More

    ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಬಳಕೆದಾರರಿಗೆ ಒಳ್ಳೆಯ ಸುದ್ದಿ; ಬೆಂಬಲಕ್ಕೆ ಬಂದ ಆಕ್ಸಿಸ್ ಬ್ಯಾಂಕ್

    ನವದೆಹಲಿ: ಈ ಸಮಯದಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​​​ಗೆ ದೊಡ್ಡ ಬಿಕ್ಕಟ್ಟು ಎದುರಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಆಕ್ಸಿಸ್ ಬ್ಯಾಂಕ್, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಗೆ ಜೀವಸೆಲೆಯಾಗಿ ಬಂದಿದೆ. ಈ ವಿಷಯ ಸಂಬಂಧ ಆಕ್ಸಿಸ್ ಬ್ಯಾಂಕ್ ಎಂಡಿ ಮತ್ತು ಸಿಇಒ ಅಮಿತಾಭ್ ಚೌಧರಿ ಅವರು, ಸೆಂಟ್ರಲ್ ಬ್ಯಾಂಕ್ ಅನುಮತಿ ನೀಡಿದರೆ ಪೇಟಿಎಂ ಜೊತೆ ಕೆಲಸ ಮಾಡಲು ಸಂಪೂರ್ಣವಾಗಿ ಸಿದ್ಧ ಎಂದು ಹೇಳಿದ್ದಾರೆ.

    ನಮಗೆ ಪೇಟಿಎಂನೊಂದಿಗೆ ಕೆಲಸ ಮಾಡಲು ಅನುಮತಿಸಿದರೆ ನಾವು ಖಂಡಿತವಾಗಿಯೂ ಅವರೊಂದಿಗೆ ಕೆಲಸ ಮಾಡುತ್ತೇವೆ ಎಂದು ಚೌಧರಿ ಹೇಳಿದ್ದಾರೆ. ಪೇಟಿಎಂ ಬ್ರ್ಯಾಂಡ್ ಅನ್ನು ಯುಪಿಐ ಅಪ್ಲಿಕೇಶನ್‌ನಂತೆ ನಡೆಸುತ್ತಿರುವ One97 ಕಮ್ಯುನಿಕೇಷನ್ಸ್ ಲಿಮಿಟೆಡ್, ಸದ್ಯಕ್ಕೆ ಯಾವುದೇ ಇತರ ವಾಣಿಜ್ಯ ಬ್ಯಾಂಕ್‌ಗಳೊಂದಿಗೆ ಯಾವುದೇ ಒಪ್ಪಂದವನ್ನು ಹೊಂದಿಲ್ಲ.

    ಪೇಟಿಎಂ ಜೊತೆ ಮಾತುಕತೆ ನಡೆಯುತ್ತಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಈ ವಲಯದ ಪ್ರಮುಖ ಕಂಪನಿ ಎಂದು ಅರ್ಜುನ್ ಚೌಧರಿ ಬಣ್ಣಿಸಿದರು. ಆಕ್ಸಿಸ್ ಬ್ಯಾಂಕ್ ಮತ್ತು ಹುರುನ್ ರಚಿಸಿದ ಹುರುನ್ ಇಂಡಿಯಾ 500 ಪಟ್ಟಿಯನ್ನು ಬಿಡುಗಡೆ ಮಾಡುವಾಗ ಅವರು ಇದರ ಬಗ್ಗೆ ಮಾತನಾಡಿದರು.

    ಆಕ್ಸಿಸ್ ಬ್ಯಾಂಕ್‌ಗೆ ಮೊದಲು, ಎಚ್‌ಡಿಎಫ್‌ಸಿ ಬ್ಯಾಂಕ್‌ನ ಪರಾಗ್ ರಾವ್ ಸಹ ಪೇಟಿಎಂ ಜೊತೆ ಮಾತುಕತೆಯನ್ನು ಖಚಿತಪಡಿಸಿದ್ದಾರೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಜೊತೆಯಲ್ಲಿ ಕೆಲಸ ಮಾಡುವ ಇಚ್ಛೆಯನ್ನೂ ವ್ಯಕ್ತಪಡಿಸಿದ್ದರು. ಆರ್‌ಬಿಐ ನಿರ್ಧಾರದ ನಂತರ ಹೆಚ್ಚಿನ ಜನರು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಅಪ್ಲಿಕೇಶನ್‌ಗೆ ಸೇರಿದ್ದಾರೆ ಎಂದು ಅವರು ಹೇಳಿದ್ದರು.

    ಮತ್ತೊಂದು ಹೊಡೆತ…ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ ನಿರ್ದೇಶಕ ರಾಜೀನಾಮೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts