More

  ಎಚ್‌ಕೆಇ ಗದ್ದುಗೆಗೇರಿದ ನಮೋಶಿ

  ಕಲಬುರಗಿ: ತೀವ್ರ ಕುತೂಹಲ ಕೆರಳಿಸಿದ್ದ ಕಲ್ಯಾಣ ಕರ್ನಾಟಕದ ಪ್ರತಿಶಿಷ್ಠಿತ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಚುನಾವಣೆ ಫಲಿತಾಂಶ ಭಾನುವಾರ ತಡರಾತ್ರಿ ಹೊರಬಿದ್ದಿದ್ದು, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಪೆನಾಲ್ ಜಯಭೇರಿ ಬಾರಿಸಿದೆ.

  ನಗರದ ನಿಜಲಿಂಗಪ್ಪ ದಂತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸ್ಯಾಕ್ ಬಿಲ್ಡಿಂಗ್‌ನಲ್ಲಿ ಇಡೀ ದಿನ ನಡೆದ ಮತ ಎಣಿಕೆಯಲ್ಲಿ ಶಶೀಲ್ ನಮೋಶಿ ೬೧೬ ಮತ ಪಡೆದು ೧೧೫ ಮತ ಅಂತರದಿAದ ಅಧ್ಯಕ್ಷರಾಗಿ ವಿಜಯದ ಮಾಲೆ ಧರಿಸಿದರೆ, ಪ್ರತಿಸ್ಪರ್ಧಿಗಳಾದ ಸಂತೋಷ ಬಿಲಗುಂದಿ ೫೦೩, ಡಾ.ಎಸ್.ಬಿ. ಕಾಮರಡ್ಡಿ ೨೪೯ ಮತ ಪಡೆದು ಸೋಲನುಭವಿಸಿದರು.

  ನಮೋಶಿ ಪೆನಾಲ್‌ನ ರಾಜಾ ಬಿ.ಭೀಮಳ್ಳಿ ೮೪೭ ಮತಗಳೊಂದಿಗೆ ಉಪಾಧ್ಯಕ್ಷರಾಗಿ ಗೆಲುವಿನ ನಗೆ ಬೀರಿದರೆ, ನಿತೀನ್ ಜವಳಿ ೨೫೪, ಆರ್.ಎಸ್. ಹೊಸಗೌಡ ೨೫೭ ಮತ ಪಡೆದು ಸೋತರು.

  ಎಚ್‌ಕೆಇ ಸಂಸ್ಥೆಯ ನಗರದ ಮಹಾದೇವಪ್ಪ ರಾಂಪುರೆ ಮೆಡಿಕಲ್ ಕಾಲೇಜು, ರಾಯಚೂರಿನ ಶ್ರೀ ಎಂ.ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿAಗ್, ಬೀದರ್‌ನ ಬಿ.ವಿ. ಭೂಮರಡ್ಡಿ ಕಾಲೇಜಿನಲ್ಲಿ ಶನಿವಾರ ಮತದಾನ ನಡೆದಿತ್ತು.
  ಭಾನುವಾರ ಬೆಳಗ್ಗೆ ೮ಕ್ಕೆ ಶುರುವಾದ ಮತ ಎಣಿಕೆಯಲ್ಲಿ ಮೊದಲು ಆಡಳಿತ ಮಂಡಳಿ ಸದಸ್ಯ ಸ್ಥಾನಗಳ ಎಣಿಕೆ ನಡೆಯಿತು. ಮಧ್ಯಾಹ್ನ ಫಲಿತಾಂಶ ಹೊರಬೀಳುತ್ತಿದ್ದಂತೆ ವಿಜೇತರು ತಮ್ಮ ಬೆಂಬಲಿಗರೊAದಿಗೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

  ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ವೈದ್ಯ ಡಾ.ಎಸ್.ಬಿ. ಕಾಮರಡ್ಡಿ, ಸಂತೋಷ ಬಿಲಗುಂದಿ ನೇತೃತ್ವದಲ್ಲಿ ಮೂರು ಪೆನಾಲ್‌ಗಳು ಕಣದಲ್ಲಿದ್ದವು. ಪ್ರತಿ ಪೆನಾಲ್‌ನಿಂದ ೧೩ ಜನ ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದರು. ರಾಜಶೇಖರ ನಿಪ್ಪಾಣಿ ಸ್ವತಂತ್ರವಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಅಧ್ಯಕ್ಷ, ಉಪಾಧ್ಯಕ್ಷ, ಆಡಳಿತ ಮಂಡಳಿ ಸೇರಿ ೪೬ ಜನ ಅಖಾಡದಲ್ಲಿದ್ದರು.
  ಹಿರಿಯ ವೈದ್ಯ ಡಾ.ಪಿ.ಎಸ್. ಶಂಕರ ಚುನಾವಣಾಧಿಕಾರಿ, ಡಾ.ಸಿದ್ರಾಮ ಪಾಟೀಲ್ ಸಹಾಯಕ ಚುನಾವಣಾಧಿಕಾರಿ ಹಾಗೂ ನರೇಂದ್ರ ಬಡಶೇಷಿ, ಡಾ.ರಾಜೇಂದ್ರ ಕೊಂಡಾ ಸಹಾಯಕರಾಗಿ ಕಾರ್ಯನಿರ್ವಹಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts