More

    ಈ 6 ಐಟಂಗಳು ನಿಮ್ಮ ಅಡುಗೆ ಮನೆಯಲ್ಲಿದ್ರೆ ಇಂದೇ ಬಿಸಾಡಿ! ಇಲ್ಲದಿದ್ರೆ ಕ್ಯಾನ್ಸರ್ ಬರುತ್ತೆ ಎಚ್ಚರ

    ಪ್ರತಿಯೊಬ್ಬರ ಆರೋಗ್ಯದ ಮೂಲ ಅಡುಗೆ ಮನೆ ಎಂದರೆ ತಪ್ಪಾಗಲಾರದು. ಅಡುಗೆ ಮನೆಯಲ್ಲಿ ನಾವು ಬಳಸುವ ಪ್ರತಿಯೊಂದು ವಸ್ತುವು ಕೂಡ ನಮ್ಮ ಆರೋಗ್ಯದ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ. ಆದರೆ, ದಿನನಿತ್ಯ ಸಾಮಾನ್ಯವಾಗಿ ಬಳಸುವ ಕೆಲ ಪದಾರ್ಥಗಳು ಕೂಡ ಕ್ಯಾನ್ಸರ್ ಉಂಟುಮಾಡುವ ಗುಣಗಳನ್ನು ಹೊಂದಿವೆ ಎಂಬುದು ಗಮನಾರ್ಹ ಸಂಗತಿ. ಹೀಗಾಗಿ ಅಡುಗೆ ಮನೆಯಲ್ಲಿ ಆದಷ್ಟು ಆರೋಗ್ಯಕರ ಆಹಾರ ಪದಾರ್ಥಗಳಿಗೆ ಮಾತ್ರ ಅವಕಾಶ ನೀಡಬೇಕು ಮತ್ತು ತಪ್ಪದೇ ಶುಚಿತ್ವ ಕಾಪಾಡಿಕೊಳ್ಳಬೇಕು. ಇಲ್ಲವಾದಲ್ಲಿ ಅನಾರೋಗ್ಯ ನಿಮ್ಮನ್ನು ಬಾದಿಸುವುದರಲ್ಲಿ ಸಂದೇಹವೇ ಇಲ್ಲ.

    ನಮಗೆ ಗೊತ್ತಿಲ್ಲದಂತೆ ಕೆಲವು ಅಪಾಯಕಾರಿ ಪದಾರ್ಥಗಳನ್ನು ನಮ್ಮ ಅಡುಗೆ ಮನೆಯಲ್ಲಿ ಬಳಸುತ್ತಿರುತ್ತೇವೆ. ಕೆಲವು ಪದಾರ್ಥಗಳಲ್ಲಿ ಕಾರ್ಸಿನೋಜೆನಿಕ್ ಅಂಶಗಳಿದ್ದು, ಅವು ಕ್ಯಾನ್ಸರ್​ ಕಾಯಿಲೆ ಉಂಟು ಮಾಡುವ ಸಾಧ್ಯತೆ ಇದೆ. ಹೀಗಾಗಿ ಆ ಪದಾರ್ಥಗಳು ಯಾವುವು ಎಂದು ತಿಳಿದುಕೊಳ್ಳುವುದರಿಂದ, ನಾವು ಜಾಗರೂಕರಾಗಿರಬಹುದು ಮತ್ತು ಕ್ಯಾನ್ಸರ್​ನಿಂದ ನಮ್ಮನ್ನು ರಕ್ಷಣೆ ಮಾಡಿಕೊಳ್ಳಬಹುದು.

    ನಾನ್​ ಸ್ಟಿಕ್​ ಪಾತ್ರೆಗಳು

    Non Stick 1
    ಇಂದಿನ ಕಾಲದಲ್ಲಿ ಬಹುತೇಕ ಅಡುಗೆ ಮನೆಗಳಲ್ಲಿ ನಾನ್​ ಸ್ಟಿಕ್​ ಪಾತ್ರೆಗಳು ಕಂಡುಬರುತ್ತವೆ. ಆದರೆ, ನಾನ್​ ಸ್ಟಿಕ್​ ಕೋಟಿಂಗ್​ ಮಾಡಲು ಪರ್ಫ್ಲೋರೋಕ್ಟಾನೋಯಿಕ್ ಆ್ಯಸಿಡ್​ ಬಳಸುತ್ತಾರೆ. ಇದು ಕ್ಯಾನ್ಸರ್​ಗೆ ಕಾರಣವಾಗುತ್ತದೆ ಎಂದು ಇತ್ತೀಚಿನ ಸಂಶೋಧನೆ ತಿಳಿಸಿದೆ. ಅಡುಗೆ ಸಮಯದಲ್ಲಿ ನಾನ್​ಸ್ಟಿಕ್​ ಪಾತ್ರೆಗಳಲ್ಲಿನ ಹೆಚ್ಚಿನ ತಾಪಮಾನವು ವಸ್ತುವನ್ನು ಕರಗಿಸಲು ಕಾರಣವಾಗಬಹುದು. ಆದರೆ, ಅದರಿಂದ ಹೊರಸೂಸುವ ಹೊಗೆ ಮಾತ್ರ ತುಂಬಾ ಅಪಾಯಕಾರಿ.

    ಪ್ಲಾಸ್ಟಿಕ್​ ಉತ್ಪನ್ನಗಳು

    Plastic Products
    ಇಂದು ಅನೇಕ ಅಡುಗೆ ಮನೆಗಳನ್ನು ಪ್ಲಾಸ್ಟಿಕ್​ ಉತ್ಪನ್ನಗಳು ಆವರಿಸಿಕೊಂಡಿವೆ. ಆದರೆ, ಪ್ಲಾಸ್ಟಿಕ್​ ತಯಾರಿಸಲು ಬಿಸ್ಫೆನಾಲ್ ಎ ಎಂಬ ಕೆಮಿಕಲ್​ ಅನ್ನು ಬಳಸಲಾಗುತ್ತದೆ. ಈ ಕೆಮಿಕಲ್​ ನಮ್ಮ ಹಾರ್ಮೋನ್​ಗಳಿಗೆ ಹಾನಿ ಮಾಡುತ್ತದೆ ಮತ್ತು ನಮ್ಮ ಪ್ರತಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಹೀಗಾಗಿ ಪ್ಲಾಸ್ಟಿಕ್​ ನಿರ್ಲಕ್ಷಿಸುವುದು ಉತ್ತಮ.

    ಸಂಸ್ಕರಿಸಿದ ಸಕ್ಕರೆ

    Refined Sugar
    ಸಂಸ್ಕರಿಸಿದ ಸಕ್ಕರೆಯ ದೈನಂದಿನ ಬಳಕೆಯು ನಮ್ಮ ದೇಹದಲ್ಲಿ ಕ್ಯಾನ್ಸರ್ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಈ ಸಕ್ಕರೆಯನ್ನು ಹೆಚ್ಚಾಗಿ ಸೇವಿಸುವುದರಿಂದ ದೇಹದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಎಂದು ಸಾಕಷ್ಟು ಅಧ್ಯಯನಗಳು ಹೇಳಿವೆ.

    ಸಂಸ್ಕರಿಸಿದ ಮಾಂಸ

    Processed Meat
    ಸಂಸ್ಕರಿಸಿದ ಮಾಂಸವನ್ನು ಸೇವಿಸುವುದರಿಂದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಕೊಲೊರೆಕ್ಟಲ್ ಕ್ಯಾನ್ಸರ್ ಅಋವಾ ಕರುಳಿನ ಕ್ಯಾನ್ಸರ್​​ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಮಾಂಸವನ್ನು ಸಂಸ್ಕರಿಸಲು ಬಳಸುವ ನೈಟ್ರೇಟ್ ಮತ್ತು ನೈಟ್ರೈಟ್​ಗಳು ನಮ್ಮ ದೇಹದಲ್ಲಿ ನೈಟ್ರೊಸಮೈನ್​ಗಳಾಗಿ ಪರಿವರ್ತನೆಯಾಗುತ್ತವೆ. ಈ ಕಾರಣದಿಂದಾಗಿ ಕ್ಯಾನ್ಸರ್ ಬರುತ್ತದೆ.

    ರೆಡಿ ಪ್ಯಾಕಿಂಗ್​ ಆಹಾರಗಳು

    Processed Foods
    ರೆಡಿ ಪ್ಯಾಕಿಂಗ್​ ಆಹಾರಗಳು ಬಳಸಲು ಸುಲಭವಾಗಿದ್ದರೂ, ಅವುಗಳು ಒಳಗೊಂಡಿರುವ ಬಿಸ್ಫೆನಾಲ್ ಎ (BPA) ಕಾರಣದಿಂದಾಗಿ ಅವು ಕ್ಯಾನ್ಸರ್​ಗೆ ಕಾರಣವಾಗಬಹುದು. ಅಲ್ಲದೆ, ಬಿಸ್ಫೆನಾಲ್ ಎ ಈಸ್ಟ್ರೊಜೆನ್ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹ, ಸ್ಥೂಲಕಾಯತೆ, ಫಲವತ್ತತೆ ಸಮಸ್ಯೆಗಳು, ಹುಡುಗಿಯರಲ್ಲಿ ಪ್ರೌಢಾವಸ್ಥೆಯಲ್ಲಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.

    ಅಲ್ಯೂಮಿನಿಯಂ ಹಾಳೆ

    Aluminum Foil
    ಅಡುಗೆ ಮನೆಯಲ್ಲಿ ಅಲ್ಯೂಮಿನಿಯಂ ಹಾಳೆ ಬಳಕೆ ಇತ್ತೀಚೆಗೆ ಹೆಚ್ಚಾಗಿದೆ. ಆದರೆ ಇದನ್ನು ಉಪಯೋಗಿಸಿ ಅಡುಗೆ ಮಾಡಿದರೆ ಅಥವಾ ಅದರಲ್ಲಿ ಆಹಾರ ಸಂಗ್ರಹಿಸಿದರೆ ಅದರ ಆಮ್ಲೀಯತೆಯು ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಲ್ಯೂಮಿನಿಯಂ ಹಾಳೆಯನ್ನು ದೀರ್ಘಕಾಲದವರೆಗೆ ಬಳಸಿದರೆ ಕ್ಯಾನ್ಸರ್​ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. (ಏಜೆನ್ಸೀಸ್​)

    ಕುಡಿಯೋ ನೀರಿಗಾಗಿ 20 ಲೀಟರ್ ಪ್ಲಾಸ್ಟಿಕ್​ ಕ್ಯಾನ್‌ ಬಳಸುತ್ತೀರಾ? ಆರೋಗ್ಯಕ್ಕೆ ತುಂಬಾ ಡೇಂಜರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts