More

    19 ಕ್ಷೇತ್ರಗಳಲ್ಲಿ ಎಸ್​ಯುುಸಿಐ ಸ್ಪರ್ಧೆ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕರ್ನಾಟಕದಲ್ಲಿ 19 ಕ್ಷೇತ್ರಗಳಲ್ಲಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್​ಯುುಸಿಐ-ಕಮ್ಯೂನಿಸ್ಟ್) ಸ್ಪರ್ಧಿಸಲಿದ್ದು, ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿದೆ ಎಂದು ಪಕ್ಷದ ರಾಜ್ಯ ಸಮಿತಿ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ ತಿಳಿಸಿದರು.

    ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡದಿಂದ ಶರಣಬಸವ ಗೋನವಾರ, ಬೆಳಗಾವಿಯಿಂದ ಲಕ್ಷ್ಮಣ ಜಡಗಣ್ಣನವರ, ಹಾವೇರಿಯಿಂದ ಗಂಗಾಧರ ಬಡಿಗೇರ, ಉತ್ತರಕನ್ನಡದಿಂದ ಗಣಪತಿ ಹೆಗಡೆ, ಬಾಗಲಕೋಟೆಯಿಂದ ಮಲ್ಲಿಕಾರ್ಜುನ ಎಚ್.ಟಿ., ವಿಜಯಪುರದಿಂದ ನಾಗಜ್ಯೋತಿ, ಕಲಬುರ್ಗಿಯಿಂದ ಎಸ್.ಎಂ. ಶರ್ಮ, ರಾಯಚೂರಿನಿಂದ ರಾಮಲಿಂಗಪ್ಪ, ಕೊಪ್ಪಳದಿಂದ ಶರಣುಗಡ್ಡಿ, ಬಳ್ಳಾರಿಯಿಂದ ದೇವದಾಸ್.ಎ., ದಾವಣಗೆರೆಯಿಂದ ತಿಪ್ಪೇಸ್ವಾಮಿ, ಚಿತ್ರದುರ್ಗದಿಂದ ಸುಜಾತಾ, ತುಮಕೂರಿನಿಂದ ಎಸ್.ಎನ್. ಸ್ವಾಮಿ, ಮೈಸೂರಿನಿಂದ ಸುನಿಲ್ ಟಿ. ಆರ್., ಚಾಮರಾಜನಗರದಿಂದ ಸುಮಾ ಎಸ್., ಬೆಂಗಳೂರು ಗ್ರಾಮಾಂತರದಿಂದ ಹೇಮಾವತಿ ಕೆ., ಬೆಂಗಳೂರು ಉತ್ತರದಿಂದ ನಿರ್ಮಲ ಎಚ್.ಎಲ್., ಬೆಂಗಳೂರು ಕೇಂದ್ರದಿಂದ ಶಿವಪ್ರಕಾಶ್ ಎಚ್.ಪಿ. ಹಾಗೂ ಚಿಕ್ಕಬಳ್ಳಾಪುರದಿಂದ ಷಣ್ಮುಗಂ ಅವರಿಗೆ ಟಿಕೆಟ್ ನೀಡಲಾಗಿದೆ ಎಂದರು.

    ಇದು ಪಕ್ಷದ ಅಭ್ಯರ್ಥಿಗಳ ಅಂತಿಮ ಪಟ್ಟಿಯಾಗಿದ್ದು, ರಾಜ್ಯದ ಉಳಿದ ಕ್ಷೇತ್ರಗಳಿಗೆ ಸ್ಪರ್ಧೆ ಮಾಡುತ್ತಿಲ್ಲ. ದೇಶದ 19 ರಾಜ್ಯ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ನಮ್ಮ ಪಕ್ಷವು 151 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ ಎಂದು ತಿಳಿಸಿದರು.

    ಚುನಾವಣೆ ಬಾಂಡ್ ಮೂಲಕ ಬಿಜೆಪಿ, ಕಾಂಗ್ರೆಸ್, ಡಿಎಂಕೆ. ಟಿಎಂಸಿ, ಸಿಪಿಐ, ಸಿಪಿಎಂ ಪಕ್ಷಗಳು ಬಂಡವಾಳಶಾಹಿಗಳಿಂದ ಹಣ ಪಡೆದಿವೆ. ಬಿಜೆಪಿ ಶುದ್ಧ ಪಕ್ಷವಲ್ಲ. ಕಡು ಭ್ರಷ್ಟಾಚಾರವನ್ನು ಅನುಸರಿಸಿದ ಪಕ್ಷವೆಂದು ಸಾಬೀತಾಗಿದೆ. ಕಾಂಗ್ರೆಸ್​ಗೆ ಬಿಜೆಪಿ ಪರ್ಯಾಯವಲ್ಲ ಎಂಬುದು ಗೊತ್ತಾಗಿದೆ. ಕಮ್ಯುನಿಸ್ಟ್ (ಸುಕಿ) ಪಕ್ಷವು ಶೋಷಿತ ಜನರ ನೈಜ ಹೋರಾಟದ ಪರ್ಯಾಯವಾಗಿ ತನ್ನ ಶಕ್ತಿ ಮೀರಿ ಈ ಚುನಾವಣೆಯಲ್ಲಿ ರ್ಸ³ಸಲು ಮುಂದಾಗಿದೆ ಎಂದರು.

    ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿಗಳಾದ ಶರಣಬಸವ ಗೋನವಾರ, ಲಕ್ಷ್ಮಣ ಜಡಗನ್ನವರ, ಗಂಗಾಧರ ಬಡಿಗೇರ, ಸದಸ್ಯರಾದ ಭುವನಾ ಬಳ್ಳಾರಿ, ಮಧುಲತಾ ಗೌಡರ್, ಭವಾನಿಶಂಕರ್ ಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts