More

    ಟೇಕಾಫ್ ಆಗುವ ವೇಳೆಯೇ ಕಳಚಿ ಬಿತ್ತು ವಿಮಾನದ ಚಕ್ರ…! ವಿಡಿಯೋ ವೈರಲ್​

    ಸ್ಯಾನ್ ಫ್ರಾನ್ಸಿಸ್ಕೊ: ಆ ವಿಮಾನ ಪ್ರಯಾಣಿಕರನ್ನು ಹೊತ್ತು ಟೇಕಾಫ್ ಆಗಿತ್ತು. ಪ್ರಯಾಣಿಕರು ವಿಮಾನ ಟೇಕಾಫ್ ಆಗುವಾಗ ಕಾಣುವ ಹೊರಗಿನ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಟೇಕಾಫ್​ ಆದ ಕೆಲವೇ ಕ್ಷಣಗಳಲ್ಲಿ ವಿಮಾನದ ಹಿಂದಿನ ಚಕ್ರ ಕಳಚಿ ಬಿದ್ದಿರುವ ಘಟನೆ ಮೊಬೈಲ್​ನಲ್ಲಿ ಸೆರೆಯಾಗಿದೆ.!

    ಯುನೈಟೆಡ್ ಏರ್‌ಲೈನ್ಸ್‌ನ ಬೋಯಿಂಗ್ 777 ವಿಮಾನವು ಭಾರಿ ಅಪಘಾತಕ್ಕೀಡಾಗಿದೆ. ಜಪಾನ್‌ಗೆ ಹೊರಟಿದ್ದ ಯುನೈಟೆಡ್ ಏರ್‌ಲೈನ್ಸ್ ಜೆಟ್‌ಲೈನರ್ ಸ್ಯಾನ್ ಫ್ರಾನ್ಸಿಸ್ಕೋದಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಹಿಂಭಾಗದ ಲ್ಯಾಂಡಿಂಗ್ ಗೇರ್‌ನಲ್ಲಿ ಟೈರ್ ಸ್ಫೋಟ ಸಂಭವಿಸಿ ಟೈರ್ ಹಾರಿ ಕಳಚಿ ನೆಲಕ್ಕೆ ಬಿದ್ದಿದೆ.

    ಇದನ್ನೂ ಓದಿ:ಮಹಾಶಿವರಾತ್ರಿ ಮೆರವಣಿಗೆಯಲ್ಲಿ ವಿದ್ಯುತ್ ಸ್ಪರ್ಶಿಸಿ 14 ಮಕ್ಕಳ ಮೃತ್ಯು

    ವಿಮಾನದಲ್ಲಿ ಅನುಭವಿ ಪೈಲಟ್‌ಗಳು ಇದ್ದಿದ್ದರಿಂದ ಯಾವುದೇ ಅನಾಹುತ ಸಂಭವಿಸಿರಲಿಲ್ಲ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. ಟೈರ್ ಹಾರಿಹೋಗಿರುವುದನ್ನು ಅರಿತ ಪೈಲಟ್‌ ವಿಮಾನವನ್ನು ಸುರಕ್ಷಿತವಾಗಿ ಲಾಸ್ ಏಂಜಲೀಸ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದರು. ಆತಂಕದಲ್ಲಿದ್ದ ಪ್ರಮಾಣಿಕರು ನಿಟ್ಟುಸಿರುಬಿಟ್ಟಿದ್ದಾರೆ. ಈ ಬೋಯಿಂಗ್​ ವಿಮಾನದಲ್ಲಿ 235 ಪ್ರಯಾಣಿಕರು ಮತ್ತು 14 ಸಿಬ್ಬಂದಿ ಪ್ರಯಾಣ ಮಾಡುತ್ತಿದ್ದರು.

    ಲಾಸ್ ಏಂಜಲೀಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅತ್ಯಾಧುನಿಕ ಅಗ್ನಿಶಾಮಕ ಸಾಧನಗಳು ಲಭ್ಯವಿದ್ದು. ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ಕ್ರಮ ಕೈಗೊಳ್ಳಲಾಗಿದೆ. ಇದರ ಪರಿಣಾಮವಾಗಿ ಬೋಯಿಂಗ್ 777 ವಿಮಾನವು ರನ್ ವೇಯಲ್ಲಿ ನಿಧಾನವಾಗಿ ಇಳಿದಿದೆ. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗುತ್ತಿದ್ದಂತೆ ಪ್ರಯಾಣಿಕರು ಹಾಗೂ ವಿಮಾನ ನಿಲ್ದಾಣದ ಸಿಬ್ಬಂದಿ ಹರ್ಷಗೊಂಡಿದ್ದಾರೆ.

    ಟೇಕಾಫ್ ಆಗುವ ವೇಳೆಯೇ ಕಳಚಿ ಬಿತ್ತು ವಿಮಾನದ ಚಕ್ರ...! ವಿಡಿಯೋ ವೈರಲ್​

    ವಿಮಾನವು ಹಾರಾಡುವ ವೇಳೆ ಹಾರಿಹೋದ ಟೈರ್ ನೇರವಾಗಿ ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಕಾರಿನ ಮೇಲೆ ಬಿದ್ದಿದೆ. ಕಾರಿನ ಮಧ್ಯ ಮತ್ತು ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿ ಯಾರೂ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಆದರೆ, ವಿಮಾನದಿಂದ ಟೈರ್ ಬೀಳುವ ವೇಳೆ ಕಾರು ಜಖಂಗೊಂಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಘಟನೆ ಕುರಿತು ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ಘಟನೆಯ ಬಗ್ಗೆ ತನಿಖೆ ನಡೆಸಲಿದೆ.

    ಕೇದಾರನಾಥ ದರ್ಶನಕ್ಕೆ ದಿನಾಂಕ ನಿಗದಿ: ಈ ದಿನದಿಂದ ದೇಗುಲಕ್ಕೆ ಭಕ್ತರಿಗೆ ಪ್ರವೇಶ ಆರಂಭ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts