More

    ಯಾವುದಾದರು ಬ್ಯಾಟ್ಸ್​ಮನ್​ಗೆ ಹೆದರಿದ್ದೇನೆಂದರೆ ಅದು ಈತನಿಗೆ ಮಾತ್ರ; ಗೌತಮ್​ ಗಂಭೀರ್​ ನಿದ್ದೆಗೆಡಿಸಿದ ಆ ಆಟಗಾರ ಯಾರು ಗೊತ್ತಾ?

    ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 17ನೇ ಆವೃತ್ತಿಯ 52ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಹಾಗೂ ಕಲ್ಕತ್ತಾ ನೈಟ್​ರೈಡರ್ಸ್​ ಮುಖಾಮುಖಿಯಾಗಿದ್ದು, ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದಾಗಿದೆ. ಇನ್ನೂ ಪಂದ್ಯಕ್ಕೂ ಮುನ್ನ ಕಲ್ಕತ್ತಾ ನೈಟ್​ರೈಡರ್ಸ್​ ತಂಡದ ಮೆಂಟರ್​ ಗೌತಮ್​ ಗಂಭೀರ್ ವಿಶೇಷ ಸಂದರ್ಶನದಲ್ಲಿ​ ಹಲವು ಸ್ವಾರಸ್ಯಕರ ಮಾಹಿತಿಯನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಐಪಿಎಲ್​ನಲ್ಲಿ ವಿರಾಟ್​, ಧೋನಿ, ಎಬಿಡಿ, ಕ್ರಿಸ್​ ಗೇಲ್​ ಕಂಡರೆ ಹೆದರದ ಗೌತಮ್​ ಗಂಭೀರ್​ ಈ ಒಬ್ಬ ಬ್ಯಾಟ್ಸ್​​ಮನ್​ ಕಂಡರೆ ಹೆಚ್ಚು ಭಯ ಬೀಳುತ್ತಾರಂತೆ. ಅದು ಎಷ್ಟರ ಮಟ್ಟಿಗೆ ಎಂದರೆ ಈ ಆಟಗಾರ ಅವರ ನಿದ್ದೆಗೆಡಿಸಿರುವುದಾಗಿ ಸ್ವತಃ ಗೌತಮ್​ ಗಂಭೀರ್​ ಹೇಳಿಕೊಂಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಕಮೆಂಟ್​ಗಳ ಮಹಾಪೂರವೇ ಹರಿದು ಬರುತ್ತಿದೆ.

    ಇದನ್ನೂ ಓದಿ: ಪಾಕಿಸ್ತಾನ ಪರ ಘೋಷಣೆ ಕೂಗಿದರೆ ನಾವೇ ಅವರನ್ನು ಗುಂಡಿಟ್ಟು ಕೊಲ್ಲುತ್ತೇವೆ: ಸಚಿವ ಜಮೀರ್ ಅಹ್ಮದ್

    ನಾನು ಯಾವುದಾದರು ಬ್ಯಾಟ್ಸ್​ಮನ್​ ಒಬ್ಬರನ್ನು ಕಂಡರೆ ಭಯ ಬೀಳುತ್ತೀನಿ ಎಂದರೆ ಅದು ರೋಹಿತ್​ ಶರ್ಮಾ. ಏಕೆಂದರೆ, ಯಾರಾದರೂ ಒಬ್ಬ ಆಟಗಾರ ನನ್ನ ನಿದ್ದೆಗೆಡ್ಡಿಸಿದ್ದಾನೆ ಎಂದರೆ ಅದು ರೋಹಿತ್​ ಶರ್ಮಾ ಎಂದು ಮೊದಲಿಗೆ ಹೇಳುತ್ತೇನೆ. ಕ್ರಿಸ್​ ಗೇಲ್​, ವಿರಾಟ್​, ಧೋನಿ ಹಾಗೂ ಡಿವಿಲಿಯರ್ಸ್​ಗಿಂತ ನನಗೆ ರೋಹಿತ್​ ಹೆಚ್ಚು ಕಾಟ ಕೊಟ್ಟಿದ್ದಾರೆ.

    ಏಕೆಂದರೆ ರೋಹಿತ್​ ಕ್ರೀಸ್​ನಲ್ಲಿ ಹೆಚ್ಚು ಕಾಲ ಇದ್ದರೆ ಎದುರಾಳಿಗಳಿಗೆ ತೊಂದರೆ ಕಟ್ಟಿಟ್ಟ ಬುತ್ತಿ ಎಂದು ಹೇಳುತ್ತೇನೆ. ಯಾವುದಾದರೂ ಆಟಗಾರನಿಗೆ ನಾನು ಪ್ಲ್ಯಾನ್​ ಎ ಹೊರತುಪಡಿಸಿ ಬಿ ಮತ್ತು ಸಿ ಅನ್ನು ಸಿದ್ದ ಮಾಡಿಕೊಂಡಿರುತ್ತೇನೆ ಅದು ರೋಹಿತ್​ ಮಾತ್ರ. ಐಪಿಎಲ್​ನಲ್ಲಿ ನಾನು ರೋಹಿತ್​ ಶರ್ಮಾ ಹೊರತುಪಡಿಸಿ ಬೇರೆ ಯಾವ ಆಟಗಾರನ ಬಗ್ಗೆ ಎಂದಿಗೂ ಹೆಚ್ಚು ಯೋಚಿಸಿಲ್ಲ. ಆದರೆ, ನಾವು ರೋಹಿತ್​ ವಿರುದ್ಧ ಆಡುತ್ತಿದ್ದೇವೆ ಎಂದರೆ ಒಂದು ರಾತ್ರಿ ಮುಂಚಿತವಾಗಿ ನಾನು ಯೋಜನೆಗಳನ್ನು ರೂಪಿಸಿರುತ್ತೇನೆ ಎಂದು ಕೆಕೆಆರ್ ಮೆಂಟರ್​ ಗೌತಮ್​​ ಗಂಭೀರ್​ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts