More

    ಮಾಸ್​ ಸಿಕ್​ ಲೀವ್​ ಪಡೆದು ಮೊಬೈಲ್​ ಸ್ವಿಚ್​ ಆಫ್​! ಏರ್​ ಇಂಡಿಯಾದ 70ಕ್ಕೂ ಹೆಚ್ಚು ವಿಮಾನ ಹಾರಾಟ ರದ್ದು

    ನವದೆಹಲಿ: ಕ್ಯಾಬಿನ್​ ಸಿಬ್ಬಂದಿ ಸಾಮೂಹಿಕವಾಗಿ “ಅನಾರೋಗ್ಯ ರಜೆ” ತೆಗೆದುಕೊಂಡ ಪರಿಣಾಮ ಏರ್​ ಇಂಡಿಯಾ ಎಕ್ಸ್​ಪ್ರೆಸ್​ನ 70ಕ್ಕೂ ಅಧಿಕ ವಿಮಾನಗಳ ಹಾರಾಟ ಬುಧವಾರ ರದ್ದಾಗಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.

    ಏರ್​ ಇಂಡಿಯಾ ಎಕ್ಸ್​ಪ್ರೆಸ್​ನ ಸುಮಾರು 300 ಹಿರಿಯ ಕ್ಯಾಬಿನ್ ಸಿಬ್ಬಂದಿ ಕೊನೆಯ ಗಳಿಗೆಯಲ್ಲಿ ಅನಾರೋಗ್ಯ ರಜೆ ತೆಗೆದುಕೊಂಡು ತಮ್ಮ ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿರುವುದರಿಂದ 79 ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.

    ಈ ಕ್ಷಣದವರೆಗೂ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮ್ಯಾನೇಜ್‌ಮೆಂಟ್ ತನ್ನ ಸಿಬ್ಬಂದಿಯನ್ನು ತಲುಪಲು ಪ್ರಯತ್ನಿಸುತ್ತಿದೆ. ಆದರೆ, ಎಲ್ಲರು ನಾಟ್​ ರೀಚಬಲ್​ ಆಗಿದ್ದಾರೆ. ಟಾಟಾ ಗ್ರೂಪ್ ಒಡೆತನದ ಏರ್‌ಲೈನ್‌ನಲ್ಲಿ ಹೊಸ ಉದ್ಯೋಗ ಅವಧಿಯನ್ನು ಪ್ರತಿಭಟಿಸುತ್ತಿರುವುದಾಗಿ ತಿಳಿದುಬಂದಿದೆ.

    ನಮ್ಮ ಕ್ಯಾಬಿನ್ ಸಿಬ್ಬಂದಿಯ ಒಂದು ವಿಭಾಗವು ಕೊನೆಯ ಗಳಿಗೆಯಲ್ಲಿ ಅನಾರೋಗ್ಯಕ್ಕೀಡಾಗಿರುವುದಾಗಿ ಹೇಳಿದೆ. ಕಳೆದ ರಾತ್ರಿಯಿಂದ ಅನಾರೋಗ್ಯ ರಜೆ ತೆಗೆದುಕೊಳ್ಳಲು ಪ್ರಾರಂಭಿಸಿದರು. ಇದರಿಂದಾಗಿ ವಿಮಾನ ವಿಳಂಬ ಮತ್ತು ರದ್ದತಿಯಾಗಿದೆ. ಸಿಬ್ಬಂದಿಯ ಈ ದಿಢೀರ್ ನಡೆಯ ಹಿಂದಿರುವ ಕಾರಣಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ಅತಿಥಿಗಳಿಗೆ ಉಂಟಾಗುವ ಯಾವುದೇ ಅನಾನುಕೂಲತೆಯನ್ನು ಶಮನ ಮಾಡಲು ನಮ್ಮ ತಂಡಗಳು ಸಕ್ರಿಯವಾಗಿವೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ತಿಳಿಸಿದ್ದಾರೆ.

    ಹಲವಾರು ಪ್ರಯಾಣಿಕರು ತಮ್ಮ ಸಾಮಾಜಿಕ ಜಾಲತಾಣ ವೇದಿಕೆ ಮೂಲಕ ವಿಮಾನಗಳ ಹಠಾತ್ ರದ್ದತಿಯ ಬಗ್ಗೆ ದೂರು ನೀಡಿದ್ದಾರೆ. ರದ್ದತಿ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ತುಂಬಾ ಬೇಸರವಾಯಿತು ಎಂದು ಪ್ರಯಾಣಿಕರೊಬ್ಬರು ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದರ ನಡುವೆ ಏರ್​ ಇಂಡಿಯಾ ಕೂಡ ಕ್ಷಮೆಯಾಚಿಸಿದೆ.

    ಈ ಅನಿರೀಕ್ಷಿತ ಅಡಚಣೆಗಾಗಿ ನಾವು ನಮ್ಮ ಅತಿಥಿಗಳ ಬಳಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ ಮತ್ತು ಪ್ರಸ್ತುತ ಪರಿಸ್ಥಿತಿಯು ನಾವು ಒದಗಿಸುವ ಸೇವೆಯ ಗುಣಮಟ್ಟವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಒತ್ತಿಹೇಳುತ್ತೇವೆ. ವಿಮಾನ ಪ್ರಯಾಣದ ದಿಢೀರ್​ ರದ್ದತಿಯಿಂದ ಸಮಸ್ಯೆಗೊಳಗಾದ ಅತಿಥಿಗಳಿಗೆ ಅಥವಾ ಪ್ರಯಾಣಿಕರಿಗೆ ಪೂರ್ಣ ಹಣ ಮರುಪಾವತಿ ಅಥವಾ ಪ್ರಯಾಣಕ್ಕೆ ಬದಲಿ ದಿನಾಂಕವನ್ನು ನೀಡಲಾಗುವುದು ಎಂದು ಏರ್‌ಲೈನ್ಸ್ ತಿಳಿಸಿದೆ. (ಏಜೆನ್ಸೀಸ್​)

    ನಟಿ ಸಮಂತಾ ಬೆತ್ತಲೆ ಫೋಟೋ ವೈರಲ್​! ಅಪ್ಪಟ್ಟ ಅಭಿಮಾನಿ ತೆರೆದಿಟ್ಟ ಅಸಲಿ ಸತ್ಯ ಇದು

    ಮಂಜುಮ್ಮೇಲ್​ ಬಾಯ್ಸ್​: ಇವರೇ ನೋಡಿ ಡೇಂಜರಸ್​ ಗುಣ ಗುಹೆಯಲ್ಲಿ ಬಿದ್ದು ಬದುಕುಳಿದ ನಿಜವಾದ ಸುಭಾಷ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts