ಸಿಕ್ಕರೆ ಇಂಥಾ ಗಂಡ ಸಿಗಲಿ ಇಲ್ಲದಿದ್ರೆ ಮದ್ವೆನೇ ಬೇಡ ಅಂತಾರೆ ಹುಡ್ಗೀರು! ಈಕೆ ನಿಜಕ್ಕೂ ಅದೃಷ್ಟವಂತೆ

America Couple
Published on

ವಾಷಿಂಗ್ಟನ್​: ತಮ್ಮ ಆಸೆಗಳನ್ನು ಈಡೇರಿಸುವಂತಹ ಹುಡುಗ ಸಿಕ್ಕರೆ ಸಾಕು ಎಂದು ಬಹುತೇಕ ಯುವತಿಯರು ಯೋಚಿಸುತ್ತಾರೆ. ಬೇಕು-ಬೇಡಗಳನ್ನು ಅರಿತು, ರಾಣಿಯಂತೆ ನೋಡಿಕೊಳ್ಳುವ ಗಂಡ ಬೇಕೆಂದು ಬಯಸುತ್ತಾರೆ. ಈ ವಿಚಾರದಲ್ಲಿ ಅಮೆರಿಕಾದ ಉದ್ಯಮಿ ಅರ್ಟುರೊ ಪೆಸ್ತಾನ ಅವರ ಪತ್ನಿ ಅಮಿರಾ ಇಬ್ರಾಹಿಂ ಲಕ್ಕಿ ಎಂದೇ ಹೇಳಬಹುದು. ಏಕೆಂದರೆ, ಪೆಸ್ತಾನ ಅವರು ತಮ್ಮ ಪತ್ನಿ ಅಮಿರಾಗೆ ತಿಂಗಳಿಗೆ ಶಾಪಿಂಗ್​ ಖರ್ಚು ಕೂಡ ನೀಡುತ್ತಾರೆ.

ಮೂಲಗಳ ಪ್ರಕಾರ ಪೆಸ್ತಾನ ಅವರು ಪತ್ನಿ ಅಮಿರಾಗೆ ಶಾಪಿಂಗ್​ ಮಾಡಲೆಂದೇ ತಿಂಗಳಿಗೆ 8000 ಡಾಲರ್​, ಭಾರತೀಯ ಕರೆನ್ಸಿ ಪ್ರಕಾರ 6,61,764 ರೂಪಾಯಿ ನೀಡುತ್ತಾರೆ. ತನ್ನ ಪತ್ನಿಯನ್ನು ರಾಣಿ ಎಂದು ಪರಿಗಣಿಸಿದ್ದಾರೆ. ಹಾಗಾಗಿ ಮನೆಗೆಲಸಗಳನ್ನು ಮಾಡುವುದನ್ನು ಬ್ಯಾನ್​ ಮಾಡಿದ್ದಾರೆ.

ಇಬ್ಬರು 2023ರ ಮೇ ತಿಂಗಳಲ್ಲಿ ವಿವಾಹವಾದರು. ಕೆಲವು ತಿಂಗಳ ಹಿಂದೆ ದಂಪತಿಗೆ ಥಿಯಾಗೋ ಎಂಬ ಗಂಡು ಮಗು ಜನಿಸಿದೆ. ಅಮಿರಾ ಇತರ ವ್ಯವಹಾರಗಳಲ್ಲಿ ತೊಡಗಿಕೊಳ್ಳುವುದನ್ನು ಸಹ ಪೆಸ್ತಾನ ನಿಷೇಧಿಸಿದ್ದಾರೆ. ಇದರಿಂದಾಗಿ ಅಮಿರಾ, ಪುತ್ರ ಥಿಯಾಗೊವನ್ನು ನೋಡಿಕೊಳ್ಳಲು ತನ್ನ ಸಂಪೂರ್ಣ ಗಮನವನ್ನು ನೀಡುತ್ತಿದ್ದಾರೆ.

ಪೆಸ್ತಾನ ತನ್ನ 12ನೇ ವಯಸ್ಸಿನಲ್ಲಿ ಅಮಿರಾರನ್ನು ಭೇಟಿಯಾದರು. ಆರು ವರ್ಷಗಳ ನಂತರ ಅಮಿರಾ, ಪೆಸ್ತಾನ ಬಳಿ ತನ್ನ ಪ್ರೀತಿಯ ಬಗ್ಗೆ ತಿಳಿಸಿ ಮದುವೆಯಾದಳು. ದಂಪತಿ ಪ್ರಸ್ತುತ ಹೂಸ್ಟನ್‌ನಲ್ಲಿ ಬಹು ಮಿಲಿಯನ್ ಡಾಲರ್ ಬೆಲೆಬಾಳುವ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದಾರೆ.

ನ್ಯೂಯಾರ್ಕ್, ಕ್ಯಾಲಿಫೋರ್ನಿಯಾ ಮತ್ತು ಬಹಾಮಾಸ್‌ನಂತಹ ಸ್ಥಳಗಳಲ್ಲಿಯೂ ಐಷಾರಾಮಿ ಮನೆಗಳನ್ನು ಸಹ ಹೊಂದಿದ್ದಾರೆ. ಅಮಿರಾ ಮದುವೆಗೂ ಮುನ್ನ ಉದ್ಯಮಿಯಾಗಿದ್ದರು. ಆಕೆ ಸೆಕೆಂಡ್ ಹ್ಯಾಂಡ್ ಫ್ಯಾಶನ್ ವಸ್ತುಗಳನ್ನು ಮಾರಾಟ ಮಾಡುವುದು ಸೇರಿದಂತೆ ಇತರೆ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net