ಆನಂದನಗರ ಗ್ರಾಮದಲಿ ್ಲಆರೋಗ್ಯ ಉಚಿತ ತಪಾಸಣಾ ಶಿಬಿರ

IMG20240322104958
ಆನಂದನಗರ ಗ್ರಾಮದಲ್ಲಿ ಆಯೋಜಿಸಿದ್ದ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಡಾ.ವಿರುಪಾಕ್ಷಯ್ಯ , ತಿರುಮಲಾಪುರ ರಾಜೇಗೌಡ, ವೈ.ಕೆ.ಹೆಗಡೆ, ಬಸವೇಗೌಡ, ಹೇಮೇಶ್ ಮಣಿ, ಸವಿತಾ ಇದ್ದರು.
Published on

ಬೈಲಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಬೆಣಗಾಲು ಗ್ರಾಮ ಪಂಚಾಯಿತಿ ವ್ಯಾಪ್ತಿ ಆನಂದನಗರ ಗ್ರಾಮದಲ್ಲಿ ತಾಲೂಕು ರೋಟರಿ ಮಿಡ್‌ಟೌನ್, ಲಕ್ಷ್ಮೀ ಹೆಲ್ತ್ ಕೇರ್ ಸೆಂಟರ್ ವತಿಯಿಂದ ಶುಕ್ರವಾರ ಆರೋಗ್ಯ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ಶಿಬಿರ ಉದ್ಘಾಟಿಸಿ ಮಾತನಾಡಿದ ರೋಟರಿ ಮಿಡ್ ಟೌನ್ ಅಧ್ಯಕ್ಷ ತಿರುಮಲಪುರ ರಾಜೇಗೌಡ, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಜನರು ಕೆಲಸದ ಒತ್ತಡಕ್ಕೆ ಮಣಿದು ಆರೋಗ್ಯದ ಬಗ್ಗೆ ನಿರ್ಲಕ್ಷ ವಹಿಸುತ್ತಿದ್ದಾರೆ. ಹೀಗಾಗಿ ಅವರ ಅನುಕೂಲಕ್ಕಾಗಿ ಸಂಸ್ಥೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಇದರ ಸದುಪಯೋಗವನ್ನು ಪಡೆದು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕೆಂದು ಮನವಿ ಮಾಡಿದರು.

ಬೆಣಗಾಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್, ಡಾ.ವಿರುಪಾಕ್ಷಯ್ಯ, ವೈ.ಕೆ.ಹೆಗಡೆ ಮಾತನಾಡಿದರು. ಮಿಡ್‌ಟೌನ್ ಸದಸ್ಯರಾದ ಎ.ಜೆ.ಬಸವೇಗೌಡ, ಹೇಮೇಶ್, ಎಂ.ಎಂ.ರಾಜೇಗೌಡ, ಪ್ರಕಾಶ್, ಹೆಲ್ತ್ ಕೇರ್ ಸೆಂಟರ್ ಸಿಬ್ಬಂದಿ ಮಣಿ, ಸವಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net