More

    18 ತಿಂಗಳ ಮಗುವಿಗಾಗಿ ಏಳೇ ದಿನಗಳಲ್ಲಿ ಸಂಗ್ರಹವಾಯ್ತು 18 ಕೋಟಿ ರೂ.; ಬೇಡ ಎಂಬಷ್ಟು ಬಂತು ಹಣ!

    ಕೇರಳ: ಜನರೆಲ್ಲ ಒಂದುಗೂಡಿ ಕೊಡಲು ಶುರುಮಾಡಿದರೆ ಖಂಡಿತ ಏನು ಬೇಕಾದರೂ ಆಗಲು ಸಾಧ್ಯವಿದೆ ಎಂಬುದಕ್ಕೆ ಇದು ಅತ್ಯುತ್ತಮ ನಿದರ್ಶನ. ಇಲ್ಲೊಂದು ಕಡೆ ಒಂದೂವರೆ ವರ್ಷದ ಮಗುವಿನ ಚಿಕಿತ್ಸೆಗೆ ಹಣದ ಮುಗ್ಗಟ್ಟಿದೆ ಎಂದು ಕರೆಕೊಟ್ಟಿದ್ದ ಕ್ರೌಡ್​ಫಂಡಿಂಗ್​ಗೆ ಅದ್ಭುತ ಜನಸ್ಪಂದನೆ ಸಿಕ್ಕಿದ್ದು, ಏಳೇ ದಿನಗಳಲ್ಲಿ 18 ಕೋಟಿ ರೂಪಾಯಿ ಸಂಗ್ರಹಗೊಂಡಿದೆ.

    ಕೇರಳದ ಕಣ್ಣೂರಿನ ಮಹಮದ್ ಎಂಬ 18 ತಿಂಗಳ ಮಗು ಮಸ್ಕ್ಯುಲರ್ ಅಟ್ರೊಫಿ ಎಂಬ ಅಪರೂಪದ ಕಾಯಿಲೆಯಿಂದ ಬಳುತ್ತಿದ್ದಾನೆ. ಸ್ನಾಯುವನ್ನು ಕರಗಿಸುವಂಥ ಈ ವಿಚಿತ್ರರೋಗದಿಂದ ಬಳಲುತ್ತಿದ್ದ ಈ ಮಗುವನ್ನು ಕೋಜಿಕೋಡ್​ನ ಎಂಐಎಂಎಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈತನ ಚಿಕಿತ್ಸೆಗೆ ಜೋಲ್ಗೆನ್​ಸ್ಮಾ ಎಂಬ ಔಷಧವನ್ನು ಕೊಡಬೇಕಿದೆ. ಇದು ಜಗತ್ತಿನಲ್ಲೇ ದುಬಾರಿ ಎಂಬ ಔಷಧಗಳ ಪೈಕಿ ಒಂದಾಗಿದ್ದು, ಅದನ್ನು ಖರೀದಿಸುವಷ್ಟು ಈ ಕುಟುಂಬ ಶಕ್ತವಿಲ್ಲ.

    ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರೇ ಹೆಚ್ಚು, ಏಕೆ?; ಗೃಹಿಣಿಯರಿಗೆ ಖುಷಿ ಕೊಟ್ಟೀತು ಈ ಅಧ್ಯಯನ ವರದಿ!

    ಅದರಲ್ಲೂ ಈ ಮಗುವಿನ 15 ವರ್ಷಗಳ ಅಕ್ಕ ಅಫ್ರಾ ಕೂಡ ಇದೇ ಕಾಯಿಲೆಯಿಂದ ಬಳಲುತ್ತಿದ್ದು, ಇಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆರ್ಥಿಕ ಮುಗ್ಗಟ್ಟಿನ ಕಾರಣದಿಂದಾಗಿ ಈಕೆಗೆ ಚಿಕಿತ್ಸೆ ಕೊಡಿಸುವುದು ವಿಳಂಬವಾದ ಕಾರಣ ಇವಳು ಪಾರ್ಶ್ವವಾಯುವಿಗೆ ಒಳಗಾಗಿದ್ದು, ಸೊಂಟದ ಕೆಳಗಿನ ಭಾಗ ನಿಯಂತ್ರಣ ಕಳೆದುಕೊಂಡಿದ್ದು, ವೀಲ್​ಚೇರ್​ನಲ್ಲೇ ಇರುವಂತಾಗಿದೆ. ಇನ್ನು ಮಹಮದ್​ಗೆ ಇನ್ನು ಆರು ತಿಂಗಳೊಳಗೆ ಚಿಕಿತ್ಸೆ ಕೊಡಿಸಿದರೆ ಮಾತ್ರ ಅವನ ಕಾಯಿಲೆಯನ್ನು ಗುಣಪಡಿಸಬಹುದು ಎಂದು ವೈದ್ಯರು ಹೇಳಿದ್ದರು.

    ಇದನ್ನೂ ಓದಿ: ನೀವು ಡುಮ್ಮಗಿದ್ದೀರಾ?; ಹಾಗಿದ್ದರೆ ಇದನ್ನು ಬಾಯಲ್ಲಿಟ್ಟುಕೊಂಡರೆ ಸಾಕು, ಸಣ್ಣಗಾಗುತ್ತೀರಿ..!

    ಅಮೆರಿಕದಿಂದ ಈ ದುಬಾರಿ ಔಷಧವನ್ನು ತರಿಸಿ ಚಿಕಿತ್ಸೆ ಕೊಡಿಸುವ ಸಲುವಾಗಿ ಸ್ಥಳೀಯ ಶಾಸಕ ಎಂ.ವಿಜಿನ್​ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಅವರು ಅಫ್ರಾ ಕೈಯಲ್ಲಿ ವಿನಂತಿ ಮಾಡಿಕೊಳ್ಳುವಂತೆ ಹೇಳಿ ವಿಡಿಯೋ ಮಾಡಿಸಿ, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದರು. ಮಾತ್ರವಲ್ಲ, ಈ ಬಗ್ಗೆ ಬಹಳಷ್ಟು ಮಾಧ್ಯಮಗಳಲ್ಲೂ ಸುದ್ದಿ ಪ್ರಕಟಗೊಂಡಿತ್ತು. ಒಟ್ಟಾರೆಯಾಗಿ ಇವೆಲ್ಲ ಎಷ್ಟರಮಟ್ಟಿಗೆ ಪರಿಣಾಮ ಬೀರಿತೆಂದರೆ, ಸೋಮವಾರ ಈ ಕುಟುಂಬ ಸದಸ್ಯರು, ಅಗತ್ಯಕ್ಕೂ ಮೀರಿದಷ್ಟು ಹಣ ಸಂಗ್ರಹವಾಗಿದ್ದು, ಇನ್ನು ಯಾರೂ ಇದಕ್ಕಾಗಿ ಹಣ ಕೊಡುವುದು ಬೇಡ ಎಂದು ವಿನಂತಿಸಿಕೊಳ್ಳುವಂತಾಗಿತ್ತು. ಸದ್ಯ ಅಗತ್ಯವಿರುವ ದುಬಾರಿ ಔಷಧವನ್ನು ಅಮೆರಿಕದಿಂದ ತರಿಸಿಕೊಳ್ಳುವ ಸಂಬಂಧ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಸಮಿತಿಯು ಸರ್ಕಾರವನ್ನು ಕೋರಿಕೊಂಡಿದೆ. (ಏಜೆನ್ಸೀಸ್​)

    ಕೋವಿಡ್​ನಿಂದ ಬಚಾವಾದರೂ ನೆಮ್ಮದಿ ಇಲ್ಲ; ಕಂಡುಬಂದಿದೆ ಮತ್ತೊಂದು ರೋಗ, ಬೋನ್​ ಡೆತ್!

    ಇತ್ತೀಚೆಗೆ ಕೋವಿಡ್​ನಿಂದ ಸತ್ತವರಲ್ಲಿ ಶೇ.99.2 ಮಂದಿ ಲಸಿಕೆ ಪಡೆಯದವರೇ!; ಹೀಗಾಗಿದ್ದು ಎಲ್ಲಿ ಗೊತ್ತಾ?

    ಎಂಎಲ್​ಎ ಮಗಳ ಮದ್ವೇಲಿ ಕೋವಿಡ್ ನಿಯಮ ಉಲ್ಲಂಘನೆ; ಶಾಸಕರ ಬದಲಿಗೆ ಪುತ್ರನ ಮೇಲೆ ಕೇಸ್ ದಾಖಲು!

    ವಿಚ್ಛೇದನ ಘೋಷಿಸಿದ ಮಾರನೇ ದಿನವೇ ಕಿರಣ್​ ರಾವ್ ಕೈಹಿಡಿದುಕೊಂಡು ಆಮೀರ್ ಖಾನ್ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts