲಿ  ಕೂಡ ಒಂದು.  ಈ ಕುರಿತಾಗಿ ನೀವು ತಿಳಿದುಕೊಂಡಿರಲೇ ಬೇಕು…

    ragi malt

    ರಾಗಿಯಲ್ಲಿರುವ ಪೋಷಕಾಂಶಗಳು: ಆರೋಗ್ಯಕರವಾದ ಜೀವಸತ್ವಗಳು, ಕಬ್ಬಿಣ, ಕ್ಯಾಲ್ಸಿಯಂ, ಆಂಟಿಆಕ್ಸಿಡೆಂಟ್‌ಗಳು, ಬಿ ಕಾಂಪ್ಲೆಕ್ಸ್, ಸತು, ಫೈಬರ್, ಪ್ರೋಟೀನ್‌ನಂತಹ ಪೋಷಕಾಂಶಗಳು ಇವೆ. ರಾಗಿ ಅಂಬಲಿ ಜಾವ ಬೆಳಗಿನ ಉಪಾಹಾರಕ್ಕೆ ಮಾತ್ರವಲ್ಲ ರಾತ್ರಿಯ ಊಟಕ್ಕೂ ಒಳ್ಳೆಯದು. ಹಾಗಾಗಿ ಗೋಧಿ ಹಿಟ್ಟು ಇಷ್ಟಪಡದವರು ರಾಗಿ ಹಿಟ್ಟನ್ನೂ ಬಳಸಬಹುದು.

    ಬೇಸಿಗೆಯಲ್ಲಿ ಬಿಸಿ ಆಹಾರಗಳು, ಮಸಾಲೆಯುಕ್ತ ಆಹಾರಗಳು ಮತ್ತು ಜಂಕ್ ಫುಡ್ಗಳನ್ನು ತ್ಯಜಿಸಬೇಕು. ಇವುಗಳನ್ನು ತಿನ್ನುವುದರಿಂದ ಭೇದಿಯಾಗುವ ಸಾಧ್ಯತೆಗಳಿವೆ.  ರಾಗಿ ಅಂಬಲಿ ಕುಡಿಯುವುದರಿಂದ ಹೊಟ್ಟೆಗೆ ತುಂಬಾ ಆರಾಮದಾಯಕ ಮತ್ತು ತಂಪಾಗಿರುತ್ತದೆ.

    ರಾಗಿ ಅಂಬಲಿಯಲ್ಲಿ ಫೈಬರ್ ಮತ್ತು ಪ್ರೊಟೀನ್ ಸಮೃದ್ಧವಾಗಿದೆ. ನೀವು ರಾಗಿ ಅಂಬಲಿಯನ್ನು ಒಂದು ಲೋಟ ಕುಡಿದರೂ ನಾಲ್ಕು ಗಂಟೆಯಾದರೂ ಹಸಿವಾಗುವುದಿಲ್ಲ. ಹೊಟ್ಟೆ ತುಂಬಿದ ಭಾವನೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಸಹ ಕಡಿಮೆ ಮಾಡುತ್ತದೆ.  ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು. 

    ಬೇಸಿಗೆಯಲ್ಲಿ ಮಾತ್ರವಲ್ಲದೆ ಪ್ರತಿನಿತ್ಯ ರಾಗಿ ಜಾವ ಕುಡಿದರೆ ಎಲುಬುಗಳು ಕೂಡ ಆರೋಗ್ಯಕರವಾಗಿರುತ್ತದೆ. ದೇಹವನ್ನು ಬಲವಾಗಿಸುವುದರ ಜತೆ  ಗಟ್ಟಿಮುಟ್ಟಾಗಿಸುತ್ತದೆ. 

    ಮಧುಮೇಹದಿಂದ ಬಳಲುತ್ತಿರುವವರು ರಾಗಿ ಅಂಬಲಿ ಕುಡಿಯುವುದರಿಂದ ಶುಗರ್ ಕಂಟ್ರೋಲ್ ಆಗುತ್ತದೆ.

    (ಗಮನಿಸಿ: ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಈ ವಿವರಗಳನ್ನು ನಿಮಗೆ ಒದಗಿಸಲಾಗಿದೆ. )

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts