ಮುಂಬೈ: ಬಾಲಿವುಡ್ ನ ಜನಪ್ರಿಯ ನಟ ಹೃತಿಕ್ ರೋಷನ್ ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಅವರು ಇದನ್ನು ತಮ್ಮ ಇನ್ಸ್ಟಾಗ್ರಾಮ್ ಮೂಲಕ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: 4ನೇ ಸ್ಥಾನಕ್ಕೆ ಜಾರಿದ ಜಪಾನ್ ಆರ್ಥಿಕ ವ್ಯವಸ್ಥೆ: ಯೆನ್ ದುರ್ಬಲವಾಗಿದ್ದು ಕಾರಣವೇ?
ಸೊಂಟಕ್ಕೆ ಬೆಲ್ಟ್ ಹಾಕಿಕೊಂಡು ಊರುಗೋಲುಗಳ ಸಹಾಯದಿಂದ ನಿಂತಿರುವ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಈ ಹಿಂದೆ ನಿಮ್ಮಲ್ಲಿ ಎಷ್ಟು ಜನರಿಗೆ ಈ ಊರುಗೋಲು ಮತ್ತು ಗಾಲಿಕುರ್ಚಿಗಳು ಬೇಕಾಗಿದ್ದವು? ಆ ಸಮಯದಲ್ಲಿ ನಿಮ್ಮ ಭಾವನೆ ಏನು? ಎಂದು ಅವರು ಬರೆದಿದ್ದಾರೆ. ಸದ್ಯ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದೇನೆ. ಇದಕ್ಕೆ ಟೈಗರ್ ಶಾಫ್, ವರುಣ್ ಧವನ್ ಮುಂತಾದ ಸ್ಟಾರ್ ಗಳ ಜೊತೆಗೆ ಅಭಿಮಾನಿಗಳು ಸಂದೇಶ ಕಳುಹಿಸುತ್ತಿದ್ದಾರೆ. ಶೀಘ್ರ ಗುಣಮುಖರಾಗಿ ಎಂದು ಹಾರೈಸಿದ್ದಾರೆ.
ಕಾಲಿಗೆ ಗಾಯವಾಗಿರುವ ಕಾರಣ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಇದರೊಂದಿಗೆ ಜೂನಿಯರ್ ಎನ್ ಟಿಆರ್-ಹೃತಿಕ್ ರೋಷನ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಬಿಗ್ ಬಜೆಟ್ ಚಿತ್ರ ವಾರ್-2 ಶೂಟಿಂಗ್ ಮುಂದೂಡಿಕೆಯಾಗುವ ಸಾಧ್ಯತೆ ಇದೆ ಎಂಬ ಸುದ್ದಿ ಬಾಲಿವುಡ್ ಇಂಡಸ್ಟ್ರಿಯಲ್ಲಿ ವೈರಲ್ ಆಗಿದೆ.
ಫೋಟೋದಲ್ಲಿ ಹೃತಿಕ್ ರೋಷನ್ ಅವರನ್ನು ನೋಡಿದರೆ ಅವರಿಗೆ ಗಂಭೀರ ಗಾಯಗಳಾದಂತೆ ಕಾಣುತ್ತಿದೆ. ಅದಕ್ಕೆ ಕಾರಣಗಳನ್ನು ಅವರು ನೀಡಿಲ್ಲ. ಫೈಟರ್ ಶೂಟಿಂಗ್ ಸಮಯದಲ್ಲಿ ಏನಾದರೂ ಅನಾಹುತವಾಗಿರಬಹುದು ಎಂಬ ಮಾತುಗಳು ಅವರ ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.
‘ವಾರ್’ನ ಮೊದಲ ಭಾಗದಲ್ಲಿ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ನಾಯಕರಾಗಿ ನಟಿಸಿದ್ದರು. ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಇದರಿಂದಾಗಿ ಸಿನಿಪ್ರೇಮಿಗಳು ‘ವಾರ್ 2’ ಬಗ್ಗೆ ಆಸಕ್ತಿ ತೋರಿದ್ದಾರೆ. ಈ ಚಿತ್ರವನ್ನು ಅಯನ್ ಮುಖರ್ಜಿ ನಿರ್ದೇಶಿಸಲಿದ್ದಾರೆ. ಈ ಚಿತ್ರಕ್ಕೆ ತಾರಕ್ ಈಗಾಗಲೇ ಡೇಟ್ಸ್ ಕೊಟ್ಟಿದ್ದಾರೆ. ಶೂಟಿಂಗ್ ವೇಳೆ ಹೃತಿಕ್ ರೋಷನ್ ಗಾಯಗೊಂಡಿದ್ದರಿಂದ ಪ್ರಾಜೆಕ್ಟ್ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ಹೃತಿಕ್ ಈ ವರ್ಷ ‘ಫೈಟರ್’ ಚಿತ್ರದ ಮೂಲಕ ಯಶಸ್ಸು ಗಳಿಸಿದ್ದರು. ಸಿದ್ಧಾರ್ಥ್ ಆನಂದ್ ಈ ಚಿತ್ರವನ್ನು ಭಾರತೀಯ ವಾಯುಸೇನೆ ಹಿನ್ನೆಲೆಯಲ್ಲಿ ನಿರ್ದೇಶಿಸಿದ್ದರು. ಇದರಲ್ಲಿ ದೀಪಿಕಾ ಪಡುಕೋಣೆ ನಾಯಕಿ. ಬಾಕ್ಸ್ ಆಫೀಸ್ ನಲ್ಲಿ 340 ಕೋಟಿ ರೂ. ಕಲೆಕ್ಷನ್ ಮಾಡಿದ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಉತ್ತನ ಕಲೆಕ್ಷನ್ ಗಳಿಸಿತ್ತು.