More

    ಬಸವನಬಾಗೇವಾಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ

    ಬಸವನಬಾಗೇವಾಡಿ: ಅಣ್ಣ ಬಸವಣ್ಣನವರು ಹಾಗೂ ಅವರ ಸಮಕಾಲೀನ ಬಸವಾದಿ ಶರಣರ ಆದರ್ಶ, ತತ್ವ, ಸಿದ್ಧಾಂತಗಳನ್ನು ಚಾಚು ತಪ್ಪದೆ ಆಚರಣೆ ಮಾಡುವವರೇ ಕಾಂಗ್ರೆಸ್ ಪಕ್ಷದವರು ಎಂದು ಸಹಕಾರಿ ಮಹಾಮಂಡಳಿ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.

    ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಯುವ ನಾಯಕಿ ಸಂಯುಕ್ತ ಶಿವಾನಂದ ಪಾಟೀಲ ಅವರಿಗೆ ಅವಕಾಶ ಮಾಡಿಕೊಟ್ಟಿದಕ್ಕೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಬ್ಲಾಕ್ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್‌ನ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಪಕ್ಷದ ಹಿರಿಯರು, ಮುಖಂಡರು, ಅಭಿಮಾನಿಗಳು ಬಸವೇಶ್ವರರ ಮೂರ್ತಿಗೆ ಮಾಲಾರ್ಪಣೆ ಮಾಡಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮದ ವೇಳೆ ಅವರು ಮಾತನಾಡಿದರು.

    ಈ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷದವರು ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡಿಲ್ಲ. ಆದರೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಐದು ಮಹಿಳೆಯರಿಗೆ ಅವಕಾಶ ನೀಡಿ ಎಲ್ಲರಿಗೂ ಸಮಪಾಲು ಸಮಬಾಳು ಎಂಬ ತತ್ವದಡಿ ಬಸವಾದಿ ಶರಣರ ಆದರ್ಶವನ್ನು ಚಾಚು ತಪ್ಪದೆ ಅನುಸರಿಸಿದೆ ಎಂದರು.

    ವಿಜಯೋತ್ಸವದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಶೇಖರ ಗೊಳಸಂಗಿ, ಸುರೇಶಗೌಡ ಪಾಟೀಲ, ಬಸವರಾಜ ಹಾರಿವಾಳ, ಸಂಗಮೇಶ ಓಲೆಕಾರ, ಶಂಕರಗೌಡ ಬಿರಾದಾರ, ಪುರಸಭೆ ಸದಸ್ಯರಾದ ನಜೀರ್ ಅಹ್ಮದ್ ಗಣಿ, ಪ್ರವೀಣ ಪುಜಾರಿ, ಅಬ್ದುಲ್ ರಜಾಕ್ ಚೌಧರಿ, ಮುಖಂಡರಾದ ಕಮಲಸಾಬ ಕೊರಬು, ಸಂಗಯ್ಯ ಕಾಳಹಸ್ತೇಶ್ವರಮಠ, ಭರತ್ ಅಗರವಾಲ, ಬಸಣ್ಣ ದೇಸಾಯಿ, ರವಿ ಚಿಕ್ಕೊಂಡ, ಬಸವರಾಜ ಕೋಟಿ, ಉದಯಕುಮಾರ್ ಮಾಗ್ಲೇಂಕರ, ಅಜೀಜ್ ಬಾಗವಾನ, ಎಂ.ಜಿ.ಆದಿಗೊಂಡ, ಸುಭಾಷ ಗಾಯಕವಾಡ , ಮತಾಬ್ ಬೊಮ್ಮನಹಳ್ಳಿ, ಅಶೋಕ ಚಲವಾದಿ, ಅಬ್ದುಲ್ ಚೌಧರಿ, ಕಾಶಿನಾಥ ರಾಠೋಡ, ಮಲ್ಲು ಕುಂಬಾರ, ರಮಜಾನ ಹೆಬ್ಬಾಳ, ಸದಾನಂದ ಬಶೆಟ್ಟಿ, ಮಲ್ಲು ಪಡಶೆಟ್ಟಿ, ಅಪ್ಪು ವಾಡೇದ, ಸಂಗಮೇಶ ಜಾಲಗೇರಿ, ದೇವೇಂದ್ರ ನಾಯಕ, ಸಂಜು ಕಲ್ಯಾಣಿ, ಪಿಂಟುಗೌಡ ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts