More

    ಮಹಿಳೆ ಶಕ್ತಿ ಸ್ವರೂಪಿ ಎಂದ ದೇಶ ಭಾರತ; ಅಕ್ಕನ ಬಳಗದ ಅಧ್ಯಕ್ಷೆ ಚಂಪಾ ಹುಣಸಿಕಟ್ಟಿ ಹೇಳಿಕೆ

    ಹಾವೇರಿ: ಮಹಿಳೆಯನ್ನು ಕೇವಲ ಮಹಿಳೆ ಎಂದು ನೋಡದೇ ಆಕೆ ಶಕ್ತಿ ಸ್ವರೂಪಿಣಿ ಎಂದು ಮೆರೆಸಿದಂತಹ ನಾಡು ನಮ್ಮ ಭಾರತ. ಮಹಿಳಾ ದಿನಾಚರಣೆಯನ್ನು ಒಂದು ದಿನಕ್ಕೆ ಸೀಮಿತ ಮಾಡದೇ ಪ್ರತಿನಿತ್ಯವೂ ಉತ್ಸಾಹದಿಂದ ಸಾಧನೆ ಮಾಡುವಲ್ಲಿ ಹೆಜ್ಜೆ ಇಡೋಣ ಎಂದು ಶ್ರೀ ಹುಕ್ಕೇರಿ ಮಠದ ಅಕ್ಕನ ಬಳಗದ ಅಧ್ಯಕ್ಷೆ ಚಂಪಾ ಎಂ. ಹುಣಸಿಕಟ್ಟಿ ಕರೆ ನೀಡಿದರು.
    ನಗರದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಗುರುವಾರ ಶ್ರೀ ಹುಕ್ಕೇರಿ ಮಠದ ಅಕ್ಕನ ಬಳಗದ ವತಿಯಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಶಿಕ್ಷಕಿ ಲತಾ ಹಳಕೊಪ್ಪ ಮಾತನಾಡಿ, ನಮ್ಮ ನಾಡಿನ ಹೆಮ್ಮೆಯ ಸಾಧಕಿ ಸುಧಾ ಮೂರ್ತಿ ಅವರ ಸರಳತೆ, ಧೈರ್ಯ, ಶಿಸ್ತು, ಜ್ಞಾನವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಕೌದಿ ಹೊಲಿದು ಹೊರದೇಶಕ್ಕೂ ರಫ್ತು ಮಾಡುತ್ತಿರುವ ಅವಿದ್ಯಾವಂತೆ ಶಾರದಮ್ಮ ಅವರು ನಮಗೆ ಸ್ಫೂರ್ತಿಯಾಗಬೇಕು ಎಂದರು.
    ಅಮೃತಮ್ಮ ಶೀಲವಂತರ ಮಾತನಾಡಿ, ಸಂಸಾರದಲ್ಲಿ ಮಹಿಳೆ ಗಂಡಿಗಿಂತಲೂ ಹೆಚ್ಚಿನ ಜವಾಬ್ದಾರಿ ಹೊರುತ್ತಾಳೆ. ಒಬ್ಬ ಮಹಿಳೆ ಸಂಸ್ಕಾರವಂತಳಾದರೆ ಸುಂದರ ಸಂಸಾರವಾಗುತ್ತದೆ ಎಂದು ಹೇಳಿದರು.
    ಸಂಘದ ಗೌರವಾಧ್ಯಕ್ಷೆ ಲಲಿತಾ ಹೊರಡಿ, ಪತ್ರಕರ್ತೆ ತೇಜಸ್ವಿನಿ ಕಾಶೆಟ್ಟಿ, ಪಾರಂಪರಿಕ ವೈದ್ಯೆ ಅನಿತಾ ಶಿರೂರ, ರೇಖಾ ಮಾಗನೂರ, ಅರುಣ ಅರಣಿ, ಸುಮಾ ಗಡಾದ, ಕಸ್ತೂರಮ್ಮ ಮಹಾರಾಜಪೇಟೆ, ರಾಜೇಶ್ವರಿ ಬಿಷ್ಟನಗೌಡರ, ಸುರೇಖಾ ಮಳಗಿ, ಸ್ಮಿತಾ ಕುರುಬಗೊಂಡ ಶೆಟ್ಟರ, ವನಿತಾ ಮಾಗನೂರ, ಪುಷ್ಪಾ ಸಾತೇನಹಳ್ಳಿ, ಲಲಿತಮ್ಮ ಅಂಕಲಕೋಟಿ, ಸರೋಜಮ್ಮ ಬಿಂಕದಕಟ್ಟಿ, ಶಶಿಕಲಾ ತುರುಮರಿ, ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts