More

    ಕುಡಿಯೋ ನೀರಿಗಾಗಿ 20 ಲೀಟರ್ ಪ್ಲಾಸ್ಟಿಕ್​ ಕ್ಯಾನ್‌ ಬಳಸುತ್ತೀರಾ? ಆರೋಗ್ಯಕ್ಕೆ ತುಂಬಾ ಡೇಂಜರ್​!

    ಮಾನವನ ಜೀವನದಲ್ಲಿ ನೀರು ಅತಿ ಮುಖ್ಯವಾದ ಮೂಲವಾಗಿದೆ. ಜಗತ್ತು ಮುಂದುವರಿದಂತೆ ನೀರು ಬಳಸುವ ವಿಧಾನ ಬದಲಾಗುತ್ತಿದೆ. ಹಿಂದೆ ಮಣ್ಣಿನ ಮಡಿಕೆಗಳನ್ನು ಬಳಸುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಈ ತಂತ್ರಜ್ಞಾನದ ಯುಗದಲ್ಲಿ ನಗರ ಪ್ರದೇಶದಲ್ಲಿ ಮಾತ್ರವಲ್ಲದೆ ಗ್ರಾಮಗಳಲ್ಲೂ ಜನರು ಕುಡಿಯುವ ನೀರಿಗಾಗಿ 20 ಲೀಟರ್ ನೀರಿನ ಪ್ಲಾಸ್ಟಿಕ್​ ಕ್ಯಾನ್‌ಗಳನ್ನು ಅವಲಂಬಿಸಿದ್ದಾರೆ.

    ದಿನನಿತ್ಯದ ಕುಡಿಯುವ ನೀರಿನ ಅಗತ್ಯತೆಗಳಿಗೆ ಈ ನೀರಿನ ಕ್ಯಾನ್‌ಗಳಿಗೆ ಅಂಟಿಕೊಂಡಿರುವವರಿಗೆ ತಜ್ಞರು ಗಂಭೀರವಾದ ಎಚ್ಚರಿಕೆಯನ್ನು ನೀಡುತ್ತಲೇ ಇದ್ದಾರೆ. ಆದರೂ ಬಳಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ವಾಟರ್ ಕ್ಯಾನ್​ಗಳಿಂದ ನೀರು ಕುಡಿಯುವುದರಿಂದ ದೀರ್ಘಾವಧಿಯಲ್ಲಿ ಆರೋಗ್ಯಕ್ಕೆ ಹಾನಿಯಾಗುವುದಲ್ಲದೆ ಪರಿಸರಕ್ಕೂ ಧಕ್ಕೆ ಉಂಟಾಗುತ್ತದೆ ಎಂಬ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

    1. ಪರಿಸರದ ಮೇಲೆ ಪ್ಲಾಸ್ಟಿಕ್​ ಪ್ರಭಾವ
    ಶತಮಾನಗಳಿಂದ ಪ್ಲಾಸ್ಟಿಕ್ ತನ್ನ ವಿಘಟನೀಯವಲ್ಲದ ಗುಣಲಕ್ಷಣಗಳಿಂದ ಪರಿಸರಕ್ಕೆ ಮಾರಕವಾಗಿದೆ. ನೀರು ಸಂಗ್ರಹಕ್ಕೆ ಬಳಸುವ ಈ ಕಂಟೈನರ್​ಗಳು ಹಳೆಯದಾಗುತ್ತಿದ್ದಂತೆ ಎಲ್ಲೆಂದರಲ್ಲಿ ಬೀಸಾಡಲಾಗುತ್ತಿದೆ. ಇವೆಲ್ಲವೂ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತವೆ. ಅಲ್ಲದೆ, ನೈಸರ್ಗಿಕ ಸಮತೋಲನಕ್ಕೆ ಧಕ್ಕೆಯಾಗುವ ಮೂಲಕ ವನ್ಯಜೀವಿಗಳಿಗೆ ಅಪಾಯಕಾರಿಯಾಗಿದೆ.

    2. ಮಾನವ ಆರೋಗ್ಯಕ್ಕೆ ಪ್ಲಾಸ್ಟಿಕ್​ ಹಾನಿಕಾರಕ
    ಪ್ಲಾಸ್ಟಿಕ್ ವಾಟರ್ ಕ್ಯಾನ್‌ಗಳಲ್ಲಿ ದೀರ್ಘಕಾಲ ಸಂಗ್ರಹಿಸಿಟ್ಟ ನೀರನ್ನು ಬಳಸುವುದರಿಂದ ಕೆಲವು ಹಾನಿಕಾರಕ ಅಡ್ಡ ಪರಿಣಾಮಗಳ ಅಪಾಯವಿದೆ. ಪ್ಲಾಸ್ಟಿಕ್‌ನಿಂದ ಬಿಡುಗಡೆಯಾಗುವ ರಾಸಾಯನಿಕಗಳಿಂದ ಮಾನವನ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ನೀರಿನ ಕ್ಯಾನ್‌ಗಳನ್ನು ದೀರ್ಘಕಾಲದವರೆಗೆ ಸೂರ್ಯನ ಬೆಳಕಿಗೆ ಒಡ್ಡಿದಾಗ ಅದರಿಂದ ರಾಸಾಯನಿಕಗಳು ನೀರಿನಲ್ಲಿ ಸೇರಿಕೊಳ್ಳಬಹುದು. ನೀರಿನಲ್ಲಿರುವ ರಾಸಾಯನಿಕ ಅಂಶಗಳು ರಕ್ತವನ್ನು ಪ್ರವೇಶಿಸಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

    3. ಪ್ಲಾಸ್ಟಿಕ್ ವಾಟರ್ ಕ್ಯಾನ್‌ಗಳಿಂದ ಉಂಟಾಗುವ ಪ್ರಮುಖ ಆರೋಗ್ಯ ತೊಂದರೆಗಳು
    ಪ್ಲಾಸ್ಟಿಕ್ ನೀರಿನ ಕ್ಯಾನ್‌ಗಳನ್ನು ಬಳಸುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಮುಖ್ಯವಾಗಿ ಜೀರ್ಣಕಾರಿ ಸಮಸ್ಯೆಗಳು, ಹಾರ್ಮೋನುಗಳ ಅಸಮತೋಲನ, ಕ್ಯಾನ್ಸರ್ ಮತ್ತು ಪಿಸಿಓಎಸ್‌ನಂತಹ ಅಪಾಯವನ್ನು ಹೆಚ್ಚಿಸುತ್ತದೆ.

    ಎ. ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪರಿಣಾಮ: ಪ್ಲಾಸ್ಟಿಕ್ ವಾಟರ್ ಕ್ಯಾನ್‌ಗಳಿಂದ ನೀರು ಕುಡಿಯುವುದರಿಂದ ನಮ್ಮ ರೋಗ ನಿರೋಧಕ ಶಕ್ತಿ ಹಾಳಾಗುತ್ತದೆ. ಪ್ಲಾಸ್ಟಿಕ್‌ನಿಂದ ಬಿಡುಗಡೆಯಾಗುವ ರಾಸಾಯನಿಕಗಳು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಅಡ್ಡಿಪಡಿಸುತ್ತವೆ.

    ಬಿ. ಡಯಾಕ್ಸಿನ್ ಉತ್ಪಾದನೆ: ಪ್ಲಾಸ್ಟಿಕ್ ವಾಟರ್ ಕ್ಯಾನ್‌ಗಳನ್ನು ಸೂರ್ಯನ ಶಾಖಕ್ಕೆ ಒಡ್ಡಿದಾಗ ಡೈಯಾಕ್ಸಿನ್ ಎಂಬ ಕೆಮಿಕಲ್​ ಬಿಡುಗಡೆ ಮಾಡುತ್ತವೆ. ಇದು ಹಾನಿಕಾರಕ ವಿಷವಾಗಿದ್ದು, ಇದನ್ನು ಸೇವಿಸಿದರೆ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ.

    ಸಿ. ಲಿವರ್​ ಕ್ಯಾನ್ಸರ್, ವೀರ್ಯಾಣುಗಳ ಸಂಖ್ಯೆಯಲ್ಲಿ ಇಳಿಕೆ: ಪ್ಲಾಸ್ಟಿಕ್ ನೀರಿನ ಕ್ಯಾನ್‌ಗಳಲ್ಲಿ ಥಾಲೇಟ್‌ಗಳು ಇರುವ ಸಾಧ್ಯತೆಗಳಿವೆ. ಕ್ಯಾನ್​ಗಳಲ್ಲಿ ನೀರು ಕುಡಿಯುವುದರಿಂದ ಲಿವರ್ ಕ್ಯಾನ್ಸರ್ ಮತ್ತು ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ. ಅಲ್ಲದೆ, ಕ್ಯಾನ್ಸರ್ ಉಂಟುಮಾಡುತ್ತದೆ. ರಕ್ತವನ್ನು ಪ್ರವೇಶಿಸುವ ಬಿಸ್ಫೆನಾಲ್ ಎ ನಂತಹ ವಸ್ತುಗಳು ಜೀವಕೋಶಗಳಿಗೆ ಹಾನಿಯನ್ನುಂಟುಮಾಡಲು ಬಹಳ ಸಮಯ ತೆಗೆದುಕೊಳ್ಳಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ.

    ಡಿ. ಹಾನಿಕಾರಕ ಬಿಸ್ಫೆನಾಲ್ ಎ: ಪ್ಲಾಸ್ಟಿಕ್ ವಾಟರ್ ಕ್ಯಾನ್‌ಗಳು ಬಿಸ್ಫೆನಾಲ್ ಎ (ಬಿಪಿಎ) ಅನ್ನು ಉತ್ಪಾದಿಸುತ್ತವೆ. ಇದು ಈಸ್ಟ್ರೊಜೆನ್ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹ, ಸ್ಥೂಲಕಾಯತೆ, ಫಲವತ್ತತೆ ಸಮಸ್ಯೆಗಳು, ಹುಡುಗಿಯರಲ್ಲಿ ಪ್ರೌಢಾವಸ್ಥೆಯಲ್ಲಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅದಕ್ಕಾಗಿಯೇ ಪ್ಲಾಸ್ಟಿಕ್ ನೀರಿನ ಕ್ಯಾನ್‌ಗಳಲ್ಲಿ ನೀರನ್ನು ಸಂಗ್ರಹಿಸಿ ಕುಡಿಯುವುದನ್ನು ತಪ್ಪಿಸುವುದು ಉತ್ತಮ. (ಏಜೆನ್ಸೀಸ್​)

    ಬೇಸಿಗೆ ಶುರು… ನೀರಿನ ಜತೆ ಇದನ್ನು ಬೆರೆಸಿ ಸಿಂಪಡಿಸಿ ಹಾವುಗಳು ಮನೆ ಬಳಿ ಸುಳಿಯುವುದಿಲ್ಲ!

    ನಾಯಿ ರೀತಿ ಇರುತ್ತೇನೆಂದರು, ರೂಮಿಗೆ ಕರೆದರು… ಹಲವು ವರ್ಷಗಳ ಬಳಿಕ ನಟಿ ಲಕ್ಷ್ಮೀ ರಹಸ್ಯ ಬಯಲು

    ಬರೋಬ್ಬರಿ 30 ಯುವಕರಿಗೆ ವಂಚಿಸಿದ ಮಾಯಾಂಗನೆ! ಕಳಚಿಬಿತ್ತು ಲೇಡಿ ಪೊಲೀಸ್​ ಮುಖವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts