More

    ಮಕ್ಕಳ ಆರೋಗ್ಯ ಹೆಚ್ಚಳಕ್ಕೆ ಒತ್ತು

    ಯಲಬುರ್ಗಾ; ಶಿಕ್ಷಕರು ಅಪೌಷ್ಟಿಕತೆಯಿಂದ ಬಳಲುವ ಮಕ್ಕಳನ್ನು ಗುರುತಿಸಿ ಕಾಳಜಿ ವಹಿಸಬೇಕೆಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ಧರಣಾ ಹೇಳಿದರು.

    ಇದನ್ನೂ ಓದಿ: ಆನಂದನಗರ ಗ್ರಾಮದಲಿ ್ಲಆರೋಗ್ಯ ಉಚಿತ ತಪಾಸಣಾ ಶಿಬಿರ

    ಪಟ್ಟಣದ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆಯುಷ್ಮಾನ್ ಭಾರತ್ ಶಾಲಾ ಆರೋಗ್ಯ ಮತ್ತು ಕ್ಷೇಮ ತರಬೇತಿ ಪ್ರಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸಮಾಜದಲ್ಲಿ ಆರ್ಥಿಕ ದುರ್ಬಲರಾಗಿರುವವರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ರಕ್ಷ ಕವಚವಾಗಿದೆ. ಶಾಲಾ ಮಕ್ಕಳಲ್ಲಿ ಜ್ಞಾನ ಮತ್ತು ಆರೋಗ್ಯವನ್ನು ಹೆಚ್ಚಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಸರ್ಕಾರ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳ ಸದ್ಬಳಕೆಯಾಗಬೇಕೆ ಎಂದರು.

    ದುರ್ಬಲರಿಗೆ ಆರೋಗ್ಯ ರಕ್ಷ ಕವಚ

    ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವೈ.ಜಿ.ಪಾಟೀಲ್, ಕುಕನೂರು ತಾಲೂಕು ಅಧ್ಯಕ್ಷ ಮಹೇಶ ಸಬರದ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಗೌರವಾಧ್ಯಕ್ಷ ಶರಣಯ್ಯ ಸರಗಣಾಚಾರ, ಎನ್‌ಪಿಎಸ್ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿದ್ದಲಿಂಗಪ್ಪ ಶ್ಯಾಗೋಟಿ, ಬಿಆರ್‌ಪಿ ಶಿವಪ್ಪ ಉಪ್ಪಾರ, ಸಿಆರ್‌ಪಿ ಈರಪ್ಪ ಗಾಣಿಗೇರ, ಶಿಕ್ಷಕರಾದ ಸಿದ್ದಪ್ಪ ಕಟ್ಟಿಮನಿ ಕೊಟ್ರೇಶ ಬೆನ್ನಳ್ಳಿ, ಪ್ರವೀಣಯ್ಯ ಸಂಶಿಮಠ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts