ರೇವಣ್ಣ ನಡವಳಿಕೆ ಸರಿಯಿಲ್ಲ, ಈ ಹಿಂದೆ ಇಂಗ್ಲೆಂಡ್​ನಲ್ಲೂ ಸಿಕ್ಕಿಬಿದ್ದಿದ್ದರು: ಮಾಜಿ ಸಂಸದ ಶಿವರಾಮೇಗೌಡ ಆರೋಪ

ShivarameGowda
Published on

ಬೆಂಗಳೂರು: ಸಂಸದ ಪ್ರಜ್ವಲ್​ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ರೆಡ್​ ಕಾರ್ನರ್​ ನೋಟಿಸ್​ ಜಾರಿ ಮಾಡಲಾಗಿದೆ. ಇನ್ನೂ ಪ್ರಕರಣದ ಕುರಿತು ರಾಜಕೀಯ ಪಕ್ಷಗಳ ನಾಯಕರು ಕಿಡಿಕಾರಿದ್ದು, ಇದಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಹೊಸ ಬಾಂಬ್​ ಒಂದನ್ನು ಸಿಡಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶಿವರಾಮೇಗೌಡ, ಮಗ ಇಷ್ಟೆಲ್ಲಾ ಮಾಡಿದರು ಅವರ ಅಪ್ಪ-ಅಮ್ಮ ಏನ್​ ಕತ್ತೆ ಕಾಯ್ತಿದ್ರಾ. ರೇವಣ್ಣ ಒಳ್ಳೆ ನಡವಳಿಕೆ ಇರುವ ವ್ಯಕ್ತಿಯಲ್ಲ. ಈ ಹಿಂದೆ ಇಂಗ್ಲೆಂಡ್​ನಲ್ಲಿ ನನ್ನ ಜೊತೆ ಬಂದಾಗ ಅವರು ಸಿಕ್ಕಿಬಿದ್ದಿದ್ದರು. ಇಂದು ಹಾಸದನಲ್ಲಿ ನಡೆದಿರುವ ಘಟನೆಯೇ ಅಂದು ಇಂಗ್ಲೆಂಡ್​ನಲ್ಲಿ ನಡೆದಿತ್ತು ಎಂದು ಆರೋಪಿಸಿದ್ದಾರೆ.

ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಎಸ್​ಐಟಿ ರೆಡ್​ ಕಾರ್ನರ್​ ನೋಟಿಸ್​ ಜಾರಿ ಮಾಡಿದೆ. ಲೈಂಗಿಕ ಕಿರುಕುಳದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಶಾಸಕ ಎಚ್.ಡಿ. ರೇವಣ್ಣ ಜಾಮೀನು ಕೋರಿ ಕೋರ್ಟ್​ ಮೊರೆ ಹೋಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net