More

  ಸರಣಿ ಅಪಘಾತದಲ್ಲಿ ಇಬ್ಬರು ಸಾವು

  ಶಹಾಬಾದ್: ಭಂಕೂರ ಬಳಿ ರಾಷ್ಟ್ರೀಯ ಹೆದ್ದಾರಿ- ೧೫೦ರಲ್ಲಿ ಶನಿವಾರ ಸಂಜೆ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಐವರು ಗಾಯಗೊಂಡ ಘಟನೆ ಜರುಗಿದೆ.

  ಜೈಹೀದ್ ಅಯ್ಯೂಬ್ ಖಾನ್ ಪಠಾಣ್(೩೦), ಶಾಕೀರ್ ವಾಜೀದ್ ಅಲಿ (೨೦) ಮೃತ ದುರ್ದೈವಿಗಳು. ಕಾರಿನಲ್ಲಿದ್ದ ಅಸ್ಲಾಂ ಅಲಿಯಾಸ್ ನಂದು, ಸ್ಕಾರ್ಪಿಯೋದಲ್ಲಿ ಚಾಲಕ ಹರೀಶ್, ಹಣಮಂತ, ಶರಣು ಹಾಗೂ ಬೈಕ್‌ನ ಚಾಲಕ ಗಾಯಗೊಂಡವರು. ಇವರೆಲ್ಲರನ್ನು ಕಲಬುರಗಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

  ಮೃತರು ಉತ್ತರ ಪ್ರದೇಶ ಮೂಲದವರಾಗಿದ್ದು, ಹಲವಾರು ವರ್ಷಗಳಿಂದ ವಿಜಯಪುರದ ಝಂಡಾ ಕಟ್ಟಾ ಪ್ರದೇಶದಲ್ಲಿ ವಾಸವಾಗಿದ್ದರು. ಹಳೆ ಬಟ್ಟೆಗಳನ್ನು ಖರೀದಿಸಿ, ಜಮಖಾನೆ ಮಾಡಿ ಮಾರಾಟ ಮಾಡುತ್ತಿದ್ದರು. ಶನಿವಾರ ಮಧ್ಯಾಹ್ನ ಜಮಖಾನೆ ಮಾರಲು ಕಲಬುರಗಿಯಿಂದ ಯಾದಗಿರಿಗೆ ಕಾರಿನಲ್ಲಿ ಹೋಗುತ್ತಿದ್ದರು. ಲೋಕೋಪಯೋಗಿ ಇಲಾಖೆ ಇಂಜನಿಯರ್ ಹಣಮಂತ, ಸಹಾಯಕ ಇಂಜನಿಯರ್ ಶರಣು ಅವರು ಶಂಕರವಾಡಿ ಕಾಗಿಣಾ ನದಿಗೆ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಪರಿಶೀಲನೆ ನಡೆಸಿ ಕಲಬುರಗಿಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಚಾಲಕ ಹರೀಶ್‌ನ ನಿರ್ಲಕ್ಷ್ಯದಿಂದ ಸ್ಕಾರ್ಪಿಯೋಗೆ ಕಾರು ಡಿಕ್ಕಿ ಹೊಡೆದಿದೆ. ಇದಲ್ಲದೆ ಕಾರಿನ ಹಿಂದೆ ಬರುತ್ತಿದ್ದ ಬೈಕ್ ವಾಹನಕ್ಕೆ ಡಿಕ್ಕಿ ಹೊಡೆದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

  ಶಹಾಬಾದ್ ಪಿಐ ನಟರಾಜ ಲಾಡೆ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಶಹಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts