More

  ಈ ನಟ ಯಾರೆಂದು ಗೊತ್ತಿಲ್ಲದಿದ್ದರೂ ಇವರ ಡೈಲಾಗ್ ಮಾತ್ರ ಪಕ್ಕಾ ನೆನಪಿರುತ್ತೆ!

  ಬೆಂಗಳೂರು: ನಮ್ಮ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕಲಾವಿದರಿದ್ದಾರೆ. ಒಂದು ಸಿನಿಮಾ ಅಂದಮೇಲೆ ಅಲ್ಲಿ ಎಲ್ಲರ ಪಾತ್ರವರ್ಗವೂ ಬಹಳ ಮುಖ್ಯವಾಗುತ್ತದೆ. ಬೆಳ್ಳಿಪರದೆ ಮೇಲೆ ಬರುವ ಹೀರೋ ಮತ್ತು ಹೀರೋಯಿನ್ ನಮಗೆ ಹೆಚ್ಚಾಗಿ ನೆನಪಿರುತ್ತಾರೆ. ಆದರೆ, ಉಳಿದ ಪಾತ್ರಗಳನ್ನು ಅಷ್ಟು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಕಾರಣ, ಚಿತ್ರದ ನಾಯಕ-ನಾಯಕಿಯ ಹೆಸರು ಮಾತ್ರ ನಮ್ಮೆಲ್ಲರ ಗಮನದಲ್ಲಿ ಉಳಿದಿರುತ್ತದೆ. ಈ ಮಧ್ಯೆ ಕೆಲವೇ ಕೆಲವರು ಮಾತ್ರ ತಮ್ಮ ಸಣ್ಣ ಪಾತ್ರದಿಂದ ದೊಡ್ಡ ಮಟ್ಟದ ಹೆಸರನ್ನು ಮಾಡಿ, ಇಂದಿಗೂ ಅನೇಕ ಸಿನಿಪ್ರೇಕ್ಷಕರ ಮನದಲ್ಲಿ ಬೇರೂರಿ ನೆಲೆಸಿದ್ದಾರೆ. ಅಂತಹ ಕಲಾವಿದರ ಪೈಕಿ ಈ ನಟರು ಕೂಡ ಒಬ್ಬರು.

  ಇದನ್ನೂ ಓದಿ: ದೆಹಲಿ ಚಲೋ ಮೆರವಣಿಗೆ: ಡ್ರೋನ್ ಬಳಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಅಶ್ರುವಾಯು ಶೆಲ್‌ ಬಿಡುಗಡೆ ಮಾಡಲು ವ್ಯವಸ್ಥೆ

  90ರ ದಶಕದಲ್ಲಿ ತೆರೆಗೆ ಬರುತ್ತಿದ್ದ ಪ್ರತಿಯೊಂದು ಕನ್ನಡ ಸಿನಿಮಾಗಳು ಕೂಡ ಒಂದೊಳ್ಳೆ ಕಥೆಯನ್ನು, ಜೀವನಕ್ಕೆ ಬೇಕಾದ ಮೌಲ್ಯಗಳನ್ನು ಆಧರಿಸಿದ ಕಥಾಹಂದರವನ್ನು ಒಳಗೊಂಡಿತ್ತು. ಇಂತಹ ಸಿನಿಮಾಗಳನ್ನು ಚಿತ್ರಮಂದಿರದಲ್ಲಿ ವೀಕ್ಷಿಸುತ್ತಿದ್ದ ಪ್ರೇಕ್ಷಕರು ತಮ್ಮ ಜೀವನಶೈಲಿ, ಬದುಕುವ ರೀತಿಯನ್ನೇ ಬದಲಾಯಿಸಿಕೊಳ್ಳುತ್ತಿದ್ದರು. ಕಾರಣ, ಅಷ್ಟು ಬಲವಾದ ಸಾರಾಂಶ, ಸಂದೇಶವನ್ನು ಅಂದಿನ ಫಿಲಂಗಳು ಸಾರುತ್ತಿತ್ತು.

  ಡಾ. ರಾಜ್​ಕುಮಾರ್​, ವಿಷ್ಣುವರ್ಧನ್, ಅಂಬರೀಷ್, ಅನಂತ್​ನಾಗ್​, ಶಂಕರ್​ನಾಗ್, ಶ್ರೀನಾಥ್​ ಅವರ ಸಿನಿಮಾಗಳು ಹೆಚ್ಚು ಚಾಲ್ತಿಯಲ್ಲಿದ್ದ ಸಮಯದಲ್ಲಿ ಮೂಡಿಬಂದ ಹೊಸಬರ ಚಿತ್ರ, ವಿಭಿನ್ನ ಹಾಗೂ ವಿಶೇಷ ಕಥಾಹಂದರವುಳ್ಳ ಚಿತ್ರಗಳು ಗೆಲವು ಸಾಧಿಸಿ, ಅಪಾರ ಸಂಖ್ಯೆಯ ಸಿನಿಪ್ರೇಕ್ಷಕರನ್ನು ಸೆಳೆಯುತ್ತಿತ್ತು. ಆ ಸಾಲಿನಲ್ಲಿ ಮೇಲ್ಕಂಡ ಫೋಟೋದಲ್ಲಿ ಕಾಣುತ್ತಿರುವ ನಟನ ಚಿತ್ರಗಳು ಕೂಡ ನೋಡುಗರನ್ನು ಮನರಂಜಿಸಿವೆ.

  ಇದನ್ನೂ ಓದಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಬಳಕೆದಾರರಿಗೆ ಒಳ್ಳೆಯ ಸುದ್ದಿ; ಬೆಂಬಲಕ್ಕೆ ಬಂದ ಆಕ್ಸಿಸ್ ಬ್ಯಾಂಕ್

  ಇವರ ಹೆಸರು ಅನೇಕರಿಗೆ ತಿಳಿದಿರದೆ ಇರಬಹುದು. ಆದ್ರೆ, ಸಿನಿಮಾಗಳಲ್ಲಿ ಈ ನಟ ಬಳಸಿದ ಡೈಲಾಗಳನ್ನು ಮಾತ್ರ ಇಂದಿಗೂ ಪ್ರೇಕ್ಷಕರು ಮರೆತಂತಿಲ್ಲ. ಯಾಕಂದ್ರೆ, ಇವರು ಹೇಳಿದ ಆ ಒಂದು ಡೈಲಾಗ್​ ಈಗಲೂ ಸಹ ಅನೇಕರಲ್ಲಿ ಹಾಸ್ಯ ಮೂಡಿಸುತ್ತದೆ. ಬಾಲನಟನಾಗಿ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡ ಭಾನುಪ್ರಕಾಶ್​ ಅವರು, ‘ಸಿಂಹದ ಮರಿ ಸೈನ್ಯ’, ‘ಪುಟಾಣಿ ಏಜೆಂಟ್​ 123’, ‘ಪ್ರಚಂಡ ಪುಟಾಣಿಗಳು’, ‘ಮಕ್ಕಳ ಸೈನ್ಯ’ ಚಿತ್ರಗಳಲ್ಲಿ ನಟಿಸಿ, ಸಿನಿರಸಿಕರಿಂದ ಸೈಎನಿಸಿಕೊಂಡಿದ್ದಾರೆ.

  ಇಂದಿಗೂ ಅವರ “ಚೆನ್ನಾಗಿದೆ….ಚೆನ್ನಾಗಿದೆ” ಡೈಲಾಗ್​ ಮರೆಯಲು ಸಾಧ್ಯವೇ ಇಲ್ಲ. ಭಾನು ಅವರ ಹೆಸರು ತಕ್ಷಣಕ್ಕೆ ನೆನಪಿಗೆ ಬಾರದಿದ್ದರೂ ಅವರ ಈ ಒಂದು ಡೈಲಾಗ್​ ಮಾತ್ರ ಕನ್ನಡಿಗರಿಗೆ ಚಿರಪರಿಚಿತ ಎಂದೇ ಹೇಳಬಹುದು. ಬಾಲನಟರಾಗಿ ಅಂದು ನಮ್ಮನ್ನೆಲ್ಲಾ ಮನರಂಜಿಸಿದ ಭಾನುಪ್ರಕಾಶ್​, ಬೇಬಿ ಶ್ಯಾಮಿಲಿ, ಬೇಬಿ ಇಂದಿರಾ ಹೀಗೆ ಮುಂತಾದ ಕಲಾವಿದರು ಕನ್ನಡ ಚಿತ್ರಪ್ರೇಮಿಗಳ ಮನದಲ್ಲಿ ಸದಾ ಉಳಿದಿರುತ್ತಾರೆ.

  ಈ ನಟನ ಮೊದಲ ಪೇಮೆಂಟ್​ ಕೇವಲ 50 ರೂ.! ಇಂದು ಅತಿ ಹೆಚ್ಚು ಸಂಭಾವನೆ ಪಡೆಯುವ ಕನ್ನಡದ ಸ್ಟಾರ್​…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts