More

    ಏಕಕಾಲದಲ್ಲಿ 5 ಸರ್ಕಾರಿ ಕೆಲಸ ಗಿಟ್ಟಿಸಿದ ಯುವತಿ! ಆಯ್ದುಕೊಂಡ ಹುದ್ದೆ, ಕಾರಣ ತಿಳಿದ್ರೆ ಮೆಚ್ಚಿಕೊಳ್ತೀರಾ

    ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಂದೇ ಒಂದು ಸರ್ಕಾರಿ ನೌಕರಿ ಗಿಟ್ಟಿಸುವುದೆಂದರೆ ಸುಲಭದ ಮಾತಲ್ಲ. ಜವಾನನ ಕೆಲಸಕ್ಕೂ ಕೂಡ ಇಂಜಿಯರ್​ ಓದಿದವರು ಸಹ ಅರ್ಜಿ ಸಲ್ಲಿಸುತ್ತಾರೆ. 100 ಹುದ್ದೆ ಇದ್ದರೆ ಅದಕ್ಕೆ ಲಕ್ಷಾಂತರ ಮಂದಿ ಅರ್ಜಿ ಸಲ್ಲಿಸುತ್ತಾರೆ. ಇಷ್ಟೊಂದು ಸ್ಪರ್ಧೆ ಇರುವಾಗ ಸರ್ಕಾರಿ ಕೆಲಸ ಗಿಟ್ಟಿಸಲು ಕಠಿಣ ಪರಿಶ್ರಮದ ಅವಶ್ಯಕತೆ ಇದೆ. ಆದರೆ, ಏಕಕಾಲದಲ್ಲಿ ಒಂದಲ್ಲ ಐದು ಸರ್ಕಾರಿ ಕೆಲಸ ಗಿಟ್ಟಿಸುವುದೆಂದರೆ ತಮಾಷೆಯ ಮಾತಲ್ಲ. ಇಂತಹ ಪ್ರತಿಭೆಗಳು ತುಂಬಾ ಅಪರೂಪವಾಗಿ ಕಾಣಸಿಗುತ್ತವೆ. ಇತ್ತೀಚೆಗಷ್ಟೇ ತೆಲಂಗಾಣದ ಯುವತಿಯೊಬ್ಬಳಿಗೆ ಒಂದೇ ಬಾರಿಗೆ ಐದು ಸರ್ಕಾರಿ ಕೆಲಸ ಸಿಕ್ಕಿದೆ. ಆ ಯಶಸ್ಸಿನ ಹಿಂದಿನ ಕಾರಣ ಏನು ಎಂದು ಈಗ ನೋಡೋಣ.

    ಕ್ರಿಕೆಟ್‌ನಲ್ಲಿ ಯುವರಾಜ್ ಸಿಂಗ್ ಒಂದೇ ಓವರ್‌ನ ಆರು ಎಸೆತಗಳಲ್ಲಿ ಆರು ಸಿಕ್ಸರ್ ಬಾರಿಸುವುದನ್ನು ನೋಡಿದ್ದೇವೆ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶಗಳಲ್ಲಿ ಸತತ ರ್ಯಾಂಕ್‌ಗಳನ್ನು ಸಾಧಿಸಿದ ಕಾರ್ಪೊರೇಟ್ ಶಿಕ್ಷಣ ಸಂಸ್ಥೆಗಳನ್ನು ನಾವು ನೋಡಿದ್ದೇವೆ. ಆದರೆ, ತಾನು ಬರೆದ ಪ್ರತಿ ಸರ್ಕಾರಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ ಯುವತಿಯೊಬ್ಬಳಿಗೆ ಒಂದೇ ಬಾರಿಗೆ ಐದು ಕೆಲಸ ಸಿಕ್ಕಿರುವುದು ನಿಜಕ್ಕೂ ಅಪರೂಪವೇ ಸರಿ. ಅಲ್ಲದೆ, ತಮ್ಮ ಯಶಸ್ಸಿನೊಂದಿಗೆ ಅನೇಕ ಜನರಿಗೆ ಯುವತಿ ಸ್ಫೂರ್ತಿಯಾಗಿದ್ದಾಳೆ.

    ತೆಲಂಗಾಣದ ಜಗಿತ್ಯಾಲ ಮಂಡಲದ ಲಾಗಲಮರ್ರಿ ಗ್ರಾಮದ ಪುಪ್ಪಾಳ ಭೂಮಯ್ಯ ಮತ್ತು ರಾಮ ದಂಪತಿ ಕೃಷಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ದಂಪತಿಗೆ ಮಮತಾ ಎಂಬ ಮಗಳಿದ್ದಾಳೆ. ಮಮತಾಳಿಗೆ ಬಾಲ್ಯದಿಂದಲೂ ಸರ್ಕಾರಿ ನೌಕರಿ ಮಾಡಬೇಕೆಂಬ ಬಲವಾದ ಆಸೆ ಇತ್ತು. ಅಲ್ಲದೆ ಕುಟುಂಬದ ಪರಿಸ್ಥಿತಿಯನ್ನು ನೋಡಿ, ಕಷ್ಟಪಟ್ಟು ಓದಿ, ಸರ್ಕಾರಿ ನೌಕರಿ ಗಿಟ್ಟಿಸಿ, ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸಬೇಕು ಅಂದುಕೊಂಡಿದ್ದಳು. ಆರ್ಥಿಕ ಭದ್ರತೆಯೊಂದಿಗೆ ಸಮಾಜ ಸೇವೆ ಮಾಡಬೇಕೆಂದು ದೃಢವಾಗಿ ನಿರ್ಧರಿಸಿದಳು.

    ತಾನು ಅಂದುಕೊಂಡಂತೆ ಕಷ್ಟಪಟ್ಟು ಓದಿದ ಮಮತಾ ಬಿಇಡಿ ಮತ್ತು ಎಂ.ಕಾಂ ಮುಗಿಸಿದ ನಂತರ ಸಿರಿಸಿಲ್ಲದ ಗುರುಕುಲ ಪದವಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುವ ಮೂಲಕ ವಿವಿಧ ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದ್ದರು. ಇದರ ಫಲವಾಗಿ ಗುರುಕುಲ ನೇಮಕಾತಿ ಪರೀಕ್ಷೆಯಲ್ಲಿ ಪದವಿ ಉಪನ್ಯಾಸಕಿ, ವಾಣಿಜ್ಯ ವಿಭಾಗದಲ್ಲಿ ಜೂನಿಯರ್ ಲೆಕ್ಚರರ್, ಸಮಾಜ ವಿಭಾಗದಲ್ಲಿ ಪಿಜಿಟಿ ಹಾಗೂ ಟಿಜಿಟಿ ಹುದ್ದೆಗಳನ್ನು ಪಡೆದಿದ್ದಳು. ಇದರೊಂದಿಗೆ ಕಳೆದ ವರ್ಷ ಟಿಎಸ್‌ಪಿಎಸ್‌ಸಿ ನಡೆಸಿದ ಪೌರಾಡಳಿತ ವಿಭಾಗದ ಪರೀಕ್ಷೆಯಲ್ಲಿ ಜೂನಿಯರ್ ಅಕೌಂಟ್ಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಆದರೆ ಪದವಿ ಉಪನ್ಯಾಸಕಿಯಾಗಿ ವಿದ್ಯಾರ್ಥಿಗಳ ಸೇವೆ ಮಾಡುತ್ತೇನೆ ಎಂದು ಉಪನ್ಯಾಸಕಿ ಹುದ್ದೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

    ಮಗಳು ಉನ್ನತ ಸ್ಥಾನದಲ್ಲಿ ಇರಬೇಕು ಎನ್ನುವ ಮಮತಾ ಪಾಲಕರ ಆಸೆ ಈಡೇರಿದ್ದು, ಸಂತಸದಲ್ಲಿ ಮುಳುಗಿದ್ದಾರೆ. ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳುವುದು ಗಗನ ಕುಸುಮವಾಗುತ್ತಿರುವ ಕಾಲದಲ್ಲಿ ತಾನು ಬರೆದ ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣಾಳಾಗುವ ಮೂಲಕ ಐದು ಸರ್ಕಾರಿ ಕೆಲಸ ಗಿಟ್ಟಿಸಿದ ಮಮತಾ ಇಂದಿನ ಯುವಜನತೆಗೆ ಸ್ಪೂರ್ತಿಯಾಗಿದ್ದಾರೆ. ಮಮತಾ ಅವರ ಈ ಸಾಧನೆಯನ್ನು ಮೆಚ್ಚಿ ಸ್ಥಳೀಯರ ಜತೆಗೆ ಹಲವು ಸಾರ್ವಜನಿಕ ಪ್ರತಿನಿಧಿಗಳು ಅಭಿನಂದಿಸಿದ್ದಾರೆ. ಮಮತಾ ಸಾಧನೆ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ರೂಪದಲ್ಲಿ ಹಂಚಿಕೊಳ್ಳಿ. (ಏಜೆನ್ಸೀಸ್​)

    ಕ್ರಿಕೆಟ್​​ ಇತಿಹಾಸದಲ್ಲೇ ನೀವು ಇದುವರೆಗೂ ನೋಡಿರದ ವಿಚಿತ್ರ ರನೌಟ್ ಇದು! ವಿಡಿಯೋ ವೈರಲ್​​

    ಕೇವಲ 2 ನಿಮಿಷದಲ್ಲಿ ನಿಮ್ಮ ಹಲ್ಲುಗಳು ಮುತ್ತಿನಂತೆ ಹೊಳೆಯುವಂತೆ ಮಾಡಲು ಇಲ್ಲಿದೆ ಸೂಪರ್​ ಟಿಪ್ಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts