ನಿರ್ಮಾಣದ ಹಂತದಲ್ಲಿದ್ದ ಮೇಲ್ಸೇತುವೆ ಕುಸಿದು ಇಬ್ಬರ ಸಾವು; ಫ್ಲೈಓವರ್ ಅಡಿ ಸಿಲುಕಿತು ಕಾರು-ಟ್ರಕ್

Fly Over
Published on

ಆಂಧ್ರಪ್ರದೇಶ: ಕಳಪೆ ಕಾಮಗಾರಿಯಿಂದ ಅನಾಹುತಗಳು ಸಂಭವಿಸಿ, ಪ್ರಾಣಹಾನಿ ಸಂಭವಿಸುವ ಪ್ರಕರಣಗಳ ಪಟ್ಟಿಗೆ ಇದೀಗ ಹೊಸದೊಂದು ಘಟನೆ ಸೇರ್ಪಡೆಗೊಂಡಿದೆ. ನಿರ್ಮಾಣ ಹಂತದ್ದಲ್ಲಿದ್ದ ಮೇಲ್ಸೇತುವೆಯೊಂದು ಇಬ್ಬರನ್ನು ಬಲಿಪಡೆದಿದೆ.

ವಿಶಾಖಪಟ್ಟಣದ ಅಣಕಪಲ್ಲೆ ಎಂಬಲ್ಲಿ ಈ ಅವಘಡ ಸಂಭವಿಸಿದೆ. ಇಲ್ಲಿ ನಿರ್ಮಾಣಗೊಳ್ಳುತ್ತಿದ್ದ ಮೇಲ್ಸೇತುವೆ ಸಂಜೆ ಬಳಿಕ ದಿಢೀರನೆ ಕುಸಿದಿದೆ. ಪರಿಣಾಮವಾಗಿ ಇಬ್ಬರು ಸಾವಿಗೀಡಾಗಿದ್ದಾರೆ. ಇಷ್ಟು ಮಾತ್ರವಲ್ಲದೆ ಟ್ರಕ್​ ಹಾಗೂ ಕಾರು ಮೇಲ್ಸೇತುವೆ ಅಡಿ ಸಿಲುಕಿಕೊಂಡು ಆತಂಕ ಸೃಷ್ಟಿಸಿದ ಸನ್ನಿವೇಶವೂ ಕಂಡುಬಂದಿದೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ಬರಬೇಕಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net