ಏನಪ್ಪಾ ಇದು! ಫೋನ್ ಓಪನ್ ಮಾಡಿದ್ರೆ ಬರೀ ಇದೇ ಬರುತ್ತೆ; ನಿಮಗೂ ಇದೇ ಅನುಭವ ಅಲ್ವಾ?

Untitled design (98)
Published on

ಬೆಂಗಳೂರು: ಇಂದಿನ ಕಾಲಘಟ್ಟದಲ್ಲಿ ಎಲ್ಲರ ಬಳಿ ಸ್ಮಾರ್ಟ್​ಫೋನ್​ ಇದ್ದೇ ಇದೆ. ಊಟ ಇಲ್ಲದಿದ್ದರೂ ಪರವಾಗಿಲ್ಲ, ಕೈನಲ್ಲಿ ಮೊಬೈಲ್ ಇರಬೇಕು, ಇಂಟರ್​ನೆಟ್​ ಅಂತೂ ಇರಲೇಬೇಕು ಎಂಬುದು ಸದ್ಯ ಬಳಕೆದಾರರ ಮಂತ್ರವಾಗಿ ಬಿಟ್ಟಿದೆ. ಅದರಲ್ಲೂ ಮುಖ್ಯವಾಗಿ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸ್ಮಾರ್ಟ್​ಫೋನ್​ ಬಳಕೆ ಅತೀ ಹೆಚ್ಚಾಗಿಯೇ ಇದೆ. ತಮ್ಮ ದಿನಚರಿಯ ಬಹುಪಾಲು ಸಮಯವನ್ನು ಮೊಬೈಲ್​ನಲ್ಲಿ ಕಳೆಯುವ ಜನರು, ಅಂತರ್ಜಾಲದಲ್ಲಿ ಸದಾ ಸಕ್ರಿಯರಾಗಿರುತ್ತಾರೆ.

ಇಡೀ ಜಗತ್ತಿನಲ್ಲಿ ಯಾವುದೇ ಮೂಲೆಯಲ್ಲಿ ಯಾವುದಾದರೂ ಘಟನೆಗಳು ನಡೆದರೆ ಅದು ಕೇವಲ ಕ್ಷಣಮಾತ್ರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮುಖೇನ ಎಲ್ಲರ ಕೈಬೆರಳಿಗೂ ತಲುಪುತ್ತವೆ. ಕಾಮಿಡಿ, ಅಪಘಾತ, ಸಾಧಕರ ಭಾಷಣ, ಕ್ರೀಡೆ, ಉಪಯುಕ್ತ ಮಾಹಿತಿ, ಸಾರ್ವಜನಿಕ ಸ್ಥಳಗಳಲ್ಲಿ ಮಾಡುವ ರೀಲ್ಸ್​, ಅಪರೂಪ, ವಿಚಿತ್ರ ಘಟನೆಯ ವಿಡಿಯೋಗಳು ಹೀಗೆ ಮುಂತಾದ ವಿಷಯಗಳಿಗೆ ಸಂಬಂಧಿಸಿದ ದೃಶ್ಯಗಳು ಕುತೂಹಲಕಾರಿಯಾಗಿದ್ದರೇ ತಕ್ಷಣವೇ ವ್ಯಾಪಕವಾಗಿ ಹರಿದಾಡುತ್ತವೆ.

ಇಂತಹ ದೃಶ್ಯಗಳನ್ನು ನೋಡುವ ಜನರು, ಅದಕ್ಕೆ ತಮ್ಮ ವಿಧವಿಧವಾದ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ವ್ಯಕ್ತಪಡಿಸುತ್ತಾರೆ. ಒಳ್ಳೆಯ ವಿಷಯಗಳ ವಿಡಿಯೋ ಮೆಚ್ಚಿ, ಅದನ್ನು ಅಧಿಕ ಸಂಖ್ಯೆಯಲ್ಲಿ ಶೇರ್​ ಮಾಡಿ, ಕ್ಷಣಮಾತ್ರದಲ್ಲಿ ವೈರಲ್ ಆಗುವಂತೆ ಮಾಡುತ್ತಾರೆ. ಅದೇ ರೀತಿ ಹಾಸ್ಯಸ್ಪದ ದೃಶ್ಯಗಳನ್ನು ವ್ಯಾಪಕವಾಗಿ ಹಂಚಿಕೊಳ್ಳುವ ಮುಖೇನ ಇಷ್ಟಪಡುತ್ತಾರೆ. ಹೆಚ್ಚೆಚ್ಚು ಶೇರ್​ ಆದಂತಹ ವಿಡಿಯೋಗಳು ನಮಗೆ ಪದೇ ಪದೇ ಸಾಮಾಜಿಕ ಜಾಲತಾಣದ ಮುಖಪುಟದಲ್ಲಿ ಕಾಣಸಿಗುತ್ತವೆ.

ಅದೇ ರೀತಿ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಕರಿಮಾಣಿ ಮಾಲಿಕ ನೀನಲ್ಲ, ರಾಹುಲ್ಲಾ ಹಾಡುಗಳಿಗೆ ಕ್ರಿಕೆಟಿಗ ಕೆ.ಎಲ್​. ರಾಹುಲ್ ಮತ್ತು ಇತರೆ ವ್ಯಕ್ತಿಗಳನ್ನು​ ಸಿಂಕ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ.

ಈ ರೀಲ್ಸ್ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಇಂತಹ ವಿಡಿಯೋಗಳು ಸೋಷಿಯಲ್ ಮೀಡಿಯಾ ಖಾತೆ ತೆರದ ಕೂಡಲೇ ಮೊದಲಿಗೆ ಕಾಣ ಸಿಗುತ್ತಿವೆ. ಇದನ್ನು ಗಮನಿಸಿದ ನೆಟ್ಟಿಗರು, ಇದೆನಪ್ಪಾ ಫೋನ್​ ತೆರದರೆ ಬರೀ ಇದೇ ಬರುತ್ತಿದೆ ಎಂದು ಕಮೆಂಟ್​ ಮೂಲಕ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net