More

    ರಾಜಕೀಯಕ್ಕೆ ಊರ್ವಶಿ ರೌಟೇಲಾ ಎಂಟ್ರಿ? ಸಂಚಲನ ಮೂಡಿಸಿತು ನಟಿಯ ಹೇಳಿಕೆ!

    ಮುಂಬೈ: ಬಾಲಿವುಡ್​ನ ಹಾಟ್​ ಬೆಡಗಿ ನಟಿ ಊರ್ವಶಿ ರೌಟೇಲಾ ಸದ್ಯ ತಮ್ಮ ಮುಂದಿನ ಜೆಎನ್‌ಯು: ಜಹಾಂಗೀರ್ ನ್ಯಾಷನಲ್ ಯೂನಿವರ್ಸಿಟಿ ಚಿತ್ರದ ಬಿಡುಗಡೆ ಕಾರ್ಯದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಆದರೆ, ಈ ಮಧ್ಯೆ ನಟಿ ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ಸುದ್ದಿ ವ್ಯಾಪಕವಾಗಿ ಕೇಳಿಬಂದ ಬೆನ್ನಲ್ಲೇ ಊರ್ವಶಿಯಿಂದ ಶಾಕಿಂಗ್​ ಉತ್ತರವೊಂದು ಹೊರಬಿದ್ದಿದೆ.

    ಇದನ್ನೂ ಓದಿ: ಮತದಾನ ಜಾಗೃತಿ ಮೂಡಿಸಿದ ಜಾವಗಲ್ ಶ್ರೀನಾಥ್

    ಜೆಎನ್​ಯು ಸಿನಿಮಾ ಕೆಲಸಗಳಲ್ಲಿ ನಿರತರಾಗಿರುವ ಊರ್ವಶಿ ರೌಟೇಲಾಗೆ ಸುದ್ದಿಗಾರರೊಬ್ಬರು ರಾಜಕೀಯ ಸೇರುವ ಆಸಕ್ತಿ ಇದೆಯೇ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ತಕ್ಷಣವೇ ಪ್ರತಿಕ್ರಿಯಿಸಿದ ಊರ್ವಶಿ, “ನನಗೆ ಈಗಾಗಲೇ ಟಿಕೆಟ್ ಸಿಕ್ಕಿದೆ. ಈಗ ನಾನು ರಾಜಕೀಯಕ್ಕೆ ಹೋಗಬೇಕೇ ಅಥವಾ ಬೇಡವೇ ಎಂದು ನಿರ್ಧರಿಸಬೇಕು” ಎಂದು ಹಾಸ್ಯಸ್ಪದವಾಗಿ ಹೇಳಿದರು.

    ನಾನು ರಾಜಕೀಯಕ್ಕೆ ಹೋಗುತ್ತೇನೋ, ಇಲ್ಲವೋ ಎಂಬುದು ನನಗೆ ತಿಳಿದಿಲ್ಲ. ಆದರೆ ಖಂಡಿತವಾಗಿ ಒಂದಂತು ಅಭಿಮಾನಿಗಳಿಂದ ತಿಳಿಯಲು ಬಯಸುವುದು ಏನಂದ್ರೆ, ನಾನು ರಾಜಕೀಯಕ್ಕೆ ಸೇರಬೇಕೇ ಅಥವಾ ಬೇಡವೇ ಎಂಬುದನ್ನು ಅವರು ನನಗೆ ಸ್ಪಷ್ಟಪಡಿಸಬೇಕು ಎಂದು ಹೇಳಿದರು. ಸದ್ಯ ನಟಿಯ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, “ರಾಜಕೀಯ ಪ್ರವೇಶಿಸಲು ಟಿಕೆಟ್ ಪಡೆದ ಮೊದಲ ಕಿರಿಯ ಭಾರತೀಯ ಏಷ್ಯಾದ ಮಹಿಳೆ” ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

    ಇದನ್ನೂ ಓದಿ: ಮಹಿಳೆ ಶಕ್ತಿ ಸ್ವರೂಪಿ ಎಂದ ದೇಶ ಭಾರತ; ಅಕ್ಕನ ಬಳಗದ ಅಧ್ಯಕ್ಷೆ ಚಂಪಾ ಹುಣಸಿಕಟ್ಟಿ ಹೇಳಿಕೆ

    ಜೆಎನ್‌ಯು: ಜಹಾಂಗೀರ್ ನ್ಯಾಷನಲ್ ಯೂನಿವರ್ಸಿಟಿ ಚಿತ್ರದಲ್ಲಿ ರವಿ ಕಿಶನ್, ರಶ್ಮಿ ದೇಸಾಯಿ, ಪಿಯೂಷ್ ಮಿಶ್ರಾ, ಸೊನ್ನಳ್ಳಿ ಸೇಗಲ್, ಮತ್ತು ವಿಜಯ್ ರಾಜ್ ಮುಂತಾದವರು ನಟಿಸಿದ್ದಾರೆ. ಚಿತ್ರವು ಇದೇ ಏಪ್ರಿಲ್ 5, 2024ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ,(ಏಜೆನ್ಸೀಸ್).

    ‘ಇದೆಲ್ಲವೂ ನನ್ನ ಕುಟುಂಬದ ಮೇಲೆ ಪರಿಣಾಮ ಬೀರಿದೆ’; ಕಡೆಗೂ ಮೌನ ಮುರಿದ ಚಹಲ್ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts