More

    ನಮ್ಮ ಬಸವ ಸಿನಿಮಾದ ಗೌರಿ ಈಗ ಹೇಗಿದ್ದಾರೆ? ಏನು ಮಾಡ್ತಿದ್ದಾರೆ? ಇಲ್ಲಿದೆ ಮಾಹಿತಿ…

    ಹೈದರಾಬಾದ್​: ದಿವಂಗತ ನಟ ಪುನೀತ್​ ರಾಜ್​ಕುಮಾರ್​ ನಟನೆಯ “ನಮ್ಮ ಬಸವ” ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ಗೌರಿ ಮುಂಜಾಲ್ ಅವರ ಮುಖ ಪರಿಚಯ ಕನ್ನಡಿಗರಿಗಿದೆ.

    Gowri Munjal 4

    ನಮ್ಮ ಬಸವ ಮಾತ್ರವಲ್ಲ, ಶ್ರೀ ಮುರಳಿ ಅಭಿನಯದ ಗೋಪಿ, ಶಿವರಾಜ್​ಕುಮಾರ್​ ನಟನೆಯ ಗಂಡನ ಮನೆ, ಅಜಯ್​​ ರಾವ್​ ಅಭಿನಯದ ಜಾಜಿ ಮಲ್ಲಿಗೆ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಗೌರಿ ಅವರು ಕೊನೆಯದಾಗಿ ವಿನೋದ್​ ಪ್ರಭಾಕರ್​ ನಟನೆಯ ಹೋರಿ ಸಿನಿಮಾದಲ್ಲಿ ನಟಿಸಿದರು.

    Gowri Munjal 5

    ಕೆಲವೇ ಚಿತ್ರಗಳಲ್ಲಿ ನಟಿಸಿದರೂ ಕೂಡ ಸ್ಟಾರ್​ ನಟರ ಜತೆ ತೆರೆ ಹಂಚಿಕೊಂಡಿದ್ದರಿಂದ ಗೌರಿ ಅವರ ಮುಖ ಪರಿಚಯ ಕನ್ನಡಿಗರಿಗೆ ಚೆನ್ನಾಗೇ ಇದೆ. ಕನ್ನಡದಲ್ಲಿ ನಮ್ಮ ಬಸವ ಸಿನಿಮಾ ಬಳಿಕ ಯಾವೊಂದು ಸಿನಿಮಾ ಕೂಡ ಗೌರಿ ಅವರ ಕೈಹಿಡಿಯಲಿಲ್ಲ.

    Gowri Munjal 2

    ತೆಲುಗು, ಮಲಯಾಳಂನಲ್ಲೂ ನಟಿಸಿದ್ದಾರೆ. ಅಲ್ಲು ಅರ್ಜುನ್​ ನಟನೆಯ ಬನ್ನಿ ಸಿನಿಮಾ ಮೂಲಕವೇ ಗೌರಿ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಆದರೆ, ಬನ್ನಿ ಹೊರತುಪಡಿಸಿ ತೆಲುಗಿನಲ್ಲೂ ನಿರೀಕ್ಷಿತ ಗೆಲುವು ಸಿಗಲಿಲ್ಲ. ತೆಲುಗು, ಕನ್ನಡ ಮತ್ತು ಮಲಯಾಳಂ ಸೇರಿ ಒಟ್ಟು 16 ಸಿನಿಮಾಗಳಲ್ಲಿ ಗೌರಿ ನಟಿಸಿದ್ದಾರೆ.

    Gowri Munjal 1

    ಮೂಲತಃ ದೆಹಲಿಯವರಾದ ಗೌರಿ ಮಂಜುಳ, ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾದ ಬಳಿಕ ದೆಹಲಿಗೆ ಮರಳಿ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಗೌರಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಇರದ ಕಾರಣ ಅವರ ಈಗ ಹೇಗಿದ್ದಾರೆ ಎಂಬುದು ಅನೇಕರಿಗೆ ತಿಳಿದಿಲ್ಲ. ಆದರೆ, ಅವರ ಇತ್ತೀಚಿನ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಗೌರಿ ಅವರನ್ನು ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.

    Gowri Munjal 3

    ಫ್ರೈಡ್​ ಚಿಕನ್​ ತಿನ್ನುವುದು ನಿಮ್ಮ ಸಾವನ್ನು ಖರೀದಿಸಿದಂತೆ! ಇಲ್ಲಿದೆ ಆಘಾತಕಾರಿ ಮಾಹಿತಿ

    ಸಿಕ್ಕರೆ ಇಂಥಾ ಗಂಡ ಸಿಗಲಿ ಇಲ್ಲದಿದ್ರೆ ಮದ್ವೆನೇ ಬೇಡ ಅಂತಾರೆ ಹುಡ್ಗೀರು! ಈಕೆ ನಿಜಕ್ಕೂ ಅದೃಷ್ಟವಂತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts