More

    ಆದಿಚುಂಚನಗಿರಿ ಜಾತ್ರಾ ಮಹೋತ್ಸವಕ್ಕೆ ತೆರೆ

    ನಾಗಮಂಗಲ : ಧರ್ಮ ಧ್ವಜಾರೋಹಣ ಹಾಗೂ ನಾಂದಿಪೂಜೆಯೊಂದಿಗೆ ಪ್ರಾರಂಭವಾಗಿ 9 ದಿನಗಳ ಕಾಲ ನಡೆದ ಆದಿಚುಂಚನಗಿರಿ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ತೆರೆ ಬಿತ್ತು. ಕ್ಷೇತ್ರದ ಬಿಂದು ಸರೋವರದಲ್ಲಿನ ಗಂಗಾ ಪೂಜೆ ಅವಭೃತ ಮಹೋತ್ಸವದ ನಂತರದ ಧರ್ಮಧ್ವಜ ಅವರೋಹಣದೊಂದಿಗೆ ಜಾತ್ರಾಮಹೋತ್ಸಕ್ಕೆಮಂಗಳ ಹಾಡಲಾಯಿತು. ಮಂಗಳವಾರ ಬೆಳಗಿನಿಂದಲೇ ಶ್ರೀ ಕ್ಷೇತ್ರಾಧಿದೇವತೆಗಳಿಗೆ ವಿಶೇಷ ಪೂಜಾಕೈಂಕರ್ಯ ನೆರವೇರಿಸಿದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಬಿಜಿಎಸ್ ಸಭಾ ಮಂಟಪದ ಪಕ್ಕದಲ್ಲಿರುವ ಬಿಂದು ಸರೋವರದಲ್ಲಿ ಕಂಕಣ ವಿಸರ್ಜನೆ ಮಾಡಿದರು. ಇಲ್ಲಿಯೇ ಗಂಗಾ ಪೂಜೆ ಮತ್ತು ಅವಭೃತ ಮಹೋತ್ಸವದಂತಹ ಧಾರ್ಮಿಕ ಪೂಜಾ ಕಾರ್ಯಗಳು ನೆರವೇರಿದವು.
    ಸುಜ್ಞಾನ ನಮ್ಮಲ್ಲಿ ಪ್ರವೇಶ ಮಾಡಲಿ :
    ಅಜ್ಞಾನ ದೂರ ಹೋದರೆ ಮಾತ್ರ ಸುಜ್ಞಾನ ನಮ್ಮಲ್ಲಿ ಪ್ರವೇಶ ಮಾಡುತ್ತದೆ ಎಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. 9 ದಿನಗಳ ಜಾತ್ರಾ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಜ್ಞಾನ ಕಾರ್ಯಕ್ಕೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು. ನಿಸ್ವಾರ್ಥ ಸೇವಾ ಮನೋಭಾವದಿಂದಲೇ ಮುಕ್ತಿಯ ಪರಮ ಉದ್ದೇಶ ಈಡೇರುತ್ತದೆ. ಇದನ್ನು ಪ್ರತಿಯೊಬ್ಬರೂ ಮನಗಾಣಬೇಕಿದೆ ಎಂದು ಸಂದೇಶ ನೀಡಿದರು. ಗಣ್ಯರಿಗೆ ಸನ್ಮಾನ: ಜಾತ್ರಾ ಮಹೋತ್ಸವದಲ್ಲಿ ದಾಸೋಹ ಸೇವೆ ನೆರವೇರಿಸಿದ ದಾನಿಗಳು ಹಾಗೂ ಕೆಲವು ಸಂಘ ಸಂಸ್ಥೆಗಳ ಪ್ರಮುಖರನ್ನು ಶ್ರೀಗಳು ಸನ್ಮಾನಿಸಿದರು. ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನೆಲ್ಲಿಗೆರೆ ಬಾಲು, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts