ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋ ರೈಲಿನಲ್ಲಿ ಅಸಭ್ಯ ವರ್ತಿಸಿದ ಯುವಕ-ಯುವತಿಯ ವಿರುದ್ಧ ಪ್ರಯಾಣಿಕರೋರ್ವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ಸಂಚಾರ ನಿಗಮಗೆ ದೂರು ನೀಡಿದ್ದಾರೆ. ನಮ್ಮ ಮೆಟ್ರೋದ ಬಾಗಿಲು ಬಳಿ ಯುವಕ-ಯುವತಿ ನಿಂತು ತಬ್ಬಿಕೊಂಡಿದ್ದು, ಯುವತಿ ಯುವಕನಿಗೆ ಮುತ್ತು ನೀಡುತ್ತಿರುವ ದೃಶ್ಯವನ್ನು ಪ್ರಯಾಣಿಕ ವಿಡಿಯೋ ಮಾಡಿದ್ದಾರೆ.
https://twitter.com/Sam459om/status/1787134569872855179
ಈ ವಿಡಿಯೋವನ್ನು KPSB 52 ಎಂಬ ಎಕ್ಸ್ (ಟ್ವಿಟರ್) ಖಾತೆ ಮೂಲಕ ಪೋಸ್ಟ್ ಮಾಡಲಾಗಿದ್ದು “ನಮ್ಮ ಮೆಟ್ರೋದಲ್ಲಿ ಇದೇನು ಅಸಭ್ಯವರ್ತನೆ” ಎಂದು ಪ್ರಶ್ನಿಸಿದ್ದಾರೆ. ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.
ಪ್ರಜ್ವಲ್ ರೇವಣ್ಣ ಮುಸ್ಲಿಂ ಆಗಿದ್ರೆ, ಸುಮ್ಮನೆ ಇರ್ತಿದ್ರಾ..? ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ ನಟಿ