More

  ಒಂದು ಹೊತ್ತು ಊಟ ಬಿಟ್ಟರೂ ಹಾರ್ಟ್​ ಅಟ್ಯಾಕ್​ ಪಕ್ಕಾ; ಈ ಅಧ್ಯಯನದಿಂದ ಬಯಲಾಯ್ತು ಭಯಾನಕ ಸತ್ಯ

  ನವದೆಹಲಿ: ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಖಾಯಿಲೆಗಳು ಜನರನ್ನು ಹೆಚ್ಚಾಗಿ ಪೀಡಿಸುತ್ತಿದ್ದು, ಯುವಕರೇ ಹೆಚ್ಚಾಗಿ ಇದಕ್ಕೆ ಬಲಿಯಾಗುತ್ತಿದ್ದಾರೆ. ವೈದ್ಯರು ಹೇಳುವ ಪ್ರಕಾರ ನಾವು ಅಳವಡಿಸಿಕೊಂಡಿರುವ ಆಹಾರ ಕ್ರಮ ಹೇಗಿರುತ್ತದರೋ ಹೃದಯದ ಆರೋಗ್ಯವು ಅಷ್ಟೇ ಚೆನ್ನಾಗಿರುತ್ತದೆ ಎಂದು ಹೇಳುತ್ತಾರೆ.

  ಹಲವಾರು ಆಹಾರಗಳು ಸ್ಯಾಚುರೇಟೆಡ್ ಕೊಬ್ಬುಗಳು, ಅತಿಯಾದ ಸೋಡಿಯಂ ಮತ್ತು ಸಂಸ್ಕರಿಸಿದ ಸಕ್ಕರೆಗಳಿಂದ ತುಂಬಿರುತ್ತವೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗಿದೆ. ದೇಹದ ತೂಕದ ವಿಚಾರ ಬಂದಾಗ ನಾವು ಸೇವನೆ ಮಾಡುವ ಆಹಾರ ಗುಣಮಟ್ಟ ಮತ್ತು ಪ್ರಮಾಣ ಬಹಳ ಮುಖ್ಯವಾಗುತ್ತದೆ.

  ಕೆಲವರು ಅನ್ನ ತಿಂದರೆ ದಪ್ಪ ಆಗುತ್ತಾರೆ ಎಂದು ಹೇಳುತ್ತಾರೆ. ಇನ್ನು ಕೆಲವರು ಮುದ್ದೆ ತಿಂದರೆ ದೇಹಕ್ಕೆ ಶಕ್ತಿ ಬರುತ್ತದೆ ಎಂದು ನಂಬಿದ್ದಾರೆ. ಈಗಿನ ಜೀವನಶೈಲಿಗೆ ಜನರು ಹೊಂದಿಕೊಂಡಿರುವ ಹಾಗೆ ಮನೆಯ ಆಹಾರಕ್ಕಿಂತ ಮನೆ ಹೊರಗಿನ ಜಂಕ್ ಫುಡ್ ಸೇವನೆಗೆ ಹೆಚ್ಚು ಒತ್ತು ಕೊಡುತ್ತಾರೆ. ಇದರಿಂದ ಒಂದು ಹೊತ್ತಿನಲ್ಲಿ ಊಟ ಮಾಡಬೇಕು ಎಂದು ಅನಿಸುವುದಿಲ್ಲ. ಇದು ಹಲವಾರು ಆರೋಗ್ಯ ಸಮಸ್ಯೆಗಳಿಗೆ ದಾರಿಯಾಗುತ್ತದೆ.

  Heart Attack

  ಇದನ್ನೂ ಓದಿ: ಲೋಕ ಚುನಾವಣೆಯಲ್ಲಿ ನನ್ನ ಗೆಲುವು ಖಚಿತ, ವಿಜಯೇಂದ್ರ ರಾಜೀನಾಮೆ ನಿಶ್ಚಿತ: ಕೆ.ಎಸ್. ಈಶ್ವರಪ್ಪ

  ದೇಹದ ತೂಕ ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಒಂದು ಹೊತ್ತು ಆಹಾರ ಬಿಡುತ್ತಿದ್ದರೆ ಅಂತಹವರಿಗಾಗಿ ಈಗ ಸಂಶೋಧನೆ ಮೂಲಕ ಭಯಾನಕ ಸತ್ಯ ಒಂದು ಹೊರಬಿದ್ದಿದ್ದು, ಎಂಟು ಗಂಟೆಗೂ ಹೆಚ್ಚಿನ ಕಾಲ ನಾವು ಆಹಾರವನ್ನು ಸೇವಿಸದಿದ್ದರೆ ಅಥವಾ ಒಂದು ಹೊತ್ತು ಊಟ ತ್ಯಜಿಸಿದರೆ ಹೃದಯಾಘಾತ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ. ಅಮೆರಿಕನ್​ ಹಾರ್ಟ್​ ಅಸೋಸಿಯೇಷನ್​​ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಭಯಾನಕ ಅಂಶ ಬಯಲಾಗಿದೆ.

  2003ರಿಂದ 2019ರ ವರೆಗೆ ಹೃದಯಾಘಾತದಿಂದ ಮೃತಪಟ್ಟವರ ಸಾವಿನ ದತ್ತಾಂಶದೊಂದಿಗೆ ಸಮೀಕ್ಷೆ ನಡೆಸಲಾಗಿದ್ದು, ಶೇ. 91 ರಷ್ಟು ಮಂದಿ ಈ ಕಾರಣಕ್ಕಾಗಿ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ನಾವು ಆರೋಗ್ಯಕರವಾಗಿ ಬದುಕಲು ಮತ್ತು ದಿನ ನಿತ್ಯದ ಕಾರ್ಯ ಚಟುವಟಿಕೆಗಳಲ್ಲಿ ಹೆಚ್ಚಾಗಿ ಸಕ್ರಿಯತೆಯಿಂದ ಪಾಲ್ಗೊಳ್ಳಲು ನಿಯಮಿತವಾಗಿ ಆಹಾರವನ್ನು ಸೇವಿಸಿದರೆ ಮಾತ್ರ ಉತ್ತಮ ಜೀವನಶೈಲಿ ಹೊಂದಲು ಸಾಧ್ಯವಾಗುತ್ತದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts