More

    ಸರ್ವಧರ್ಮ ಸಮನ್ವಯ ಇಂದಿನ ಅನಿವಾರ್ಯ

    ಕಡೂರು: ಪ್ರಸ್ತುತ ದಿನಮಾನಗಳಲ್ಲಿ ನಡೆಯುತ್ತಿರುವ ಕೆಲವು ಘಟನೆಗಳು ನಾಗರಿಕ ಸಮಾಜದಲ್ಲಿ ಆತಂಕ ಮತ್ತು ನೋವು ತಂದಿವೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಮಠದ ಡಾ. ಶ್ರೀಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಸ್ವಾಮೀಜಿ ಹೇಳಿದರು.
    ಮಲ್ಲೇಶ್ವರದ ಶ್ರೀ ಸ್ವರ್ಣಾಂಬ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ನಡೆದ ಧಾರ್ಮಿಕ ಸಭೆ ಸಾನ್ನಿಧ್ಯವಹಿಸಿ ಮಾತನಾಡಿ, ಜಾತಿಗಿಂತ ಧರ್ಮ ದೊಡ್ಡದು. ಅದನ್ನು ಉಳಿಸಿದರೆ ವಿಶ್ವ ಉಳಿಯುತ್ತದೆ ಎಂದರು.
    ಅಧುನಿಕತೆ ಆಕರ್ಷಣೆಯಲ್ಲಿ ದೇವರು, ಧರ್ಮ, ಗುರುಪೀಠ ಸನಾತನ ಧರ್ಮವನ್ನು ಮರೆಯುತ್ತಿದ್ದೇವೆ. ಗಾಳಿ, ನೀರು, ಭೂಮಿ, ಆಕಾಶ ಎಲ್ಲದಕ್ಕೂ ಒಂದು ಧರ್ಮವಿದೆ. ಅದನ್ನು ಮೀರಿ ನಡೆದರೆ ಜೀವಸಂಕುಲ ಅಪತ್ತಿಗೆ ಒಳಗಾಗಲಿದೆ. ಮಾನವೀಯತೆ ದೃಷ್ಟಿಯನ್ನು ದೂರವಿಟ್ಟು ದೇವರು,ಧರ್ಮ, ಭಾಷೆ, ಜಾತಿ ಹೆಸರಲ್ಲಿ ಸಂಘರ್ಷ ಮಾಡುವ ಪರಿಪಾಠ ದೂರವಾಗಬೇಕು. ಹಲವಾರು ಹೆಸರುಗಳಿದ್ದರೂ ದೇವರು ಒಂದೇ. ಸರ್ವಧರ್ಮ ಸಮನ್ವಯ ಇಂದಿನ ಅನಿವಾರ್ಯ ಅಗತ್ಯ ಎಂದರು.
    ಬೀರೂರು ರಂಭಾಪುರಿ ಶಾಖಾ ಮಠದ ಶ್ರೀರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಾನವೀಯತೆಯನ್ನು ಅಣಕಿಸುವ ಹಲವಾರು ಘಟನೆಗಳು ನಡೆಯುತ್ತಿರುವುದು ಆತಂಕಕಾರಿ ವಿಚಾರ. ಇವೆಲ್ಲಕ್ಕೂ ಅಂತ್ಯ ಕಾಣಬೇಕು ಎಂದರೆ ಪ್ರತಿಯೊಬ್ಬರೂ ಮಾನುಷ್ಯತ್ವದ ಗುಣ ಬೆಳೆಸಿಕೊಂಡು ಸಹೋದರತ್ವ ಭಾವನೆಯಿಂದ ಸಹಬಾಳ್ವೆ ನಡೆಸಬೇಕು. ನಮ್ಮ ಧರ್ಮವನ್ನು ಉಳಿಸುವಲ್ಲಿ ಪ್ರತಿಯೊಬ್ಬರೂ ಎಂತಹ ತ್ಯಾಗಕ್ಕಾದರೂ ಸಿದ್ದರಿರಬೇಕು ಎಂದು ಕರೆ ನೀಡಿದರು.
    ದೇವಸ್ಥಾನದ ಧರ್ಮದರ್ಶಿ ಮಂಡಳಿ ಗೌರವಾಧ್ಯಕ್ಷ ಎಂ.ಟಿ.ಹನುಮಂತಯ್ಯ, ಅಧ್ಯಕ್ಷ ಡಾ.ಎಂ.ಟಿ.ಸತ್ಯನಾರಾಯಣ, ಕಾರ್ಯದರ್ಶಿ ಎಂ್.ವೈ.ಚಂದ್ರಶೇಖರ, ಎಂ.ಆರ್.ಧರ್ಮಣ್ಣ, ಮಾಲತೇಶ್ ಚೇತನ್ ಕುಮಾರ್, ಪುಟ್ಟಸ್ವಾಮಿ, ಧರ್ಮದರ್ಶಿ ಮಂಡಳಿ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts