More

    ಐದು ವರ್ಷದಿಂದ ಡೇಟಿಂಗ್​..ಸೀಕ್ರೆಟ್​ ಎಂಗೇಜ್​ಮೆಂಟ್..​ ಮದುವೆ ಹಿಂಟ್​ ಕೊಟ್ಟ ಹೀರೋಯಿನ್​​​!

    ಮುಂಬೈ: ಮಾಡೆಲ್ ಆಗಿ ವೃತ್ತಿ ಜೀವನ ಆರಂಭಿಸಿದ ದೆಹಲಿ ಬೆಡಗಿ ಕೃತಿ ಕರಬಂದ ಕನ್ನಡದ ಜತೆಗೆ ತೆಲುಗಿನಲ್ಲೂ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಆದರೆ ಈಗ ಈ ಚೆಲುವೆ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇಷ್ಟೇ ಆಗಿದ್ದರೆ ಇದು ಸುದ್ದಿಯಾಗುತ್ತಿರಲಿಲ್ಲ, 5ವರ್ಷದಿಂದ ಬಾಲಿವುಡ್ ನಟನನ್ನು ಪ್ರೀತಿಸುತ್ತಿರುವ ಕೃತಿ ಇತ್ತೀಚೆಗೆ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಇವರಿಬ್ಬರ ಸಂಬಂಧ ನಿಜವಾಗಿದೆ ಎಂದು ತಿಳಿದುಬಂದಿದೆ.

    ಇದನ್ನೂ ಓದಿ: ‘ಚೈತನ್ಯ ಮೌನಿ..ಅಖಿಲ್ ಹೈಪರ್ ಆ್ಯಕ್ಟಿವ್’: ಅಮಲಾ ಕಾಮೆಂಟ್ಸ್​..ವೀಡಿಯೋ ವೈರಲ್​

    ಕೃತಿ ಕರಬಂದ ಮತ್ತು ಪುಲಕಿತ್ ಸಾಮ್ರಾಟ್ ನಿಶ್ಚಿತಾರ್ಥವು ಕೆಲವೇ ಆಪ್ತರು ಮತ್ತು ಕುಟುಂಬ ಸದಸ್ಯರ ಉಪಸ್ಥಿತಿಯಲ್ಲಿ ನಡೆಯಿತು. ಇದರಿಂದ ಅವರ ಮದುವೆ ಯಾವಾಗ ಎಂಬ ಚರ್ಚೆ ಶುರುವಾಗಿದೆ.

    ಸದ್ಯದ ಮಾಹಿತಿ ಪ್ರಕಾರ ಈ ಜೋಡಿ ಶೀಘ್ರದಲ್ಲೇ ಮದುವೆಯಾಗಲಿದೆಯಂತೆ. ಪ್ರೇಮಿಗಳ ದಿನದಂದು ಕೃತಿ ಮದುವೆ ಬಗ್ಗೆಯೂ ಸುಳಿವು ನೀಡಿದ್ದಾಳೆ. ಪ್ರೇಮಿಗಳ ದಿನದಂದೇ ಕೃತಿ ತನ್ನ ನಿಶ್ಚಿತ ವರನ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದಲ್ಲದೇ ಮಾರ್ಚ್ ತಿಂಗಳಲ್ಲೇ ನಡೆಯಲಿದೆ ಎಂಬ ಕ್ಯಾಪ್ಶನ್ ಕೂಡ ನೀಡಿದ್ದಾಳೆ. ಹೀಗಾಗಿ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದು, ಮದುವೆ ದಿನಾಂಕದ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ.

    ಏತನ್ಮಧ್ಯೆ.. ಪುಲ್ಕಿತ್ ಸಾಮ್ರಾಟ್ ಮತ್ತು ಕೃತಿ ಕರಬಂದ 2019 ರಿಂದ ಪ್ರೀತಿಯಲ್ಲಿ ಬಿದ್ದಿದ್ದಾರೆ. ಪಾಗಲ್ಪಂತಿ ಚಿತ್ರದ ಸೆಟ್‌ನಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಈ ಜೋಡಿಯು ಪಗಲ್ಪಂತಿ ಮತ್ತು ವೀರೇ ಕಿ ವೆಡ್ಡಿಂಗ್ ಮತ್ತು ತೈಶ್ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಪುಲ್ಕಿತ್ ಸಾಮ್ರಾಟ್ ಕೊನೆಯದಾಗಿ ಫಕ್ರಿ – 3 ರಲ್ಲಿ ಕಾಣಿಸಿಕೊಂಡಿದ್ದರು. ಕೃತಿಯ ಇತ್ತೀಚಿನ ಚಿತ್ರ ರಿಸ್ಕಿ ರೋಮಿಯೋ ಬಿಡುಗಡೆಗೆ ಸಜ್ಜಾಗುತ್ತಿದೆ.

    ಪ್ರೇಮಿಗಳ ದಿನ.. ಪಬ್​ನಲ್ಲಿ ಬೀಯರ್​ ಬಾಟಲ್​ನಿಂದ ಗೆಳೆಯನ ತಲೆ ಒಡೆದ ಹೀರೋಯಿನ್​!? ಹೀಗೆ ಮಾಡಿದ್ದಾರೂ ಯಾಕೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts