More

    ವಿಮಾನದಲ್ಲಿ ವಿಷಕಾರಿ ದ್ರವ ಸೇವನೆ: ಸಂಚು ನಡೆದಿರುವ ಶಂಕೆ, ದೂರು ದಾಖಲಿಸಿದ ಮಯಾಂಕ್​ ಅಗರ್ವಾಲ್​

    ನವದೆಹಲಿ: ಕರ್ನಾಟಕ ರಾಜ್ಯ ಕ್ರಿಕೆಟ್ ತಂಡದ ನಾಯಕ ಮಯಾಂಕ್ ಅಗರ್ವಾಲ್ ರಣಜಿ ಟ್ರೋಫಿ ಪಂದ್ಯ ಆಡಿದ ಬಳಿಕ ತಂಡದೊಂದಿಗೆ ಅಗರ್ತಲದಿಂದ ಸೂರತ್‌ಗೆ ಪ್ರಯಾಣ ಬೆಳೆಸುವಾಗ ವಿಮಾನದಲ್ಲಿ ನೀರು ಕುಡಿದ ಬೆನ್ನಲ್ಲೇ ತೀವ್ರ ಅಸ್ವಸ್ಥಗೊಂಡು, ತ್ರಿಪುರದಲ್ಲಿ ಸ್ಥಳಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಯಾಂಕ್ ಅವರಿಗೆ ತ್ರೀವ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರ ನಡುವೆಯೇ ಮಯಾಂಕ್​ ಅವರು ತಮ್ಮ ಮ್ಯಾನೇಜರ್​ ಮೂಲಕ ದೂರು ದಾಖಲಿಸಿದ್ದಾರೆ.

    ಮಯಾಂಕ್​ ಅವರು ವಿಮಾನದಲ್ಲಿ ತಮ್ಮ ಸೀಟಿನ ಬಳಿಯಿದ್ದ ಆ್ಯಸಿಡ್​ ರೀತಿಯ ದ್ರವವನ್ನು ಸೇವಿಸಿದ್ದಾರೆ ಎನ್ನಲಾಗಿದೆ. ಇದರ ಹಿಂದೆ ಮೋಸದಾಟ ಇರಬಹುದು ಎಂದು ಶಂಕಿಸಿ ಮಯಾಂಕ್​ ಪ್ರಕರಣ ದಾಖಲಿಸಿದ್ದಾರೆ.

    ಈ ಬಗ್ಗೆ ಪಶ್ಚಿಮ ತ್ರಿಪುರಾದ ಪೊಲೀಸ್​ ವರಿಷ್ಠಾಧಿಕಾರಿ ಕಿರಣ್​ ಕುಮಾರ್​ ಮಾತನಾಡಿ, ಮಯಾಂಕ್ ಅಗರ್ವಾಲ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ. ಅವರ ಆರೋಗ್ಯ ಸ್ಥಿರವಾಗಿದೆ. ಘಟನೆಯ ಬಗ್ಗೆ ಅವರ ಮ್ಯಾನೇಜರ್ ಎನ್‌ಸಿಸಿಪಿಎಸ್ (ಹೊಸ ರಾಜಧಾನಿ ಸಂಕೀರ್ಣ ಪೊಲೀಸ್ ಠಾಣೆ) ಅಡಿಯಲ್ಲಿ ಪ್ರಕರಣದ ತನಿಖೆಗಾಗಿ ನಿರ್ದಿಷ್ಟ ದೂರು ದಾಖಲಿಸಿದ್ದಾರೆ ಎಂದು ಮಾಹಿತಿ ನೀಡಿದರು.

    ವಿಮಾನದಲ್ಲಿ ತನ್ನ ಸೀಟಿನಲ್ಲಿ ಮಯಾಂಕ್​ ಕುಳಿತಿದ್ದ ಅವರ ಎದುರಿಗೆ ನೀರಿನ ಒಂದು ಪೌಚ್​ ಇತ್ತು. ಅದರಲ್ಲಿ ಸ್ವಲ್ಪವನ್ನು ಮಯಾಂಕ್​ ಕುಡಿದರು. ತಕ್ಷಣ ಬಾಯಿಯಲ್ಲಿ ಕಿರಿಕಿರಿ ಅನುಭವ ಉಂಟಾಯಿತು ಮತ್ತು ಮಾತನಾಡಲು ಅವರಿಂದ ಸಾಧ್ಯವಾಗಲಿಲ್ಲ. ಹೀಗಾಗಿ ತಕ್ಷಣ ಅವರನ್ನು ಐಎಲ್​ಎಸ್​ ಆಸ್ಪತ್ರೆಗೆ ಕರೆತರಲಾಯಿತು. ವೈದ್ಯರು ಪರೀಕ್ಷಿಸಿದಾಗ ಬಾಯಿಯಲ್ಲಿ ಊತ ಮತ್ತು ಹುಣ್ಣುಗಳಿದ್ದವು. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಸಮಸ್ಯೆ ಇಲ್ಲ. ಆರೋಗ್ಯ ಸ್ಥಿರವಾಗಿದೆ ಎಂದು ಮ್ಯಾನೇಜರ್​ ಹೇಳಿದರೆಂದು ಎಸ್​ಪಿ ಮಾಹಿತಿ ನೀಡಿದ್ದಾರೆ.

    ಸೋಮವಾರ ತ್ರಿಪುರ ವಿರುದ್ಧ ಗೆಲುವು ದಾಖಲಿಸಿದ ಕರ್ನಾಟಕ ತಂಡ, ರೈಲ್ವೇಸ್ ವಿರುದ್ಧದ ತನ್ನ ಮುಂದಿನ ಪಂದ್ಯಕ್ಕಾಗಿ ಮಂಗಳವಾರ ಸೂರತ್‌ಗೆ ಪ್ರಯಾಣಿಸಲು ದೆಹಲಿ ವಿಮಾನ ಏರಿತು. ತಂಡದೊಂದಿಗೆ ವಿಮಾನ ಹತ್ತಿದ ಮಯಾಂಕ್ ಅಗರ್ವಾಲ್ ಸೀಟಿನ ಮುಂಭಾಗದಲ್ಲಿದ್ದ ನೀರು ಕುಡಿದಿದ್ದಾರೆ. ತಕ್ಷಣವೇ ಆರೋಗ್ಯದಲ್ಲಿ ಏರುಪೇರಾಗಿದ್ದು, ವಿಮಾನದಲ್ಲಿ ಒಂದೆರಡು ಬಾರಿ ವಾಂತಿ ಮಾಡಿಕೊಂಡಿದ್ದಾರೆ. ಕೂಡಲೆ ಮಯಾಂಕ್ ಅವರನ್ನು ವಿಮಾನದಿಂದ ಕೆಳಗೆ ಕರೆತಂದು ಅಗರ್ತಲದ ಐಎಲ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ವೈದ್ಯರು ಕೆಲ ಪರೀಕ್ಷೆಗಳಿಗೆ ಒಳಪಡಿಸಿದ್ದಾರೆ ಎಂದು ತ್ರಿಪುರ ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್​)

    ನೀರೆಂದು ಭಾವಿಸಿ ಆ್ಯಸಿಡ್ ಕುಡಿದ್ರಾ? ಹೇಗಿದ್ದಾರೆ ಮಯಾಂಕ್​? ಒಂದೇ ಒಂದು ಮಾತು ಬಾಯಿಂದ ಹೊರ ಬಂದಿಲ್ಲ

    ಲೋಕಸಭಾ ಚುನಾವಣೆ 2024: ಬೊಮ್ಮಾಯಿ ಸ್ಪರ್ಧೆ ಫಿಕ್ಸಾ? ಯಾರಿಗೆ ‘ಕೈ’ ಟಿಕೆಟ್​? ಯಾರೆಲ್ಲ ಆಕಾಂಕ್ಷಿಗಳಿದ್ದಾರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts