ದಾವಣಗೆರೆ: ವಯಸ್ಕರನ್ನು ಕಾಡುತ್ತಿದ್ದ ಒಂದು ತೀವ್ರ ಥರದ ರೋಗವೊಂದು ಇದೀಗ ಮೊದಲ ಸಲ ಮಕ್ಕಳಲ್ಲಿ ಕಂಡುಬಂದಿದ್ದು, ಆತಂಕ ಸೃಷ್ಟಿಸಿದೆ. ಅದರಲ್ಲೂ ರಾಜ್ಯದ ಬಾಲಕನೊಬ್ಬನಲ್ಲಿ ಈ ಪ್ರಕರಣ ಕಂಡುಬಂದಿದ್ದು, ಈ ರೋಗ ಮಕ್ಕಳಲ್ಲಿ ಕಂಡುಬಂದಿರುವುದು ಇದೇ ಮೊದಲು ಎನ್ನಲಾಗಿದೆ.

ದಾವಣಗೆರೆಯ ಎಸ್.ಎಸ್.ವೈದ್ಯಕೀಯ ಸಂಶೋಧನಾ ಕೇಂದ್ರ ಈ ಪ್ರಕರಣವನ್ನು ಪತ್ತೆ ಹಚ್ಚಿದೆ. ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ 13 ವರ್ಷದ ಬಾಲಕನಲ್ಲಿ ಈ ರೋಗ ಕಾಣಿಸಿದ್ದು, ಈತ ಇಂಥ ಕಾಯಿಲೆಗೀಡಾದ ಮೊದಲ ಬಾಲಕ ಎನಿಸಿಕೊಂಡಿದ್ದಾನೆ. ಅಕ್ಯೂಟ್ ನೆಕ್ಟ್ರೋಟೈಜಿಂಗ್ ಎನ್ಸೆಫಲೋಪಥಿ ಆಫ್ ಚೈಲ್ಡ್ಹುಡ್ ಎಂಬ ಹೆಸರಿನ ಈ ಕಾಯಿಲೆಯನ್ನು ಚಿಕ್ಕದಾಗಿ ಅನೆಕ್ (ANEC) ಎಂದು ಕರೆಯಲಾಗುತ್ತಿದೆ. ದೊಡ್ಡವರಲ್ಲಿ ಕಾಣಿಸಿಕೊಳ್ಳುವ ಅನೆಕ್ ಹಾಗೂ ಮಿಸ್-ಸಿ (ಮಲ್ಟಿಸಿಸ್ಟಮ್ ಇನ್ಫ್ಲೇಮೇಟರಿ ಸಿಂಡ್ರೋಮ್ ಇನ್ ಚಿಲ್ಡ್ರನ್) ಈಗ ಮಕ್ಕಳಲ್ಲೂ ಕಾಣಿಸಿಕೊಂಡಿರುವುದ ಆತಂಕ ಉಂಟುಮಾಡಿದೆ.
ಇದನ್ನೂ ಓದಿ: ಕರೊನಾ ಮೂರನೇ ಅಲೆಯನ್ನು ತಡೆಯಬಹುದಂತೆ!; ಅದಕ್ಕಾಗಿ ಏನು ಮಾಡಬೇಕು? ಇಲ್ಲಿದೆ ಮಾಹಿತಿ…
ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತಿದ್ದ ಅನೆಕ್ ಈಗ ಮಕ್ಕಳಲ್ಲಿ ಕಂಡುಬಂದಿದೆ. ಈ ಕಾಯಿಲೆಯಿಂದ ಬಹುಅಂಗಾಂಗ ವೈಫಲ್ಯ ಉಂಟಾಗುವ ಸಾಧ್ಯತೆ ಇರುತ್ತದೆ. ಮಾತ್ರವಲ್ಲ ಈ ಪ್ರಕರಣದಲ್ಲಿ ಸಾವು ಸಂಭವಿಸುವ ಸಾಧ್ಯತೆ ಶೇ. 60 ಇರುತ್ತದೆ ಎಂದು ಎಸ್.ಎಸ್. ವೈದ್ಯಕೀಯ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ನಿಜಲಿಂಗಪ್ಪ ಕಾಳಪ್ಪನವರ ತಿಳಿಸಿದ್ದಾರೆ.
ಫೆಬ್ರವರಿಯಿಂದಲೇ ಈ ಕಾಯಿಲೆ ಪತ್ತೆಯಾಗಿದ್ದು, ಮಕ್ಕಳಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದೆ. ದೆಹಲಿ ಏಮ್ಸ್ನಲ್ಲಿ ಈ ಕಾಯಿಲೆ ವಯಸ್ಕರೊಬ್ಬರಲ್ಲಿ ಕಂಡುಬಂದಿತ್ತು. ಕರೊನಾ ಸೋಂಕು ತಗುಲಿ ಗುಣಮುಖರಾದ ಮಕ್ಕಳನ್ನು ಈ ಕಾಯಿಲೆ ಬಾಧಿಸುವ ಸಾಧ್ಯತೆ ಇರುತ್ತದೆ. ಅನೆಕ್ ಪೀಡಿತ ಮಕ್ಕಳಿಗೆ ಇಮ್ಯುನೋಗ್ಲೋಬಿನ್ ಚುಚ್ಚುಮದ್ದೇ ಔಷಧ. ಮಗುವಿನ ತೂಕದ ಆಧಾರದ ಮೇರೆಗೆ ಈ ಚುಚ್ಚುಮದ್ದು ನೀಡಲಾಗುತ್ತದೆ. ಈ ಚಿಕಿತ್ಸೆಗೆ 75 ಸಾವಿರದಿಂದ 1 ಲಕ್ಷ ರೂ. ವರೆಗೆ ವೆಚ್ಚವಾಗುವ ಸಾಧ್ಯತೆ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.
43 ಸಲ ಪಾಸಿಟಿವ್, 7 ಬಾರಿ ಆಸ್ಪತ್ರೆಗೆ ದಾಖಲು; ಈತ ಜಗತ್ತಲ್ಲೇ ಅತಿ ಹೆಚ್ಚು ದಿನ ಕೋವಿಡ್ನಿಂದ ಬಳಲಿದ ವ್ಯಕ್ತಿ!
ಸೀಟ್ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ
ಹೆದರಿ ಓಡಿ ಹೋಗಿದ್ದವರೆಲ್ಲ ಈಕೆಯನ್ನು ನೋಡಿ ಲಸಿಕೆ ಪಡೆದ್ರು; ಊರಿಗೇ ಮಾದರಿ 96ರ ಈ ಆಧಾರ್ ಕುಮಾರಿ!
ಪ್ಯಾನ್ ಕಾರ್ಡ್ಗೆ ಆಧಾರ್ ನಂಬರ್ ಲಿಂಕ್ ಮಾಡಿಲ್ಲವೇ? ಹಾಗಿದ್ದರೆ ನಿಮಗಿದು ಬಹುಶಃ ಕಡೇ ಅವಕಾಶ..