More

    ಆರು ವರ್ಷದ ಹಿಂದಿನ ಆ್ಯಪಲ್​​ ಸಾಂಗ್ ಮೋಡಿ​! ಶಿಕ್ಷಕನಿಗೆ ಹರಿದು ಬಂತು ಹಣದ ಹೊಳೆ

    ಹೈದರಾಬಾದ್​: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಸಾಮಾಜಿಕ ಜಾಲತಾಣವನ್ನು ಹೆಚ್ಚೆಚ್ಚು ಬಳಸುತ್ತಿದ್ದಾರೆ. ಜಾಲತಾಣ ಬಳಸದೇ ಇರುವವರು ಬಹಳ ಕಡಿಮೆ ಎಂದು ಹೇಳಬಹುದು. ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡುವುದರಿಂದ ಆಗುವ ನಷ್ಟವೇ ಹೆಚ್ಚು ಎಂಬುದು ಹಲವರ ಅಭಿಪ್ರಾಯ. ಆದರೆ ನೀವು ಅದನ್ನು ಸರಿಯಾದ ಕ್ರಮದಲ್ಲಿ ಬಳಸಿದರೆ, ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇದರಿಂದ ಎಷ್ಟೋ ಮಂದಿ ಜೀವನ ಸಹ ಕಟ್ಟಿಕೊಂಡಿದ್ದಾರೆ.

    ಕೆಲವರು ಜಾಲತಾಣವನ್ನು ಹೇಗೆಲ್ಲಾ ಬಳಸುತ್ತಿದ್ದಾರೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ನಾವು ಏನು ತಿನ್ನುತ್ತಿದ್ದೇವೆ, ಏನು ಕುಡಿಯುತ್ತಿದ್ದೇವೆ, ಎಲ್ಲಿಗೆ ಹೋಗುತ್ತಿದ್ದೇವೆ, ಏನು ಮಾಡುತ್ತಿದ್ದೇವೆ…ಹೀಗೆ ಎಲ್ಲವನ್ನೂ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಜಾಲತಾಣದಲ್ಲಿ ಸಾಕಷ್ಟು ವಿಧದಲ್ಲಿ ಹಣ ಸಂಪಾದಿಸುತ್ತಿದ್ದಾರೆ. ಅದೇ ರೀತಿ ಶಿಕ್ಷಕರೊಬ್ಬರು ಬಹಳ ಹಿಂದೆ ಮಾಡಿದ ವಿನೋದ ವಿಡಿಯೋವೊಂದು ಇದೀಗ ಶಿಕ್ಷಕನನ್ನು ಕೋಟಿಗಟ್ಟಲೆ ಹಣ ಗಳಿಸುವಂತೆ ಮಾಡಿದೆ. ಈ ಕುರಿತಾದ ಒಂದು ವಿಶೇಷ ಸ್ಟೋರಿ ಇಲ್ಲಿದೆ ನೋಡಿ.

    ಸಾಮಾಜಿಕ ಜಾಲತಾಣ ಯುಗದಲ್ಲಿ ಅನೇಕರು ತಮ್ಮ ವಿಡಿಯೋ ಮತ್ತು ಫೋಟೋಗಳನ್ನು ಹೊರ ಜಗತ್ತಿಗೆ ತೋರಿಸುತ್ತಲೇ ಇರುತ್ತಾರೆ. ಆದರೆ, ಯಾವ ವಿಡಿಯೋ ವೈರಲ್ ಆಗುತ್ತದೆ ಎಂಬುದನ್ನು ಯಾರೂ ಕೂಡ ಅಂದಾಜಿಸಲಾಗದು. ಹಲವು ವರ್ಷಗಳ ಹಿಂದೆ ಬಿಡುಗಡೆಯಾದ ಹಾಡುಗಳು ಈಗ ಟ್ರೆಂಡ್​ ಆಗಿವೆ. ಉದಾಹರಣೆಗೆ ನಟ ಹಾಗೂ ನಿರ್ದೇಶಕ ಉಪೇಂದ್ರ ಅಭಿನಯದ “ಉಪೇಂದ್ರ” ಚಿತ್ರದ ಕರಿಮಣಿ ಮಾಲೀಕ ನೀ ನಲ್ಲ ಹಾಡು ಇತ್ತೀಚೆಗೆ ಹಿಟ್​ ಆಗಿದ್ದನ್ನು ನೀವು ನೋಡಿರಬಹುದು. ಅದೇ ರೀತಿ ಐದಾರು ವರ್ಷಗಳ ಹಿಂದೆ ಶಾಲಾ ಶಿಕ್ಷಕರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್ ಮಾಡಿದ್ದ ಹಾಡು ಈಗ ಟ್ರೆಂಡ್​ ಸೃಷ್ಟಿಸಿದೆ.

    ಆಂಧ್ರ ಪ್ರದೇಶ ಮೂಲದ ಬಿಕ್ಕಿ ಶ್ರೀನಿವಾಸುಲು ಎಂಬುವರು ಅನಂತಪುರಂ ಜಿಲ್ಲೆಯ ಕಲ್ಯಾಣದುರ್ಗ ಮಂಡಲದ ಎಂಪಿಪಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಡು, ಆಟಗಳ ಮೂಲಕ ಕಲಿಸಿದರೆ ಮಕ್ಕಳು ಬೇಗ ಕಲಿಯುತ್ತಾರೆ ಎಂಬುದು ಬಹುತೇಕ ಶಿಕ್ಷಕರ ಅಭಿಪ್ರಾಯ. ಬಿಕ್ಕಿ ಶ್ರೀನಿವಾಸ್ ಕೂಡ ಅದನ್ನೇ ಯೋಚಿಸಿ, ಶಾಲಾ ಮಕ್ಕಳಿಗೆ ಹಾಡು, ಅಭಿನಯದ ಮೂಲಕ ಇಂಗ್ಲಿಷ್ ಕಲಿಸುತ್ತಿದ್ದಾರೆ.

    ಆರು ವರ್ಷಗಳ ಹಿಂದೆ “ಆ್ಯಪಲ್.. ಆ್ಯಪಲ್.. ರೆಡ್ ರೆಡ್ ಆ್ಯಪಲ್” ಎಂಬ ಹಾಡೊಂದನ್ನು ಶ್ರೀನಿವಾಸಲು ಮಾಡಿದ್ದರು. ಈ ಹಾಡಿನಲ್ಲಿ ಸೇಬು ಮತ್ತು ಬಾಳೆಹಣ್ಣುಗಳಂತಹ ಇತರ ಕೆಲವು ಹಣ್ಣುಗಳನ್ನು ತೋರಿಸಿ, ಬಣ್ಣ ಮತ್ತು ರುಚಿಯನ್ನು ವಿವರಿಸಲಾಗಿದೆ. ಇದನ್ನು ವಿದ್ಯಾರ್ಥಿಗಳು ಹಾಡಿದ್ದು, ವಿಡಿಯೋ ರೆಕಾರ್ಡ್​ ಮಾಡಿ, ಆ ವಿಡಿಯೋವನ್ನು ಸಾಮಾಜಿಕ ಜಾಲತಾಣ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದರು.

    5 ವರ್ಷಗಳ ಹಿಂದೆ ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡಿದ್ದ ಹಾಡು ಅಂದಿಗಿಂತ ಇಂದು ಸಿಕ್ಕಾಪಟ್ಟೆ ವೈರಲ್​ ಆಗಿದೆ. ಬರೋಬ್ಬರಿ 189 ಕೋಟಿ ವೀಕ್ಷಣೆಯಾಗಿದೆ. ಇಷ್ಟೊಂದು ವೀಕ್ಷಣೆಯಿಂದಾಗಿ ಶಿಕ್ಷಕ ಶ್ರೀನಿವಾಸಲು ಕೋಟಿಗಟ್ಟಲೆ ಹಣ ಸಂಪಾದಿಸಿದ್ದಾರೆ ಎಂದು ವರದಿಯಾಗಿದೆ. ಹಾಗೆಯೇ ‘ಬಟರ್ ಫ್ಲೈ ಬಟರ್ ಫ್ಲೈ’ ಹಾಡು ಮಾಡಿದಾಗ 1.1 ಕೋಟಿ ವೀವ್ಸ್ ಸಿಕ್ಕಿತ್ತು. ಇದಲ್ಲದೆ, ಈ ಶಿಕ್ಷಕ ಯೂಟ್ಯೂಬ್‌ನಲ್ಲಿ 50 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾರೆ. ಮಕ್ಕಳಿಗೆ ಹಾಡಿನ ರೂಪದಲ್ಲಿ ಕಲಿಸುತ್ತಿರುವ ಶ್ರೀನಿವಾಸ್ ಅವರನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ವಿನೋದದೊಂದಿಗೆ ಜ್ಞಾನವನ್ನು ಎರೆಯುತ್ತಿರುವ ಈ ಶಿಕ್ಷಕರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್​ ರೂಪದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್​)

    ಕುಬ್ಜನೆಂಬ ಕಾರಣಕ್ಕೆ ಸರ್ಕಾರ, ಹೈಕೋರ್ಟ್​ MBBS ನಿರಾಕರಿಸಿದ್ರೂ ಗಣೇಶ್​ ಬರಯ್ಯ ವೈದ್ಯರಾಗಿದ್ದೇ ರೋಚಕ!

    ನಮ್ಮ ಬಸವ ಸಿನಿಮಾದ ಗೌರಿ ಈಗ ಹೇಗಿದ್ದಾರೆ? ಏನು ಮಾಡ್ತಿದ್ದಾರೆ? ಇಲ್ಲಿದೆ ಮಾಹಿತಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts