More

    ಎಂಎಲ್​ಎ ಮಗಳ ಮದ್ವೇಲಿ ಕೋವಿಡ್ ನಿಯಮ ಉಲ್ಲಂಘನೆ; ಶಾಸಕರ ಬದಲಿಗೆ ಪುತ್ರನ ಮೇಲೆ ಕೇಸ್ ದಾಖಲು!

    ದಾವಣಗೆರೆ: ಎತ್ತಿಗೆ ಜ್ವರ, ಎಮ್ಮೆಗೆ ಬರೆ ಎಂಬ ಗಾದೆಮಾತು ಇಲ್ಲಿ ಅಕ್ಷರಶಃ ನಿಜವಾಗಿದೆ. ಕೋವಿಡ್ ನಿಯಮವನ್ನು ಉಲ್ಲಂಘಿಸಿ ಪುತ್ರಿಯ ಮದುವೆ ಮಾಡಿಸಿದ ಶಾಸಕರ ಮೇಲೆ ಪ್ರಕರಣ ದಾಖಲಿಸುವ ಬದಲು, ಅವರ ಪುತ್ರನ ಮೇಲೆ ಕೇಸ್​ ಜರುಗಿಸಿ, ದಂಡ ವಿಧಿಸಿದ ವಿಷಯ ಬಹಿರಂಗಗೊಂಡಿದೆ. ಇಂಥದ್ದೊಂದು ಮದುವೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸಾಕ್ಷಿಯಾಗಿದ್ದಾರೆ.

    ಹರಿಹರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ರಾಮಪ್ಪ ಅವರ ಪುತ್ರಿಯ ಮದುವೆ ಜುಲೈ 2ರಂದು ಸ್ಥಳೀಯ ಕಲ್ಯಾಣಮಂಟಪವೊಂದರಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ನೂರಾರು ಜನರು ಭಾಗಿಯಾಗಿದ್ದು, ಕೋವಿಡ್ ಮಾರ್ಗಸೂಚಿಗಳ ಪಾಲನೆಯಾಗಿಲ್ಲ. ಅಲ್ಲದೆ ಈ ವಿವಾಹಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಿದ ಸಂದರ್ಭದಲ್ಲಂತೂ ಭಾರಿ ನೂಕುನುಗ್ಗಲು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಹರಿಹರ ಪೊಲೀಸ್ ಠಾಣೆ ಎಸ್​ಐ ಸುನೀಲ್ ಬಿ. ತೇಲಿ ಸ್ವಯಂಪ್ರೇರಿತ ದೂರು ದಾಖಲಿಸಿದ್ದರು.

    ಇದನ್ನೂ ಓದಿ: ಈ ರೋಗ ಮಕ್ಕಳಲ್ಲಿ ಕಂಡುಬಂದಿರುವುದು ಇದೇ ಮೊದಲು!; ಇದರಲ್ಲಿ ಶೇ. 60ರಷ್ಟಿದೆ ಸಾವಿನ ಸಾಧ್ಯತೆ!

    ವಿಚಿತ್ರವೆಂದರೆ ಈ ಪ್ರಕರಣದಲ್ಲಿ ಮದುವೆ ಮಾಡಿಸಿದ್ದ ಶಾಸಕರ ಬದಲು, ಅವರ ಪುತ್ರ ಯತಿರಾಜ್​​ ವಿರುದ್ಧ ದೂರು ದಾಖಲಿಸಲಾಗಿದೆ. ಆ ಮೂಲಕ ಶಾಸಕರನ್ನು ಈ ಪ್ರಕರಣದಿಂದ ಬಚಾವಾಗಿಸಲು ತಾಲೂಕು ಹಾಗೂ ಜಿಲ್ಲಾಡಳಿತ ಪ್ರಯತ್ನ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ. ಶಾಸಕರ ಪುತ್ರ ಯತಿರಾಜ್​ಗೆ 10 ಸಾವಿರ ರೂ. ಹಾಗೂ ಕಲ್ಯಾಣಮಂಟಪದ ಮಾಲೀಕ ಅರುಣ್​ಕುಮಾರ್​ಗೆ 5 ಸಾವಿರ ರೂ. ದಂಡ ವಿಧಿಸಿ, ನೋಟಿಸ್ ನೀಡಲಾಗಿದೆ.

    ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಜಯವಾಗಲಿ: ಅಭಿಮಾನಿಗಳ ಘೋಷಣೆ

    ಮಕ್ಕಳನ್ನೇ ಹೆಚ್ಚಾಗಿ ಕಾಡುವ ಮಾರಕ ಮೆಸ್​-ಸಿ; ಪಾಲಕರೇ ಈ ವೈದ್ಯರ ಮಾತನ್ನು ಆಲಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ..

    ಐದೂವರೆ ವರ್ಷಗಳಿಂದ ಒಂದೂ ವಾರ ತಪ್ಪದೇ ನಡೆದಿದೆ ಸಸ್ಯಾಗ್ರಹ; ಇದರ ಹಿಂದಿದೆ ‘ಅದಮ್ಯ ಚೇತನ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts