More

    ಫ್ರೈಡ್​ ಚಿಕನ್​ ತಿನ್ನುವುದು ನಿಮ್ಮ ಸಾವನ್ನು ಖರೀದಿಸಿದಂತೆ! ಇಲ್ಲಿದೆ ಆಘಾತಕಾರಿ ಮಾಹಿತಿ

    ಚಿಕನ್​ ಬಹುತೇಕರ ನೆಚ್ಚಿನ ಆಹಾರ. ವಾರಕ್ಕೆ ಒಂದು ಅಥವಾ ಎರಡು ಬಾರಿ ತಿನ್ನಲೇಬೇಕು. ಕೆಲವರು ಪ್ರತಿದಿನ ಸೇವಿಸುವವರು ಇದ್ದಾರೆ. ವಿವಿಧ ರೀತಿಯ ಚಿಕನ್ ಖಾದ್ಯಗಳಲ್ಲಿ ಫ್ರೈಡ್ ಚಿಕನ್ ಎಲ್ಲರ ಬಾಯಲ್ಲಿ ನೀರೂರಿಸುವ ಖಾದ್ಯವಾಗಿದೆ. ಕೆಲವರು ಇತ್ತೀಚೆಗೆ ಮಧ್ಯಾಹ್ನ ಮತ್ತು ರಾತ್ರಿಯ ಊಟದ ಬದಲು ಚಿಕನ್ ಬಕೆಟ್​ಗಳನ್ನು ಒಯ್ಯಲು ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ.

    ಹಾಟ್​ ವಿಂಗ್ಸ್​ ಮತ್ತು ಗರಿಗರಿಯಾದ ಚಿಕನ್ ಕಾರ್ನ್‌ನಂತಹ ವೈವಿಧ್ಯಮಯ ರುಚಿಕರವಾದ ಆಹಾರ ಲಭ್ಯವಿರುವುದರಿಂದ, ವಯಸ್ಸಿನ ಭೇದವಿಲ್ಲದೆ ಎಲ್ಲರೂ ಫ್ರೈಡ್ ಚಿಕನ್‌ಗೆ ವ್ಯಸನಿಯಾಗಿದ್ದಾರೆ. ಈ ಫ್ರೈಡ್​ ಚಿಕನ್​ ಮಳಿಗೆಗಳಿಗೆ ಈಗ ದೇಶದಲ್ಲೂ ಬೇಡಿಕೆ ಹೆಚ್ಚುತ್ತಿದೆ. ಎಲ್ಲರೂ ಫ್ರೆಡ್​ ಚಿಕನ್​ಗೆ ವ್ಯಸನಿಗಳಾಗುತ್ತಿದ್ದಾರೆ.

    ಆದರೆ ಪ್ರತಿದಿನ ಈ ರೀತಿ ಫ್ರೈಡ್ ಚಿಕನ್ ತಿನ್ನುವುದು ಸುರಕ್ಷಿತವೇ? ಇದರ ಬಗ್ಗೆ ಆಗಾಗ ಭಾರೀ ಚರ್ಚೆ ನಡೆಯುತ್ತಲೇ ಇರುತ್ತದೆ. ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವು ನೀವು ಹೆಚ್ಚು ಫ್ರೈಡ್​ ಚಿಕನ್ ತಿಂದರೆ, ನೀವು ನಿಮ್ಮ ಸಾವನ್ನು ಖರೀದಿಸಿದಂತೆ ಎಂದು ಹೇಳಿದೆ.

    ಫ್ರೈಡ್ ಚಿಕನ್ ಸೇರಿದಂತೆ ಅತಿಯಾಗಿ ಫಾಸ್ಟ್ ಫುಡ್ ತಿನ್ನುವ ಅಮೆರಿಕದಲ್ಲಿ ನಡೆದಿರುವ ಈ ಅಧ್ಯಯನದಲ್ಲಿ ಹಲವು ಆತಂಕಕಾರಿ ಸಂಗತಿಗಳು ಹೊರಬಿದ್ದಿವೆ. ನಿಯಮಿತವಾಗಿ ಫ್ರೈಡ್​ ಚಿಕನ್ ತಿನ್ನುವ ಮೂರನೇ ಒಂದು ಭಾಗದಷ್ಟು ಜನರು ಟೈಪ್ 2 ಮಧುಮೇಹ ಬೆಳೆಯುವ ಅಪಾಯವನ್ನು ಹೊಂದಿರುತ್ತಾರೆ. ಮೇಲಾಗಿ.. ಇವರಿಗೆ ಹೃದ್ರೋಗದ ಅಪಾಯವೂ ಅಧಿಕವಾಗಿರುವುದು ಕಂಡುಬಂದಿದೆ.

    ಹೆಚ್ಚು ಫ್ರೈಡ್​ ಚಿಕನ್ ತಿನ್ನುವವರಿಗೆ ಕ್ಯಾನ್ಸರ್ ಬರುವ ಅಪಾಯ ಹೆಚ್ಚು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಅತಿಯಾಗಿ ಕರಿಯುವುದು, ಅತಿಯಾದ ಎಣ್ಣೆ ಬಳಸುವುದು, ಚಿಕನ್ ತುಂಡುಗಳನ್ನು ಕರಿದ ಎಣ್ಣೆಯಲ್ಲೇ ಕರಿಯುವುದು ಆರೋಗ್ಯಕ್ಕೆ ಹಾನಿಕರ ಎನ್ನುತ್ತಾರೆ ವೈದ್ಯರು. (ಏಜೆನ್ಸೀಸ್​)

    ಸಿಕ್ಕರೆ ಇಂಥಾ ಗಂಡ ಸಿಗಲಿ ಇಲ್ಲದಿದ್ರೆ ಮದ್ವೆನೇ ಬೇಡ ಅಂತಾರೆ ಹುಡ್ಗೀರು! ಈಕೆ ನಿಜಕ್ಕೂ ಅದೃಷ್ಟವಂತೆ

    ಫ್ರೆಂಡ್ಸ್​ ಎಲ್ಲ ಒಟ್ಟಿಗೆ ಕುಳಿತು ಆ ಸಿಡಿಯನ್ನು ನೋಡಿದ್ದೆವು: ಮಿಲ್ಕಿ ಬ್ಯೂಟಿ ತಮನ್ನಾ ಓಪನ್​ ಟಾಕ್​

    ಲಿಪ್​ಲಾಕ್​ ಮಾಡೋದಾದ್ರೆ ಈ ನಟನೊಂದಿಗೆ ಮಾತ್ರ! ನಟಿ ಪ್ರಿಯಾ ಭವಾನಿ ಶಂಕರ್​ ಓಪನ್​ ಟಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts