More

    ಬರೋಬ್ಬರಿ 30 ಯುವಕರಿಗೆ ವಂಚಿಸಿದ ಮಾಯಾಂಗನೆ! ಕಳಚಿಬಿತ್ತು ಲೇಡಿ ಪೊಲೀಸ್​ ಮುಖವಾಡ

    ವಿಜಯವಾಡ: ಇತ್ತೀಚಿನ ದಿನಗಳಲ್ಲಿ, ನಿರುದ್ಯೋಗದಿಂದ ಬಳಲುತ್ತಿರುವ ಯುವಕರು ವಂಚಕರ ಜಾಲಕ್ಕೆ ಸಿಲುಕುತ್ತಿದ್ದಾರೆ. ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಗಟ್ಟಲೆ ಹಣ ಪಡೆದು ಕಿಡಿಗೇಡಿಗಳು ಪರಾರಿಯಾಗುತ್ತಿದ್ದಾರೆ. ಮೋಸ ಹೋಗಿರುವುದನ್ನು ಅರಿತ ಸಂತ್ರಸ್ತರು ಪೊಲೀಸರ ಮೊರೆ ಹೋಗದೆ ಬೇರೆ ದಾರಿಯಿಲ್ಲ. ಆದರೆ, ಇತ್ತೀಚೆಗಿನ ಘಟನೆಯೊಂದರಲ್ಲಿ ಪೊಲೀಸ್​ ಸಮವಸ್ತ್ರದಲ್ಲೇ ಕೆಲ ಕಿಡಿಗೇಡಿಗಳು ನಿರುದ್ಯೋಗಿ ಯುವಕರನ್ನು ತಮ್ಮ ವಂಚನೆ ಬಲೆಗೆ ಕೆಡವಿ ಕೋಟ್ಯಂತರ ರೂಪಾಯಿ ದೋಚಿದ್ದಾರೆ.

    ವಿವರಣೆಗೆ ಬರುವುದಾದರೆ, ಪೊಲೀಸ್ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ನಿರುದ್ಯೋಗಿ ಯುವಕರಿಗೆ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಗ್ಯಾಂಗ್ ಒಂದು ವಂಚಿಸಿರುವ ಘಟನೆ ಆಂಧ್ರದ ವಿಶಾಖಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣದ ಪ್ರಮುಖ ಆರೋಪಿಗಳಾದ ಹನುಮಂತ ರಮೇಶ್ ಮತ್ತು ಆತನ ಗೆಳತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಗ್ಯಾಂಗ್​ ಬರೋಬ್ಬರಿ 3 ಕೋಟಿ ರೂ. ವಸೂಲಿ ಮಾಡಿದೆ.

    ಪ್ರಮುಖ ಆರೋಪಿ ಹನುಮಂತು ರಮೇಶ್ (47) ಅಡವಿವರಂನ ಆರ್‌ಆರ್ ಟವರ್ಸ್‌ನಲ್ಲಿ ವಾಸವಿದ್ದಾನೆ. ಈತನಿಗೆ ಈಗಾಗಲೇ ಇಬ್ಬರು ಪತ್ನಿಯರಿದ್ದಾರೆ. ಈತ ಇತ್ತೀಚೆಗೆ ಮತೊಬ್ಬ ಗೆಳತಿಯೊಂದಿಗೆ ವಾಸವಿದ್ದಾನೆ. ಕೆಲ ದಿನಗಳಿಂದ ತನ್ನ ಗೆಳತಿ ಹಾಗೂ ಕೆಲವರ ಜತೆ ಸೇರಿಕೊಂಡು ಆಂಧ್ರ ಪ್ರದೇಶದ ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆ ನೀಡುವುದಾಗಿ ಯುವಕರಲ್ಲಿ ನಂಬಿಕೆ ಹುಟ್ಟಿಸಿ, ಕೋಟ್ಯಂತರ ಹಣ ದೋಚಿ ವಂಚನೆ ಮಾಡಿದ್ದಾನೆ. ಈ ಕ್ರಮದಲ್ಲಿ ಅನೇಕ ಮಧ್ಯವರ್ತಿಗಳು ಸಹ ಈ ಗ್ಯಾಂಗ್‌ಗೆ ಸಹಾಯ ಮಾಡಿದ್ದಾರೆ. ಸುಮಾರು 30 ಮಂದಿಯಿಂದ ಬರೋಬ್ಬರಿ 3 ಕೋಟಿ ರೂ.ವರೆಗೆ ನಗದನ್ನು ವಸೂಲಿ ಮಾಡಿ ನಾಪತ್ತೆಯಾಗಿದ್ದಾರೆ.

    ತಾವು ಮೋಸ ಹೋಗಿರುವುದು ಗೊತ್ತಾದ ಬಳಿಕ ಸಂತ್ರಸ್ತ ಯುವಕರು ಪೊಲೀಸರಿಗೆ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ ಆರೋಪಿಗಳು ಹೈದರಾಬಾದ್‌ನಲ್ಲಿರುವುದು ಕಂಡುಬಂದಿತು. ಪೊಲೀಸ್ ಕಮಿಷನರ್ ಸೂಚನೆ ಮೇರೆಗೆ ಟಾಸ್ಕ್ ಪೋರ್ಸ್ ತಂಡಗಳು ಹೈದರಾಬಾದ್​ಗೆ ತೆರಳಿ ಹನುಮಂತು ರಮೇಶ್ ಹಾಗೂ ಆತನ ಗೆಳತಿಯನ್ನು ಬಂಧಿಸಿದ್ದಾರೆ.

    ಆರೋಪಿಗಳಿಬ್ಬರನ್ನು ಕಳೆದ ಗುರುವಾರ ಸಂಜೆ ಟಾಸ್ಕ್ ಫೋರ್ಸ್ ಕಚೇರಿಗೆ ಕರೆತರಲಾಗಿದೆ. ಬಳಿಕ ನಗರ ಪೊಲೀಸ್ ಆಯುಕ್ತರ ಮುಂದೆ ಹಾಜರುಪಡಿಸಲಾಯಿತು. ಬಳಿಕ ಇಬ್ಬರು ರಹಸ್ಯ ಪ್ರದೇಶಕ್ಕೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ. (ಏಜೆನ್ಸೀಸ್​)

    ನಮ್ಮ ಬಸವ ಸಿನಿಮಾದ ಗೌರಿ ಈಗ ಹೇಗಿದ್ದಾರೆ? ಏನು ಮಾಡ್ತಿದ್ದಾರೆ? ಇಲ್ಲಿದೆ ಮಾಹಿತಿ…

    ಫ್ರೆಂಡ್ಸ್​ ಎಲ್ಲ ಒಟ್ಟಿಗೆ ಕುಳಿತು ಆ ಸಿಡಿಯನ್ನು ನೋಡಿದ್ದೆವು: ಮಿಲ್ಕಿ ಬ್ಯೂಟಿ ತಮನ್ನಾ ಓಪನ್​ ಟಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts