More

    IPL 2024: ಮೊದಲ ಪಂದ್ಯದಲ್ಲೇ ‘ಸಿಂಹ’ ಪಡೆಗೆ ಭರ್ಜರಿ ಜಯ! ಎಡವಿದ ಆರ್​ಸಿಬಿ

    ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್​ 2024ರ ಆವೃತ್ತಿ ಸಿಎಸ್​ಕೆ ಮತ್ತು ಆರ್​ಸಿಬಿ ನಡುವಿನ ಪಂದ್ಯದ ಮೂಲಕವೇ ಅದ್ದೂರಿ ಚಾಲನೆ ಪಡೆದುಕೊಂಡಿತು. ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್​ಗಳಾದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೆಣಸಾಡಿದ್ದು, ಕೊನೆಯ ಹಂತದವರೆಗೂ ವೀಕ್ಷಕರನ್ನು ಕರೆದೊಯ್ದ ಈ ಪಂದ್ಯದಲ್ಲಿ ಅಂತಿಮವಾಗಿ ಭರ್ಜರಿ ಗೆಲುವು ದಾಖಲಿಸಿದ್ದು ಸಿಎಸ್​ಕೆ.

    ಈ ಪಂದ್ಯದ ಟಾಸ್ ಗೆದ್ದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದರು. ಆರಂಭಿಕರಾಗಿ ಕಣಕ್ಕಿಳಿದ ಆರ್​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೇಸಿಸ್​ ಮತ್ತು ರನ್​ ಮಷಿನ್​ ವಿರಾಟ್ ಕೊಹ್ಲಿ ಉತ್ತಮವಾಗಿ ಜತೆಯಾಟವಾಡಿದರು. ಆದರೆ, ಫಾಫ್ 35 ರನ್​ಗೆ ಔಟ್​ ಆಗುವ ಮೂಲಕ​ ವಿಕೆಟ್ ಒಪ್ಪಿಸಿದರು. ಡುಪ್ಲೆಸಿಸ್ ಪತನದ ಬೆನ್ನಲ್ಲೇ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡ ಆರ್​ಸಿಬಿ ಭಾರೀ ಸಂಕಷ್ಟಕ್ಕೆ ಸಿಲುಕಿತು.

    ಅಂತಿಮವಾಗಿ ದಿನೇಶ್​ ಕಾರ್ತಿಕ್ ಮತ್ತು ಅನುಜ್ ರಾವತ್​ ಇಬ್ಬರ ಜತೆಯಾಟದಿಂದ ಆರ್​ಸಿಬಿ 174 ರನ್​ಗಳ ಗುರಿಯನ್ನು ಸಿಎಸ್​ಕೆಗೆ ನೀಡಿತು. ಇನ್ನು ಈ ಟಾರ್ಗೆಟ್​ನ ಚೇಸ್​ ಮಾಡಲು ಕಣಕ್ಕಿಳಿದ ಕ್ಯಾಪ್ಟನ್​ ರುತುರಾಜ್​ ಮೂರು ಫೋರ್​ ಬಾರಿಸುವ ಮೂಲಕ 15 ರನ್​ ಕಲೆಹಾಕಿ ಪೆವಿಲಿಯನ್ ಸೇರಿದರು. ಇನ್ನು 35 ರನ್​ ಗಳಿಸಿ ಔಟ್ ಆದ ಸಚಿನ್​ ರವೀಂದ್ರ ಮೊದಲ ಪಂದ್ಯದಲ್ಲೇ ಎಲ್ಲರ ಗಮನಸೆಳೆದರು.

    27 ರನ್​ ಗಳಿಸಿ ಅಜಿಂಕ್ಯ ರಹಾನೆ ಔಟ್ ಆದರೆ, 22 ರನ್​ ಕೊಟ್ಟು ಮಿಚೆಲ್ ಪೆವಿಲಿಯನ್ ಸೇರಿದರು. ಕಡೆಯ ತನಕ ರೋಚಕವಾಗಿ ಸಾಗಿದ ಪಂದ್ಯದಲ್ಲಿ ಸಿಎಸ್​ಕೆಗೆ ಗೆಲುವು ತಂದುಕೊಟ್ಟಿದ್ದು ಶಿವಂ ದುಬೆ ಅಬ್ಬರ. ಒಟ್ಟಿನಲ್ಲಿ ಎಂದಿನಂತೆ ಸೀಸನ್​ ಪ್ರಾರಂಭದ ಪಂದ್ಯಗಳಲ್ಲಿ ಶುಭಾರಂಭ ಮಾಡುಂತೆ ಸಿಎಸ್​ಕೆ ಈ ಬಾರಿಯೂ ಮಾಡಿದ್ದು, ತನ್ನ ಮೊದಲನೇ ಗೆಲುವನ್ನು ದಾಖಲಿಸಿದೆ. ಇದು ನೂತನ ಕ್ಯಾಪ್ಟನ್​ ರುತುರಾಜ್​ ನಾಯಕತ್ವದಲ್ಲಿ ಪಡೆದ ಮೊದಲ ಜಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts