More

    ನಾನು ಮರಾಠ ಗಲ್ಲಿಯಲ್ಲಿ ಆಡಿ ಬೆಳೆದವನು; ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ

    ಹಾವೇರಿ: ನಾನು ಚಿಕ್ಕಂದಿನಿಂದಲೂ ಹುಬ್ಬಳ್ಳಿಯ ಮರಾಠ ಗಲ್ಲಿಯಲ್ಲಿ ಆಟ ಆಡಿ ಬೆಳೆದಿದ್ದು, ಈ ಸಮಾಜದ ಜತೆಗೆ ನನಗೆ ಉತ್ತಮ ಸಂಬಂಧವಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
    ಶನಿವಾರ ನಗರದ ಮರಾಠ ಸಮುದಾಯದ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಶಿವಾಜಿ ಮಹಾರಾಜರ ಅಪ್ಪಟ ಶಿಷ್ಯ. ಶಿವಾಜಿ ಮಹಾರಾಜರು ಯಾವುದಕ್ಕೆ ಹೋರಾಟ ಮಾಡಿದ್ದರು ಅದನ್ನು ಮೋದಿಯವರು ಮುಂದುವರೆಸಿದ್ದಾರೆ. ಮರಾಠ ಸಮುದಾಯ ಯಾವಾಗಲೂ ದೇಶಪ್ರೇಮ ಹೊಂದಿರುವ ಸಮುದಾಯ. ದೇಶವನ್ನು ಬಲಗೊಳಿಸಲು ಶಿವಾಜಿ ಮಹಾರಾಜರ ಕನಸು ನನಸು ಮಾಡಲು ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸುವಂತೆ ಮನವಿ ಮಾಡಿದರು.
    ನಾನು ಮುಖ್ಯಮಂತ್ರಿಯಾಗಿದ್ದಾಗ ಮರಾಠ ಸಮುದಾಯದ ಅಭಿವೃದ್ದಿ ನಿಗಮ ಮಾಡಿ ನೂರು ಕೋಟಿ ರೂ. ನೀಡಿದ್ದೇನೆ. ಇದರ ಮೂಲಕ ಸುಮಾರು 27 ಸಾವಿರ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಕೊಟ್ಟಿದ್ದೇನೆ. ಸುಮಾರು ಎಂಟು ಸಾವಿರ ಮರಾಠ ಸಮುದಾಯದ ರೈತರಿಗೆ ಗಂಗಾ ಕಲ್ಯಾಣ ಬೋರ್‌ವೆಲ್ ಹಾಕಿಸಿಕೊಟ್ಟಿದ್ದೇವೆ. ನಾನು ಈ ಸಮಾಜದೊಂದಿಗೆ ಯಾವಾಗಲೂ ಇದ್ದೇನೆ. ಸಮಾಜದ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಈಡೇರಿಸುವ ಕೆಲಸ ಮಾಡುತ್ತೇನೆ ಎಂದರು.
    ಸಭೆಯಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುಭಾಷ ಚೌಹಾಣ, ಹಾಗೂ ಮರಾಠ ಸಮುದಾಯದ ಪ್ರಮುಖರು ಪಾಲ್ಗೊಂಡಿದ್ದರು.
    ನಂತರ ವಿಶ್ವಕರ್ಮ ಸಮುದಾಯ ಹಾಗೂ ಸವಿತಾ ಸಮುದಾಯದ ಮುಖಂಡರೊಂದಿಗೆ ಪ್ರತ್ಯೇಕ ಸಭೆಯನ್ನೂ ನಡೆಸಿ ಮತಯಾಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts