More

    ರೂ. 404ರಿಂದ 27ಕ್ಕೆ ಕುಸಿದ ಬ್ಯಾಂಕ್​ ಷೇರು ಬೆಲೆ: ತ್ರೈಮಾಸಿಕ ಲಾಭ ಹೆಚ್ಚಾಗುತ್ತಿದ್ದಂತೆಯೇ ಸ್ಟಾಕ್​ ಬೆಲೆ ಜಿಗಿತ

    ಮುಂಬೈ: ಮುಂದಿನ ದಿನಗಳಲ್ಲಿ ಯೆಸ್ ಬ್ಯಾಂಕ್ ಷೇರುಗಳ ಬೆಲೆ 32 ರೂ. ತಲುಪಬಹುದು. ಬ್ಯಾಂಕಿನ ಫಲಿತಾಂಶಗಳು ಉತ್ತಮವಾಗಿವೆ. ಯೆಸ್ ಬ್ಯಾಂಕ್ ತನ್ನ ನಾಲ್ಕನೇ ತ್ರೈಮಾಸಿಕ ಫಲಿತಾಂಶಗಳನ್ನು ಶನಿವಾರ ಪ್ರಕಟಿಸಿದೆ. ಈ ಪ್ರಕಟಣೆಯ ನಂತರ, ಯೆಸ್ ಬ್ಯಾಂಕ್ ಷೇರುಗಳ ಬೆಲೆ ಸೋಮವಾರ ಬೆಳಗ್ಗೆ 27.50 ರೂಪಾಯಿಯಿಂದ ಪ್ರಾರಂಭವಾಯಿತು. ಅಲ್ಲದೆ, ಕೆಲವೇ ನಿಮಿಷಗಳಲ್ಲಿ 8 ಶೇಕಡಾ ಜಿಗಿದು ಪ್ರತಿ ಷೇರಿಗೆ 28.55 ರೂಪಾಯಿಗೆ ತಲುಪಿತು. ಕಳೆದ ಒಂದು ತಿಂಗಳಲ್ಲಿ ಯೆಸ್ ಬ್ಯಾಂಕ್ ಷೇರುಗಳ ಬೆಲೆ ಶೇಕಡಾ 13 ರಷ್ಟು ಏರಿದೆ. ಕಳೆದ ಆರು ತಿಂಗಳಲ್ಲಿ ಶೇಕಡಾ 73 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಅಲ್ಲದೆ, ಈ ವರ್ಷದಲ್ಲಿ ಇದುವರೆಗೆ ಶೇ. 22ರಷ್ಟು ಏರಿಕೆಯಾಗಿದೆ. ಯೆಸ್ ಬ್ಯಾಂಕ್ ಷೇರಿನ 52 ವಾರಗಳ ಗರಿಷ್ಠ ಬೆಲೆ ರೂ. 32.85 ಇದೆ. ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆ ರೂ. 404 ಹಾಗೂ ಕನಿಷ್ಠ ಬೆಲೆ ರೂ. 5.65 ಇದೆ.

    ಷೇರು ಮಾರುಕಟ್ಟೆ ತಜ್ಞರ ಪ್ರಕಾರ, 2024 ರ ನಾಲ್ಕನೇ ತ್ರೈಮಾಸಿಕದಲ್ಲಿ ಯೆಸ್ ಬ್ಯಾಂಕ್‌ನ ಬಲವಾದ ಫಲಿತಾಂಶಗಳಿಂದಾಗಿ, ಅದರ ಷೇರುಗಳ ಬೆಲೆ ಈಗ ಏರಿಕೆ ಕಾಣುತ್ತಿದೆ. 24 ರೂಪಾಯಿಯ ಸ್ಟಾಪ್ ಲಾಸ್​ ಕಾಯ್ದುಕೊಂಡು ಈ ಬ್ಯಾಂಕ್​ ಷೇರುಗಳನ್ನು ಹೊಂದಲು ತಜ್ಞರು ಶಿಫಾರಸು ಮಾಡಿದ್ದಾರೆ.

    ಚಾಯ್ಸ್ ಬ್ರೋಕಿಂಗ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುಮೀತ್ ಬಗಾಡಿಯಾ, “ಯೆಸ್ ಬ್ಯಾಂಕ್ ಷೇರುಗಳು ಪ್ರತಿ ಷೇರಿಗೆ ರೂ. 24 ರಂತೆ ಬಲವಾದ ನೆಲೆಯನ್ನು ಪಡೆದುಕೊಂಡಿವೆ. ಈ ಷೇರುಗಳು ಈ ಮಟ್ಟಕ್ಕಿಂತ ಕೆಳಕ್ಕೆ ಹೋದರೆ, ಅದು ಕುಸಿಯಬಹುದು. ಮೇಲ್ಮುಖವಾಗಿ ರೂ. 30 ರಿಂದ ರೂ. 32 ವಲಯದಲ್ಲಿ ಪ್ರತಿರೋಧ ಎದುರಿಸುತ್ತಿದೆ. ಈ ಪ್ರತಿರೋಧ ವಲಯವನ್ನು ಮುರಿದ ನಂತರ, ನಾವು ಯೆಸ್ ಬ್ಯಾಂಕ್ ಷೇರುಗಳಲ್ಲಿ ಬಲವಾದ ರ್ಯಾಲಿಯನ್ನು ನಿರೀಕ್ಷಿಸಬಹುದು” ಎಂದು ಹೇಳಿದ್ದಾರೆ.

    ಯೆಸ್ ಬ್ಯಾಂಕ್‌ನ ನಾಲ್ಕನೇ ತ್ರೈಮಾಸಿಕ ಫಲಿತಾಂಶಗಳ ಕುರಿತು ಮಾತನಾಡುತ್ತಾ, ಯೆಸ್ ಬ್ಯಾಂಕ್ ಕಳೆದ ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ರೂ. 451 ಕೋಟಿ ನಿವ್ವಳ ಲಾಭವನ್ನು ವರದಿ ಮಾಡಿದೆ. ಒಂದು ವರ್ಷದ ಹಿಂದಿನ ರೂ. 202 ಕೋಟಿಗೆ ಹೋಲಿಸಿದರೆ ಇದು ಶೇಕಡಾ 123 ಹೆಚ್ಚಳವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts