ಪ್ರೇಮಿಗಳ ದಿನದ ಮರುದಿನ ತಾಜ್​ಮಹಲ್​​ ದರ್ಶಿಸಿದ ಸಚಿನ್ ದಂಪತಿ..ಸೆಲ್ಫಿಗೆ ಮುಗಿಬಿದ್ದ ಜನ

sachin
Published on

ನವದೆಹಲಿ: ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ಅಂಜಲಿ ದಂಪತಿ ಗುರುವಾರ ತಾಜ್ ಮಹಲ್‌ಗೆ ಭೇಟಿ ನೀಡಿದ್ದರು.

ಪ್ರೇಮಿಗಳ ದಿನದ ಮರುದಿನವೇ ಉತ್ತರ ಪ್ರದೇಶದ ಆಗ್ರಾ ನಗರದಲ್ಲಿರುವ ಪ್ರೇಮಸೌಧಕ್ಕೆ ಭೇಟಿ ನೀಡಲಾಗಿತ್ತು. ಆಗ್ರಾಕ್ಕೆ ಬಂದ ಸಚಿನ್ ದಂಪತಿಗೆ ಇಲ್ಲಿ ಭವ್ಯ ಸ್ವಾಗತ ಸಿಕ್ಕಿದೆ. ತಾಜ್ ಮಹಲ್ ನೋಡಲು ಬಂದಿದ್ದ ಪ್ರವಾಸಿಗರೆಲ್ಲ ಸಚಿನ್ ನನ್ನು ನೋಡಿ ಸೆಲ್ಫಿ ತೆಗೆದುಕೊಳ್ಳಲು ಪೈಪೋಟಿ ನಡೆಸಿದರು.

ಆದರೆ, ಸಚಿನ್‌ಗೆ ತನ್ನ ಸುತ್ತಲಿನ ಭಾರೀ ಭದ್ರತೆಯ ಮೂಲಕ ಹೋಗಲು ಸಾಧ್ಯವಾಗಲಿಲ್ಲ. ಪ್ರೇಮಿಗಳ ದಿನದ ನಂತರ ಸಚಿನ್ ತೆಂಡೂಲ್ಕರ್ ತಮ್ಮ ಪತ್ನಿ ಅಂಜಲಿ ತೆಂಡೂಲ್ಕರ್ ಅವರೊಂದಿಗೆ ತಾಜ್ ಮಹಲ್ ತಲುಪಿದಾಗ ಅಭಿಮಾನಿಗಳು ಕ್ರಿಕೆಟ್ ದೇವರ ದರ್ಶನ ಪಡೆಯಲು ಮುಗಿಬಿದ್ದರು.

ಭಾರೀ ಭದ್ರತೆಯ ನಡುವೆ ಸಚಿನ್​ ದಂಪತಿ ತಾಜ್ ಮಹಲ್ ವೀಕ್ಷಿಸಿದರು. ಸಚಿನ್ ಮತ್ತು ಅಂಜಲಿ ಅವರು ಡಯಾನಾ ಬೆಂಚ್ ಮೇಲೆ ಒಟ್ಟಿಗೆ ಕುಳಿತು ಚಿತ್ರಗಳನ್ನು ತೆಗೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net