ಎನ್.ಆರ್.ಪುರ: ತಾಲೂಕಿನ ಸೀತೂರು ಗ್ರಾಮದ ಕೆರೆಗದ್ದೆಯ ವನದುರ್ಗಾ ಪರಮೇಶ್ವರಿ, ಗುತ್ಯಮ್ಮ ಹಾಗೂ ನಾಗದೇವರ ದೇವಸ್ಥಾನದಲ್ಲಿ ಗುರುವಾರ ಹಾಗೂ ಶುಕ್ರವಾರ ಶ್ರೀ ದುರ್ಗಾ ಸಮಾರಾಧನೆ ನಡೆಯಿತು. ಗುರುವಾರ ಬೆಳಗ್ಗೆ ಶ್ರೀ ಗಣಹೋಮ, ಶ್ರೀದುರ್ಗಾ ಆದಿವಾಸ ಹೋಮ, ಸಂಜೆ ದುರ್ಗಾ ನಮಸ್ಕಾರ, ವಿಶೇಷ ಪೂಜೆ ನಡೆಯಿತು. ಶುಕ್ರವಾರ ಬೆಳಗ್ಗೆ ಶ್ರೀ ಸತ್ಯವಿನಾಯಕ ವೃತ, ಗುತ್ಯಮ್ಮ ದೇವರಿಗೆ ಕಲಾ ತತ್ವ ಹೋಮ, ಆದಿವಾಸ ಹೋಮ, ಬ್ರಹ್ಮ ಕಲಶ ಸ್ಥಾಪನೆ, ಶ್ರೀ ದುರ್ಗಾ ಸಮಾರಾಧನೆ, ಪಲ್ಲಕ್ಕಿ ಉತ್ಸವ, ಅಲಂಕಾರ ಸೇವೆ, ತುಲಾ ಭಾರ, ಶ್ರೀದೇವಿಯ ಹಾಗೂ ಪರಿವಾರ ದೇವತೆಗಳ ದೇವರ ದರ್ಶನ, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.ಸಂಜೆ ಪಲ್ಲಕ್ಕಿ ಉತ್ಸವ ನಡೆಯಿತು.
30 ರಂದು ಶ್ರೀದೇವಿ ಹಾಗೂ ಪರಿವಾರ ದೇವರುಗಳ ಕಲಾ ಹೋಮ, ಪರಿವಾರ ದೇವರುಗಳ ದರ್ಶನ, ನಂತರ ದೇವರಿಗೆ ಹರಕೆ ಕೊಡುವ ಕಾರ್ಯಕ್ರಮ ಹಾಗೂ ರಾತ್ರಿ ದರ್ಶನ, ಅನ್ನ ಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಸಮಿತಿ ಪ್ರಕಟಣೆ ತಿಳಿಸಿದೆ.
ದುರ್ಗಾ ಸಮಾರಾಧನೆ ಸಂಪನ್ನ
You Might Also Like
ಈ ದಿನಾಂಕಗಳಂದು ಜನಿಸಿದವರು ತಮ್ಮ ಬುದ್ಧಿವಂತಿಕೆಯಿಂದಾಗಿ ರಾಯಲ್ ಲೈಫ್ ನಡೆಸುತ್ತಾರೆ! Numerology
Numerology : ಜ್ಯೋತಿಷ್ಯದಲ್ಲಿ ಅನೇಕ ಬಗೆಗಳಿರುವುದು ಎಲ್ಲರಿಗೂ ತಿಳಿದಿದೆ. ಅವುಗಳಲ್ಲಿ ಸಂಖ್ಯಾಶಾಸ್ತ್ರ ಮತ್ತು ಹಸ್ತಸಾಮುದ್ರಿಕ ಶಾಸ್ತ್ರವೂ…
ನೀವು ಬೆಳಿಗ್ಗೆ ತಿಂಡಿಯನ್ನು ತಡವಾಗಿ ತಿನ್ನುತ್ತೀರಾ? ಎಚ್ಚರ..ಈ ಕಾಯಿಲೆ ಬರೋದು ಪಕ್ಕಾ… breakfast
breakfast: ಬೆಳಗಿನ ಉಪಾಹಾರವು ದೇಹಕ್ಕೆ ಬಹಳ ಮುಖ್ಯ. ಯಾವುದೇ ಕಾರಣಕ್ಕೂ ಉಪಹಾರವನ್ನು ಬಿಡಬಾರದು. ತಡವಾಗಿ ತಿನ್ನುವುದು…
ಟೀ ಜೊತೆ ಸಿಗರೇಟ್! ಈ ಅಭ್ಯಾಸ ನಿಮಗೂ ಇದ್ಯಾ? ಹಾಗಿದ್ರೆ ಇಂದೇ ಬಿಟ್ಟು ಬಿಡಿ… Smoking Tea
Smoking Tea: ಅನೇಕ ಜನರು ಸಿಗರೇಟ್ ಅಭ್ಯಾಸವನ್ನು ಹೊಂದಿರುತ್ತಾರೆ. ಈ ಅಭ್ಯಾಸವು ಆರೋಗ್ಯಕ್ಕೆ ಅಪಾಯಕಾರಿ ಎಂದು…